ದೇಶ

'ಭಾರತೀಯ ಸೇನೆ ಲಾಹೋರ್ ಗೂ ನುಗ್ಗಿ ಹೊಡೆದುರುಳಿಸಬಲ್ಲದು ಎಂಬುದು ಸರ್ಜಿಕಲ್ ದಾಳಿಯಿಂದ ಸಾಬೀತು

Srinivasamurthy VN
ನವದೆಹಲಿ: ಭಾರತೀಯ ಸೇನೆ ಕೇವಲ ಪಾಕ್ ಆಕ್ರಮಿತ ಕಾಶ್ಮೀರ ಮಾತ್ರವಲ್ಲ, ಲಾಹೋರ್ ಗೂ ನುಗ್ಗಿ ತನ್ನ ಶುತೃಗಳನ್ನು ಹೊಡೆದುರುಳಿಸಬಲ್ಲದು ಎಂಬುದು ಸರ್ಜಿಕಲ್ ದಾಳಿಯಿಂದ ಸಾಬೀತಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ಎಸ್) ಹೇಳಿದೆ.
ಈ ಬಗ್ಗೆ ಮಾತನಾಡಿರುವ ಆರ್ ಎಸ್ ಎಸ್ ನ ಮುಖಂಡ ಇಂದ್ರೇಶ್ ಕುಮಾರ್ ಅವರು ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ಭಾರತೀಯ ಸೇನೆ ಲಾಹೋರ್ ಗೂ ನುಗ್ಗಿ ತನ್ನ ಶುತೃಗಳನ್ನು ಹೊಡೆದುರುಳಿಸಬಲ್ಲದು ಎಂಬ ಸಂದೇಶವನ್ನು ಸರ್ಜಿಕಲ್ ದಾಳಿಯಿಂದ ನೀಡಿದೆ ಎಂದು ಹೇಳಿದ್ದಾರೆ. ಭಾರತ ಇಚ್ಛಿಸಿದರೆ, ಪಾಕಿಸ್ತಾನದ ಯಾವುದೇ ಮೂಲೆಗೂ ನುಗ್ಗಿ ಉಗ್ರರನ್ನು ಮಟ್ಟ ಹಾಕುತ್ತದೆ. ಆ ಸಾಮರ್ಥ್ಯ ಭಾರತೀಯ ಸೇನೆಗೆ ಇದೆ ಎಂದು ಹೇಳಿದರು.
ಅಂತೆಯೇ ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿಯ ಮೈತ್ರಿ ಸರ್ಕಾರ ಅಸ್ಥಿತ್ವದಲ್ಲಿದ್ದ ವೇಳೆ ಸುಮಾರು 300ಕ್ಕೂ ಅಧಿಕ ಉಗ್ರರನ್ನು ಹೊಡೆದುರುಳಿಸಲಾಗಿದೆ. ಇದು ಈ ಹಿಂದಿನ ಯಾವುದೇ ಸರ್ಕಾರ ಮಾಡಿರದ ಸಾಧನೆಯಾಗಿದೆ.  ಕಾಶ್ಮೀರದಲ್ಲಿ ಕೆಲ ಯೋಜನೆಗ ಗುರಿ ಸಾಧಿಸಲು ಪಿಡಿಪಿಯೊಂದಿಗೆ ಸೇರಿ ಮೈತ್ರಿ ಸರ್ಕಾರ ರಚನೆ ಮಾಡಿದೆವು. ಗುರಿ ಸಾಧನೆ ಬಳಿಕ ಸರ್ಕಾರದಿಂದ ಹೊರ ಬಂದೆವು, ಕಾಶ್ಮೀರದ ಹಿತಾಸಕ್ತಿ ದೃಷ್ಟಿಯಿಂದ ಅಧಿಕಾರ ತ್ಯಾಗ ಮಾಡಿದೆವು.
ಕಾಶ್ಮೀರದಲ್ಲಿ ಉಗ್ರರ ಪ್ರಮುಖ ನೆಲೆಗಳನ್ನು ಶಾಶ್ವತವಾಗಿ ನಿರ್ನಾಮ ಮಾಡುವುದು, ಸೇನೆಗೆ ಆತ್ಮಸ್ಥೈರ್ಯ ತುಂಬುವುದು, ಉಗ್ರರ ವಿರುದ್ಧ ಕಾರ್ಯಾಚರಣೆ ಎನ್ ಐಎ, ಗುಪ್ತಚರ ಇಲಾಖೆಗಳಿಗೆ ಶಕ್ತಿ ತುಂಬುವುದು ನಮ್ಮ ಗುರಿಯಾಗಿತ್ತು. ಉಗ್ರರಿಗೆ ಆರ್ಥಿಕ ನೆರವು ನೀಡುತ್ತಿರುವ ವ್ಯಕ್ತಿಗಳ ಮಟ್ಟಹಾಕಬೇಕಿತ್ತು. ಈ ಎಲ್ಲ ಕಾರ್ಯಗಳು ಪೂರ್ಣವಾದ ಹಿನ್ನಲೆಯಲ್ಲಿ ಸರ್ಕಾರದಿಂದ ಹೊರಬಂದು ಅಧಿಕಾರ ತ್ಯಾಗ ಮಾಡಿದೆವು ಎಂದು ಹೇಳಿದ್ದಾರೆ. 
ಅಂತೆಯೇ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿರುವ ಅವರು ಭಾರತದ ಅಖಂಡ ಭಾರತ (ಪಾಕಿಸ್ತಾನವನ್ನೂ ಒಳಗೊಂಡಂತೆ) ಪರಿಕಲ್ಪನೆ ಯಾವಾಗ ಬೇಕಾದರೂ ನನಸಾಗಬಹುದು ಎಂದು ಇಂದ್ರೇಶ್ ಕುಮಾರ್ ಹೇಳಿದ್ದಾರೆ.
SCROLL FOR NEXT