ದೇಶ

ಮಧ್ಯಪ್ರದೇಶ: ನ್ಯಾಯಾಧೀಶರ ಕುರ್ಚಿಯಲ್ಲಿ ಕುಳಿತು ಸೆಲ್ಫಿ ತೆಗೆದುಕೊಂಡ ಪೇದೆಯ ಬಂಧನ

Raghavendra Adiga
ಉಮಾರಿಯಾ(ಮಧ್ಯಪ್ರದೇಶ): ನ್ಯಾಯಾಲಯದ ನ್ಯಾಯಾಧೀಶರು ಕುಳಿತುಕೊಳ್ಳುವ ಕುರ್ಚಿಯಲ್ಲಿ  ಕುಳಿತು ಸೆಲ್ಫಿ ತೆಗೆದುಕೊಂಡಿದ್ದ ತರಬೇತಿ ನಿರತ ಪೋಲೀಸ್ ಪೇದೆಯೊಬ್ಬ ಬಂಧಿಸಲ್ಪಟ್ಟಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಧ್ಯಪದೇಶದ ಉಮಾರಿಯ  ನ್ಯಾಯಾಲಯದಲ್ಲಿ ಹಿರಿಯ ನ್ಯಾಯಾಧೀಶರ ಕುರ್ಚಿಯಲ್ಲಿ ಕುಳಿತು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ ರಾಮ್‌ ಅವತಾರ್‌ ರಾವತ್‌(28) ಎನ್ನುವಾತನನ್ನು ಪೋಲೀಸರು ಬಂಧಿಸಿ ಜೈಲಿಗೆ ಕಳಿಸಿದ್ದಾರೆ.
ಬಂಧಿತ ರಾಮ್ ಅವತಾರ್ ಉಮಾರಿಯಾದ ಪೊಲೀಸ್‌ ಅಕಾಡೆಮಿಯಲ್ಲಿ ಪೋಲೀಸ್ ತರಬೇತಿ ಪಡೆಯುತ್ತಿದ್ದ.  ಶನಿವಾರ  ಈತ ಜ್ಯುಸಿಷಿಯಲ್‌ ಮ್ಯಾಜಿಸ್ಟ್ರೇಟ್‌ ಕೆ.ಪಿ. ಸಿಂಗ್‌ ಅವರ ಆಸನದಲ್ಲಿ ಕುಳಿತು ಮೊಬೈಲ್ ನಲ್ಲಿ ಸೆಲ್ಫಿ ತೆಗೆದುಕೊಂಡಿದ್ದಾನೆ. ಇದನ್ನು ಪ್ರಶ್ನಿಸಿದ ನ್ಯಾಯಾಲಯದ ಸಿಬ್ಬಂದಿಗೆ ’ನಾನು ಪೋಲೀಸ್ ನಾನೇನು ಬೇಕಾದರೂ ಮಾಡಲು ಅವಕಾಶವಿದೆ’ ಎಂದು ತಿರುಗಿ ಬಿದ್ದಿದ್ದಾನೆ.
ಅಕ್ರಮ ಪ್ರವೇಶದ ಪ್ರಕರಣದಡಿಯಲ್ಲಿ ಆರೋಪಿ ಪೇದೆಯನ್ನು ಬಂಧಿಸಿದ್ದಾಗಿ ಪೋಲೀಸರು ಮಾಹಿತಿ ನೀಡಿದ್ದಾರೆ.
SCROLL FOR NEXT