ಕಾರಿನ ಚಿತ್ರ 
ದೇಶ

ಭೂಪಾಲ್ : ಮದುವೆ ದಿಬ್ಬಣಕ್ಕೆ ' ರಾಯಲ್ ವೆಡ್ಡಿಂಗ್ ' ಕಾರು !

ಮಧ್ಯಪ್ರದೇಶದ ರಾಜ್ಯದ ಭೂಪಾಲ್ ನಲ್ಲಿ ಮದುವೆ ಆಯೋಜಕ ಹಮೀದ್ ಖಾನ್ ಮಧ್ಯಮ ವರ್ಗದ ನವ ದಂಪತಿಗಾಗಿ ದಿಬ್ಬಣಕ್ಕಾಗಿ ವಿನ್ಯಾಸಗೊಳಿಸಿರುವ ರಾಯಲ್ ವೆಡ್ಡಿಂಗ್ ಕಾರು ಆಕರ್ಷಣೇಯ ಕೇಂದ್ರಬಿಂದುವಾಗಿದೆ.

ಭೂಪಾಲ್ : ಮಧ್ಯಪ್ರದೇಶದ ರಾಜ್ಯದ  ಭೂಪಾಲ್ ನಲ್ಲಿ ಮದುವೆ ಆಯೋಜಕ ಹಮೀದ್ ಖಾನ್  ಮಧ್ಯಮ ವರ್ಗದ ನವ ದಂಪತಿಗಾಗಿ ದಿಬ್ಬಣಕ್ಕಾಗಿ ವಿನ್ಯಾಸಗೊಳಿಸಿರುವ ರಾಯಲ್ ವೆಡ್ಡಿಂಗ್ ಕಾರು ಆಕರ್ಷಣೇಯ ಕೇಂದ್ರಬಿಂದುವಾಗಿದೆ.

ಮಧ್ಯಮ ವರ್ಗದವರ ಯುವ ದಂಪತಿಯನ್ನು ಕರೆದೊಯ್ಯಲು ಹಮೀದ್ ಖಾನ್   ತನ್ನ ರೊಲ್ಸ್ ರಾಯ್ಸ್ ಕಾರನ್ನು  ವಿನೂತನ ರೀತಿಯಲ್ಲಿ ವಿನ್ಯಾಸಗೊಳಿಸಿದ್ದು, ರಾಯಲ್ ವೆಡ್ಡಿಂಗ್ ಕಾರು ಎಂದು ಹೆಸರು ಇಟ್ಟಿದ್ದಾನೆ.

ವಿವಾಹ ಸಂದರ್ಭದಲ್ಲಿ ಮಧ್ಯಮ ವರ್ಗದವರಲ್ಲಿಯೂ ಶ್ರೀಮಂತ್ರಿಕೆಯ ಅನುಭವ ಮೂಡಿಸುವ ನಿಟ್ಟಿನಲ್ಲಿ ಈ ಕಾರು ವಿನ್ಯಾಸಗೊಳಿಸಿದ್ದು,  ಕಾರು ಬಳಕೆಯ ದರದ ಬಗ್ಗೆ ಈವರೆಗೂ ನಿರ್ಧರಿಸಿಲ್ಲ ಎಂದು ತಿಳಿಸಿದ್ದಾರೆ.

 ದುಬೈನಲ್ಲಿ ಇದೇ ಹೋಲಿಕೆಯ ಕಾರುಗಳನ್ನು ನೋಡಿದ್ದ ಖಾನ್, ಈ ಕಾರು ವಿನ್ಯಾಸಗೊಳಿಸಲು ತೀರ್ಮಾನಿಸಿದ್ದು, ಕಾರು ಕಮ್ ಚಾರಿಯೆಟ್ ನಿರ್ಮಾಣ ಮಾಡಲು  ಖಾನ್ 11 ತಿಂಗಳು ತೆಗೆದುಕೊಂಡಿದ್ದಾನೆ.

ಆರು ಚಕ್ರದ ಈ ಕಾರಿನಲ್ಲಿ ಎಲ್ ಇಡಿ ಬೆಳಕಿನೊಂದಿಗೆ ಹವಾನಿಯಂತ್ರಿತ ವ್ಯವಸ್ಥೆಯಿದೆ. ಒಳಾಂಗಣದಲ್ಲಿ ಮರದಿಂದ  ಆಲಂಕರಿಸಲಾಗಿದೆ. ಇದಕ್ಕಾಗಿ ಸುಮಾರು 15 ಲಕ್ಷ ವೆಚ್ಚ ಮಾಡಿರುವುದಾಗಿ ಖಾನ್ ತಿಳಿಸಿದ್ದಾನೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT