ಸಾಂದರ್ಭಿಕ ಚಿತ್ರ 
ದೇಶ

ಉತ್ತರ ಪ್ರದೇಶ: 8ನೇ ತರಗತಿ ವಿದ್ಯಾರ್ಥಿಯಿಂದ ಶಸ್ತ್ರಚಿಕಿತ್ಸೆ, ವಿಡಿಯೋ ವೈರಲ್

ಉತ್ತರ ಪ್ರದೇಶದ ಶಾಮ್ಲಿಯ ಖಾಸಗಿ ಆಸ್ಪತ್ರೆಯಲ್ಲಿ 8ನೇ ತರಗತಿ ವಿದ್ಯಾರ್ಥಿಯೊಬ್ಬ ರೋಗಿಗೆ ಶಸ್ತ್ರಚಿಕಿತ್ಸೆ ನಡೆಸಿರುವ ಆಘಾತಕಾರಿ ವಿಡಿಯೋವೊಂದು ...

ಶಾಮ್ಲಿ:  ಉತ್ತರ ಪ್ರದೇಶದ ಶಾಮ್ಲಿಯ ಖಾಸಗಿ ಆಸ್ಪತ್ರೆಯಲ್ಲಿ 8ನೇ ತರಗತಿ ವಿದ್ಯಾರ್ಥಿಯೊಬ್ಬ ರೋಗಿಗೆ ಶಸ್ತ್ರಚಿಕಿತ್ಸೆ ನಡೆಸಿರುವ ಆಘಾತಕಾರಿ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಶಾಮ್ಲಿಯ ಆರ್ಯನ್ ಆಸ್ಪತ್ರೆಯ ಮಾಲೀಕ ಹಾಗೂ 8ನೇ ತರಗತಿ ವಿದ್ಯಾರ್ಥಿ ನರದೇವ್ ಸಿಂಗ್ ರೋಗಿಗೆ ಶಸ್ತ್ರ ಚಿಕಿತ್ಸೆ ನಡೆಸಿರುವ ವಿಡಿಯೋ ವೈರಲ್ ಆಗಿದೆ.
ಮಹಿಳಾ ಕಂಪೌಂಡರ್ ಮೊದಲು ರೋಗಿಗೆ ಅನಸ್ತೇಶಿಯಾ ನೀಡಿದ್ದಾಳೆ, ನಂತರ ವಿದ್ಯಾರ್ಥಿ ಶಸ್ತ್ರ ಚಿಕಿತ್ಸೆ ನಡೆಸಿದ್ದಾನೆ. 
ಈ ಆಸ್ಪತ್ರೆ ಇದೇ ಮೊದಲ ಬಾರಿಗೆ ವಿವಾದಕ್ಕೀಡಾಗಿಲ್ಲ, ಹಿಂದೆಯೂ ಹಲವು ಬಾರಿ ಆಸ್ಪತ್ರೆ ಹಲವು ಕಾನೂನು ಬಾಹಿರ ಕೆಲಸಗಳಿಂದಾಗಿ ವಿವಾದಕ್ಕೀಡಾಗಿದೆ ಎಂದು ಮುಖ್ಯ ಆರೋಗ್ಯಾಧಿಕಾರಿ ಅಶೋಕ್ ಕುಮಾರ್ ಹಂಡಾ ತಿಳಿಸಿದ್ದಾರೆ.
ಹಲವು ಆಕ್ರಮಗಳಿಂದಾಗಿ ಈ ಮೊದಲು ಆಸ್ಪತ್ರೆಯನ್ನು ಸೀಜ್ ಮಾಡಲಾಗಿತ್ತು. ಆದರೆ ಆಸ್ಪತ್ರೆ ಮಾಲೀಕನಿಗೆ ರಾಜಕಾರಣಿಗಳ ಸಂಪರ್ಕ ಇರುವುದರಿಂದ ಮತ್ತೆ ಆಸ್ಪತ್ರೆ ಪುನಾರಂಭವಾಗಿದೆ. ವಿಡಿಯೋದಲ್ಲಿ ಕಾನೂನು ಬಾಹಿರ ಹಾಗೂ ಸತ್ಯವೆಂದು ತಿಳಿದು ಬಂದರೇ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ,
ಕಳೆದ 1 ವರ್ಷದಲ್ಲಿ ಈ ಆಸ್ಪತ್ರೆಯಲ್ಲಿ ಸುಮಾರು 20 ರೋಗಿಗಳು ಸಾವನ್ನಪ್ಪಿರುವ ವರದಿಯಾಗಿದೆ.ರೋಗಿಗಳ ಕುಟುಂಬಸ್ಥರು ಈ ಸಂಬಂಧ ಪೊಲೀಸರಲ್ಲಿ ಎಫ್ ಐ ಆರ್ ದಾಖಲಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Pak ಬಣ್ಣ ಬಯಲು: ಕಾಶ್ಮೀರ ರಕ್ತದೋಕುಳಿಗೆ 10,000 ಉಗ್ರರ ರವಾನಿಸಿದ್ದ: Hafiz Saeed ಪಾಪಕೃತ್ಯ ಬಹಿರಂಗಪಡಿಸಿದ ಮೌಲ್ವಿ, Video ವೈರಲ್

ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆ: ನಕಲಿ ಪಿಂಚಣಿದಾರರಿಗೆ ಸರ್ಕಾರ ಶಾಕ್; 18 ಲಕ್ಷ ಖಾತೆಗಳು ತಾತ್ಕಾಲಿಕ ಸ್ಥಗಿತ, ವಂಚನೆಯಲ್ಲಿ ಬೆಂಗಳೂರೇ ನಂ.1..!

ಕೋಲ್ಕತ್ತಾದ ಹೊಟೇಲ್ ನಲ್ಲಿ ಭೀಕರ ಅಗ್ನಿ ಅವಘಡ: 9 ಮಂದಿ ಸಾವು, 6 ಜನರಿಗೆ ಗಾಯ-Video

ಕ್ಷಿಪಣಿ ದಾಳಿ ಆರೋಪ: Iranಗೆ UAE ಶಾಕ್, ಎಲ್ಲಾ ವ್ಯಾಪಾರ-ವಾಣಿಜ್ಯ ವಹಿವಾಟು ಸಂಪೂರ್ಣ ಸ್ಥಗಿತ..!

ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್'ಗೆ VIP ಟ್ರೀಟ್‌ಮೆಂಟ್?: ಕಾನೂನಿನ ಮುಂದೆ ಎಲ್ಲರೂ ಒಂದೇ, ಜೈಲಿನಲ್ಲಿ ಯಾರಿಗೂ ವಿಶೇಷ ಸೌಲಭ್ಯವಿಲ್ಲ; ಸರ್ಕಾರ ಸ್ಪಷ್ಟನೆ