ದೇಶ

ದೆಹಲಿಗೆ ಸಂಪೂರ್ಣ ರಾಜ್ಯ ಸ್ಥಾನಮಾನ ಸಾಧ್ಯವಿಲ್ಲ; ಲೆಫ್ಟಿನೆಂಟ್ ಜನರಲ್ ಗೆ ಸ್ವತಂತ್ರ ಅಧಿಕಾರ ಇಲ್ಲ: 'ಸುಪ್ರೀಂ' ತೀರ್ಪು

Srinivasamurthy VN
ನವದೆಹಲಿ: ದೆಹಲಿ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳ ನಡುವಿನ ಕಿತ್ತಾಟಕ್ಕೆ ಕೊನೆಗೂ ಸುಪ್ರೀಂ ಕೋರ್ಟ್ ತೆರೆ ಎಳೆದಿದ್ದು, ಕೇಂದ್ರಾಡಳಿತ ದೆಹಲಿಗೆ ಸಂಪೂರ್ಣ ರಾಜ್ಯದ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂದು ಮಹತ್ವದ ತೀರ್ಪು ನೀಡಿದೆ.
ದೆಹಲಿ ಸರ್ಕಾರ ಸಲ್ಲಿಕೆ ಮಾಡಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ 9 ನ್ಯಾಯಮೂರ್ತಿಗಳ ಉನ್ನತ ನ್ಯಾಯಪೀಠ ಇಂದು ತನ್ನ ತೀರ್ಪು ನೀಡಿದ್ದು, ಲೆಫ್ಟಿನೆಂಟ್ ಗವರ್ನರ್ ಎಲ್ಲ ವಿಚಾರಗಳನ್ನೂ ರಾಷ್ಟ್ರಪತಿಗಳಿಗೆ ರವಾನಿಸುವುಗು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೆ ದೆಹಲಿಗೆ ಸಂಪೂರ್ಣ ರಾಜ್ಯ ಸ್ಥಾನಮಾನ ಕೂಡ ಸಾಧ್ಯವಿಲ್ಲ ಎಂದು ಹೇಳಿದೆ.
ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಉನ್ನತ ಪೀಠ, ಸಂವಿಧಾನಕ್ಕೆ ಬದ್ಧವಾಗಿ ಎಲ್ಲರೂ ಕಾರ್ಯನಿರ್ವಹಿಸಬೇಕು. ಅದು ಈ ದೇಶದ ಪ್ರತಿಯೊಬ್ಬ ನಾಗರಿಕನ ಕರ್ತವ್ಯಕೂಡ. ಅಂತೆಯೇ ದೆಹಲಿ ಲೆಫ್ಟಿನೆಂಟ್ ಗವರ್ನರ್ ಸ್ವತಂತ್ರ್ಯವಾಗಿ ಕಾರ್ಯನಿರ್ವಹಿಸಬೇಕು. ಎಲ್ಲ ವಿಚಾರಗಳನ್ನೂ ರಾಷ್ಟ್ರಪತಿಗಳಿಗೆ ರವಾನೆ ಮಾಡುವುದು ಸರಿಯಲ್ಲ. ಸಂವಿಧಾನದತ್ತ ತಮ್ಮ ಅಧಿಕಾರವನ್ನು ಅವರು ಸ್ವತಂತ್ರ್ಯವಾಗಿ ಚಲಾಯಿಸಬೇಕು. ಎಲ್ ಜಿ ಸರ್ಕಾರ ಪ್ರತಿರೋಧಕರಂತೆ ವರ್ತಿಸಬಾರದು ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿದೆ.
ದೆಹಲಿ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ಅವರ ಬಾಂಧವ್ಯ ಉತ್ತಮವಾಗಿದ್ದರೆ ಮಾತ್ರ ಆಡಳಿತ ಸುಲಲಿತವಾಗಿರುತ್ತದೆ. ದೆಹಲಿ ಸರ್ಕಾರದೊಂದಿಗೆ ಲೆಫ್ಟಿನೆಂಟ್ ಗವರ್ನರ್ ಸಾಮರಸ್ಯದಿಂದ ಕೆಲಸ ಮಾಡಬೇಕು. ಗವರ್ನರ್ ಮತ್ತು ದೆಹಲಿ ಮಂತ್ರಿ ಮಂಡಲ ಒಗ್ಗೂಡಿ ಕೆಲಸ ಮಾಡಿದರೆ ಮಾತ್ರ ಉತ್ತಮ ಆಡಳಿತ ನೀಡಲು ಸಾಧ್ಯ. ಹೀಗಾಗ ರಾಜಭವನ ಮತ್ತು ದೆಹಲಿ ಸರ್ಕಾರ ಉತ್ತಮ ಆರೋಗ್ಯಕರ ಸಂಬಂಧ ಹೊಂದಿರಬೇಕು ಎಂದು ಉನ್ನತ ಪೀಠ ಕಿವಿಮಾತು ಹೇಳಿದೆ.
SCROLL FOR NEXT