ದೇಶ

ಕ್ರಿಕೆಟ್ ಸೇರಿ ಕ್ರೀಡೆಗಳಲ್ಲಿ ಬೆಟ್ಟಿಂಗ್ ಕಾನೂನುಬದ್ಧಗೊಳಿಸಿ : ಕಾನೂನು ಆಯೋಗ

Nagaraja AB
ನವದೆಹಲಿ: ಮ್ಯಾಚ್ ಫಿಕ್ಸಿಂಗ್ , ವಂಚನೆಯಂತಹ ಪ್ರಕರಣಗಳನ್ನು ತಡೆಗಟ್ಟಲು ಕಠಿಣ ಕಾನೂನನ್ನು ಪರಿಚಯಿಸಿ,  ಕ್ರಿಕೆಟ್ ಸೇರಿದಂತೆ ಮತ್ತಿತರ ಕ್ರೀಡೆಗಳಲ್ಲಿ ಜೂಜಾಟ ಹಾಗೂ ಬೆಟ್ಟಿಂಗ್ ನ್ನು ಕಾನೂನುಬದ್ಧಗೊಳಿಸುವಂತೆ  ಕಾನೂನು ಆಯೋಗ ಶಿಫಾರಸ್ಸು ಮಾಡಿದೆ.
ಬೆಟ್ಟಿಂಗ್ ಮತ್ತು ಜೂಜಾಟವನ್ನು  ಪ್ರತ್ಯೇಕ್ಷ  ಮತ್ತು ಪರೋಕ್ಷ ತೆರಿಗೆ ವ್ಯಾಪ್ತಿಯಲ್ಲಿ ತಂದು ತೆರಿಗೆ ವಿಧಿಸಬೇಕು , ಈ ಸಂಪನ್ಮೂಲವನ್ನು ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವ ಮೂಲವಾಗಿ  ಬಳಕೆ ಮಾಡಿಕೊಳ್ಳಬೇಕು  ಎಂದು ಸಮಿತಿ ಹೇಳಿದೆ.
 ರಾಜ್ಯಗಳು ಅಳವಡಿಸಿಕೊಂಡ ಜೂಜಾಟ ನಿಯಂತ್ರಿಸಲು ಸಂಸತ್ತು ಮಾದರಿ ಕಾನೂನು  ಜಾರಿಗೊಳಿಸಬಹುದು, ಸಂವಿಧಾನದ 249 ಅಥವಾ 252 ನೇ ಕಾಯ್ದೆಯಡಿ ಇದಕ್ಕೆ ಸಂಸತ್ತಿನಲ್ಲಿ ಶಕ್ತಿ ತುಂಬಬಹುದು ಎಂದು ತಿಳಿಸಲಾಗಿದೆ.
ವೈಯಕ್ತಿಕವಾಗಿ ಜೂಜಾಟ, ಬೆಟ್ಟಿಂಗ್ ನಲ್ಲಿ ಪಾಲ್ಗೊಳ್ಳುವವರ ಆಧಾರ್ ಮತ್ತು ಪ್ಯಾನ್ ಕಾರ್ಡ್ ನ್ನು ಜೋಡಣೆ ಮಾಡಬೇಕು, ಅಕ್ರಮ ಹಣ ವರ್ಗಾವಣೆ ಮತ್ತಿತರ ಕಾನೂನು ಬಾಹಿರ ಚಟುವಟಿಕೆ ನಿಯಂತ್ರಿಸಲು ನಗದು ರಹಿತ ವ್ಯವಹಾರ ಮಾಡಬೇಕು ಎಂದು ಶಿಫಾರಸ್ಸಿನಲ್ಲಿ ತಿಳಿಸಲಾಗಿದೆ.
  ಆನ್ ಲೈನ್ ಗೇಮಿಂಗ್  ಉದ್ಯಮ ಮತ್ತು ಕ್ಯಾಸಿನೊದಲ್ಲಿ  ಹೂಡಿಕೆ ಮಾಡಲು ಅವಕಾಶ ನೀಡುವಂತೆ  ಭಾರತದ ಎಫ್ ಡಿಐ ನೀತಿ ಹಾಗೂ ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆ ತಿದ್ದುಪಡಿ ತರಬೇಕು ಎಂದು ಕಾನೂನು ಆಯೋಗ ಶಿಫಾರಸ್ಸು ಮಾಡಿದೆ.
SCROLL FOR NEXT