ದೇಶ

ಇಳಿಕೆ ಆಯ್ತು ಈಗ ಏರಿಕೆ ಸರದಿ: ಸತತ 2ನೇ ದಿನವೂ ಪೆಟ್ರೋಲ್, ಡೀಸೆಲ್ ದರ ಏರಿಕೆ, ದರ ಎಷ್ಟು ಗೊತ್ತಾ?

Srinivasamurthy VN
ನವದೆಹಲಿ: ಕಳೆದ 15 ದಿನಗಳಿಂದ ಇಳಿಕೆಯತ್ತ ಮುಖ ಮಾಡಿದ್ದ ಕಚ್ಛಾತೈಲ ದರ ಇದೀಗ ತನ್ನ ಪಥ ಪದಲಿಸಿದ್ದು, ಏರಿಕೆಯತ್ತ ಮುಖಮಾಡಿದೆ.
ನಿನ್ನೆ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದ್ದ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಇದೀಗ ಮತ್ತೆ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿವೆ. ಶುಕ್ರವಾರ ಮುಂಜಾನೆ ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 14 ರಿಂದ 15 ಪೈಸೆಗಳಷ್ಟು ಏರಿಕೆಯಾಗಿದೆ.  ಅಂತೆಯೇ ಡೀಸೆಲ್ ದರ ಕೂಡ 16 ರಿಂದ 18 ಪೈಸೆಗಳಷ್ಟು ಏರಿಕೆಯಾಗಿದೆ ಎಂದು ತಿಳಿದುಬಂದಿದೆ.
ಸರ್ಕಾರಿ ಪ್ರಾಯೋಜಿತ ಇಂಧನ ಸಂಸ್ಥೆಗಳಾದ ಐಒಸಿ, ಭಾರತ್ ಪೆಟ್ರೋಲಿಯಂ, ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಗಳು ಇಂದು ಬೆಳಗ್ಗೆ 6 ಗಂಟೆ ಹೊತ್ತಿಗೆ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಪರಿಷ್ಕರಣೆ ಮಾಡಿವೆ. 
ಪ್ರಮುಖವಾಗಿ ಅಂತಾರಾಷ್ಟ್ಕೀಯ ತಚ್ಛಾತೈಲ ಮಾರುಕಟ್ಟೆಯಲ್ಲಿ ಪ್ರತೀ ಬ್ಯಾರೆಲ್ ಕಚ್ಛಾತೈಲ ದರದಲ್ಲಿ ಅಲ್ಪ ಪ್ರಮಾಣದ ಏರಿಕೆಯಾಗಿದ್ದು, ಇದಲ್ಲದೆ ಕೇಂದ್ರ ಸರ್ಕಾರ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತನ್ನ ವ್ಯಾಟ್ ತೆರಿಗೆಯನ್ನು ಹೆಚ್ಚಳ ಮಾಡಿತ್ತು. ಪೆಟ್ರೋಲ್ ಮೇಲಿನ ತೆರಿಗೆಯನ್ನು 11.77ಕ್ಕೆ ಏರಿಕೆ ಮಾಡಿದ್ದ ಕೇಂದ್ರ, ಡೀಸೆಲ್ ಮೇಲಿನ ತೆರಿಗೆಯನ್ನು 13.47 ರೂಗೆ ಏರಿಕೆ ಮಾಡಿತ್ತು. 
SCROLL FOR NEXT