ಶ್ರೀನಗರ: ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಏಕೆ ಹೆಚ್ಚುತ್ತಿದೆ ಎನ್ನುವ ಕುರಿತು ಟ್ವಿಟ್ಟರ್ ನಲ್ಲಿ ವ್ಯಾಖ್ಯಾನ ಮಾಡಿದ್ದ 2010 ರ ಬ್ಯಾಚ್ ಐಎಎಸ್ ಅಧಿಕಾರಿಯೊಬ್ಬರ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಶಿಸ್ತು ಕ್ರಮ ಕೈಗೊಳ್ಳಲು ನಿರ್ಧರಿಸಿದೆ.
ಜಮ್ಮು-ಕಾಶ್ಮೀರ 2012 ಬ್ಯಾಚ್ನ ಐಎಎಸ್ ಅಧಿಕಾರಿ ಷಾ ಫೈಸಲ್ ಸಾಮಾಜಿಕ ತಾಣ ಟ್ವೀಟ್ಟರ್ ನಲ್ಲಿ ಮಾಡಿರುವ ಕಮೆಂಟ್ ಒಂದರ ಕುರಿತು ತನಿಖೆ ನಡೆಸಿ ವರದಿ ನೀಡಬೇಕೆಂದು ಕೇಂದ್ರ ಸರ್ಕಾರ ಸೂಚಿಸಿದೆ.
ಪಾಪುಲೇಷನ್ + ಪ್ಯಾಟ್ರ್ರೆಚ್ರಿ+ಇಲ್ಲಿಟ್ರೆಸ್ಸಿ+ಹಾಲ್ಕೋಹಾಲ್+ಅನಾರ್ಕಿ=ರೇಪಿಸ್ತಾನ್ ಎಂದು ಅತ್ಯಾಚಾರ ಹೆಚ್ಚಳ ಕುರಿತಂತೆ ಟ್ವೀಟ್ ಮಾಡಿರುವ ಐಎಸ್ ಅಧಿಕಾರಿ ಅವರ ವಿರುದ್ಧ ಸಾಮಾಜಿಕ ತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಕೇಂದ್ರ ಸರ್ಕಾರದ ನೂತನ ನಿಯಮದಂತೆ ಯಾವುದೇ ಸರ್ಕಾರಿ ಅಧಿಕಾರಿ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ವಿಷಯದ ಬಗ್ಗೆ ಟೀಕೆ ಮಾಡುವಂತಿಲ್ಲ.ಹಾಗೆ ಮಾಡುವುದು ಶಿಕ್ಷಾರ್ಹ ಅಪರಾಧವೆನಿಸಲಿದೆ.
2012ರಲ್ಲಿ ಜಮ್ಮು-ಕಾಶ್ಮೀರದಿಂದ ಐಎಎಸ್ ಪರೀಕ್ಷೆಯಲ್ಲಿ ಟಾಪರ್ ಆಗಿದ್ದ ಷಾ ಫೈಸಲ್ ಗೆ ಈಗ ಸಾಮಾನ್ಯ ಆಡಳಿತ ಇಲಾಖೆ ನೋಟೀಸ್ ನಿಡಿದ್ದು ನೀವು ನ್ಯಾಯಯುತವಾಗಿ ಕರ್ತವ್ಯ ನಿಭಾಯಿಸುವಲ್ಲಿ ವಿಫಲರಾಗಿದ್ದೀರಿ.ಪ್ರಾಮಾಣಿಕತೆ ಮತ್ತು ವೃತ್ತಿ ನಿಷ್ಠೆಯಲ್ಲಿ ನೀವು ಸೋತಿದ್ದೀರಿ ಎಂದು ಆರೊಪವಿದೆ.ನೀವು ಸಾರ್ವಜನಿಕ ಸೇವಕರಾಗಲು ಅರ್ಹರಲ್ಲದ ರೀತಿಯಲ್ಲಿ ವರ್ತಿಸಿದ್ದೀರಿ.ನಿಮ್ಮ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ರಾಜ್ಯ ಸರ್ಕಾರವನ್ನು ಕೋರಿದೆ, ಎನ್ನುವುದಾಗಿ ನೋತೀಸ್ ನಲ್ಲಿ ವಿವರಿಸಲಾಗಿದೆ.
ಅಲ್ಲದೆ ಈ ನೋಟೀಸ್ ಗೆ ಸರಿಯಾದ ಪ್ರತ್ಯುತ್ತರ ನೀಡದಿದ್ದಲ್ಲಿ ನಿಮ್ಮ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಲಾಉತ್ತದೆ ಎಂದು ಎಚ್ಚರಿಸಲಾಗಿದೆ.
ಸದ್ಯ ಅಮೇರಿಕಾದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ಫೈಸಲ್ ಈ ನೋಟೀಸ್ ಕುರಿತು ಪ್ರತಿಕ್ರಯಿಸಿದ್ದು ದಕ್ಷಿಣ ಏಷ್ಯಾದ ಅತ್ಯಾಚಾರ ಸಂಸ್ಕೃತಿ ಕುರಿತಂತೆ ನಾನು ಮಾಡಿದ್ದ ಕಟು ಟೀಕೆಗೆ ನನ್ನ ಮೇಲಾಧಿಕಾರಿಗಳು ಪ್ರೇಮಪತ್ರ ನೀಡಿದ್ದಾರೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ವಸಾಹತುಷಾಹಿ ಸೇವಾ ನಿಯಮಗಳನ್ನು ಹೇರುವ ಮೂಲಕ ಅಧಿಕಾರಿಗಳ ಆತ್ಮಸಾಕ್ಷಿ, ಸ್ವಾತಂತ್ರವನ್ನು ದಮನ ಮಾಡಲಾಗುತ್ತಿದೆ. ಇದು ದೊಡ್ಡ ವಿಪರ್ಯಾಸ. ನಾನು ಈ ಸಂಬಂಧ ಸಮರ್ಪಕ ಉತ್ತರ ನೀಡಲಿದ್ದೇನೆ ಎಂದು ಟ್ವಿಟ್ ಮಾಡಿದ್ದಾರೆ.
ಕೇಂದ್ರ ಸರ್ಕಾರದ ಈ ನೋಟೀಸ್ ಬಗೆಗೆ ಪ್ರತಿಕ್ರಯಿಸಿದ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ "ಓರ್ವ ಪ್ರಾಮಾಣಿಕ ಅಧಿಕಾರಿಯ ವಿರುದ್ಧ ಈ ಬಗೆಯ ನೋಟೀಸ್ ಜಾರಿಯಾಗಿರುವುದು ದುರದೃಷ್ಟಕರ" ಎಂದು ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics