ದೇಶ

ಲೈಂಗಿಕ ದೃಷ್ಟಿಕೋನವಲ್ಲ, ಲೈಂಗಿಕ ಸಂಗಾತಿ ಆಯ್ಕೆ ಮಾತ್ರ ಮೂಲಭೂತ ಹಕ್ಕು: ಸುಪ್ರೀಂ ಕೋರ್ಟ್

Srinivasamurthy VN
ನವದೆಹಲಿ: ಲೈಂಗಿಕ ದೃಷ್ಟಿಕೋನ ಎಂದಿಗೂ ಮೂಲಭೂತ ಹಕ್ಕಾಗಲು ಸಾಧ್ಯವಿಲ್ಲ. ಆದರೆ ಲೈಂಗಿಕ ಸಂಗಾತಿಯ ಆಯ್ಕೆ ಮೂಲಭೂತ ಹಕ್ಕಾಗಿದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ಹೇಳಿಕೆ ನೀಡಿದೆ.
ಸಲಿಂಗ ಕಾಮ ಅಪರಾಧ ಎಂಬ ತೀರ್ಪಿಗೆ ಸಂಬಂಧಿಸಿದಂತೆ ದಾಖಲಾಗಿರುವ ಅರ್ಜಿಗಳ ಕುರಿತು ಇಂದು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವ ಪಂಚ ಸದಸ್ಯ ಪೀಠ ಇಂತಹುದೊಂದು ಹೇಳಿಕೆ ನೀಡಿದೆ. ಪೀಠದಲ್ಲಿ ಸಿಜೆಐ ಮಿಶ್ರಾ ಅಲ್ಲದೆ ನ್ಯಾಯಮೂರ್ತಿ ಆರ್ ಎಫ್ ನಾರಿಮನ್, ಎಎಂ ಖಾನ್ವಿಲ್ಕರ್, ಡಿವೈ ಚಂದ್ರಚೂಡ್ ಮತ್ತು ಇಂದು ಮಲ್ಹೋತ್ರಾ ಅವರು ಇದ್ದರು.
ಸಲಿಂಗಕಾಮದ ಕುರಿತು ತೀರ್ಪು ನೀಡಿದ ಸುಪ್ರೀಂ ಕೋರ್ಟ್ ಪೀಠ ನ್ಯಾಯಾಲಯಕ್ಕೆ ದಾಖಲಾಗಿದ್ದ ಸೆಕ್ಷನ್ 377 (ಸಲಿಂಗ ಕಾಮ) ವಿವಿಧ ಅರ್ಜಿಗಳಿಗೆ ಸಂಬಂಧಿಸಿದಂತೆ ಭಾರತೀಯ ಸಂವಿಧಾನ ಕಲಂ 14, 19 ಮತ್ತು 21ರ ಅಡಿಯಲ್ಲಿ ಲೈಂಗಿಕ ದೃಷ್ಟಿಕೋನವಲ್ಲ, ಲೈಂಗಿಕ ಸಂಗಾತಿ ಆಯ್ಕೆ ಮಾತ್ರ ಮೂಲಭೂತ ಹಕ್ಕಾಗಿದೆ ಎಂದು ಹೇಳಿದ್ದಾರೆ. 
2013 ರಲ್ಲಿ ಸುಪ್ರೀಂ ಕೋರ್ಟ್ ಸಲಿಂಗಿಗಳ ನಡುವಿನ ಲೈಂಗಿಕತೆ ಅಪರಾಧ ಎಂದು ತೀರ್ಪು ನೀಡಿತ್ತು.
SCROLL FOR NEXT