ಸಲಿಂಗಕಾಮ ಅಪರಾಧದ ಪರಿಧಿಯಿಂದ ಮುಕ್ತವಾದರೆ, ತಾರತಮ್ಯ, ಕಳಂಕದಿಂದಲೂ ಮುಕ್ತ : ಸೆಕ್ಷನ್ 377 ಕುರಿತು ಸುಪ್ರೀಂ ಕೋರ್ಟ್
ನವದೆಹಲಿ: ಸಲಿಂಗಕಾಮವೆಂಬುದು ಅಪರಾಧದ ಪರಿಧಿಯಿಂದ ಮುಕ್ತವಾದರೆ, ಸಾಮಾಜಿಕ ಕಳಂಕ ಎಂಬ ಭಾವನೆಯೂ ಇರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸೆಕ್ಷನ್ 377 ರ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದೆ.
ಭಾರತದ ಸಮಾಜದಲ್ಲಿ ನಿರ್ಮಾಣವಾಗಿರುವ ವಾತಾವರಣದಿಂದಾಗಿ ಸಲಿಂಗಕಾಮವನ್ನು ಬೆಂಬಲಿಸುವ ಸಮುದಾಯದ ವಿರುದ್ಧ ತಾರತಮ್ಯ ಭಾರತದಲ್ಲಿ ಆಳವಾಗಿ ಬೇರೂರುವಂತೆ ಮಾಡಿದೆ ಎಂದು ಸುಪ್ರೀಂ ಕೋರ್ಟ್ ನ ಪಂಚ ಸದಸ್ಯ ಪೀಠ ಹೇಳಿದ್ದು ತಾರಮ್ಯ, ಸಲಿಂಗ ಕಾಮವೆಂಬುದು ಸಾಮಾಜಿಕ ಕಳಂಕ ಎಂಬ ಭಾವನೆ ಸಲಿಂಗಿಗಳ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರಲಿದೆ ಎಂದಿದೆ.
ಬೇರೆಯವರಿಗೆ ಸಿಗುವ ಸವಲತ್ತುಗಳನ್ನು ಸಲಿಂಗಿಗಳಿಗೆ ನಿರಾಕರಿಸುವ ಕಾನೂನು, ನಿಯಮ, ಮಾರ್ಗಸೂಚಿಗಳೇನಾದರೂ ಇದೆಯೇ ಎಂದು ಅರ್ಜಿದಾರರೊಬ್ಬರ ಪರ ವಕೀಲರಾದ ಮನೇಕಾ ಗುರುಸ್ವಾಮಿ ಅವರನ್ನು ಸುಪ್ರೀಂ ಕೋರ್ಟ್ ನ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ಉದೇ ವೇಳೆ ಕೇಳಿದೆ.
ಸಲಿಂಗಕಾಮವನ್ನು ಅಪರಾಧವೆಂಬಂತೆ ಗುರುತಿಸುವುದರಿಂದಲೇ ಎಲ್ ಜಿಬಿಟಿಕ್ಯೂ ಸಮುದಾಯ ತಾರತಮ್ಯ ಎದುರಿಸುತ್ತಿದೆ, ಅಪರಾಧದ ಪರಿಧಿಯಿಂದ ಮುಕ್ತವಾದರೆ, ತಾರತಮ್ಯ, ಕಳಂಕದಿಂದಲೂ ಮುವಾಗುತ್ತದೆ ಎಂದು ಕೋರ್ಟ್ ಹೇಳಿದೆ.