ನವದೆಹಲಿ: ಪಿಡಿಪಿ ಮುಖ್ಯಸ್ಥೆ ಹಾಗೂ ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರು ಭಯೋತ್ಪಾದನೆ ಬಗ್ಗೆ ಮೃದುದೊರಣೆ ಹೊಂದಿದ್ದಾರೆ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಶುಕ್ರವಾರ ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರ ಪಿಡಿಪಿಯನ್ನು ಒಡೆಯುವ ಯತ್ನ ಮಾಡಿದರೆ ಪರಿಣಾಮ ಬಹಳಷ್ಟು ಅಪಾಯಕಾರಿಯಾಗಿರುತ್ತದೆ ಎಂದು ಮೆಹಬೂಬಾ ಮುಫ್ತಿ ಎಚ್ಚರಿಕೆ ಬಗ್ಗೆ ಪ್ರತಿಕ್ರಿಯಿಸಿದ ಸ್ವಾಮಿ, ಮುಫ್ತಿ ಉಗ್ರರ ಬಗ್ಗೆ ಸಾಫ್ಟ್ ಆಗಿದ್ದಾರೆ ಎಂಬುದು ಅವರ ಹೇಳಿಕೆಯಿಂದಲೇ ಸಾಬೀತಾಗುತ್ತದೆ ಎಂದಿದ್ದಾರೆ.
ಭಯೋತ್ಪಾದನೆ ವಿಚಾರದಲ್ಲಿ ಮುಫ್ತಿ ಸಹ ಅವರ ತಂದೆಯಂತೆ ಮೃದುವಾಗಿದ್ದಾರೆ. ಉದಾಹರಣೆಗೆ, ಮುಫ್ತಿ ಅಧಿಕಾರದಲ್ಲಿದ್ದಾಗ ಗುಲ್ಮಾರ್ಗ್, ಅನಂತನಾಗ್ ಮತ್ತು ಶಂಕರಾಚಾರ್ಯ ಹಿಲ್ಸ್ ಅನ್ನು ಮರುನಾಮಕರಣ ಮಾಡಲಾಯಿತು. ಇದು ನೀವು ಕಾಶ್ಮೀರವನ್ನು ಇಸ್ಲಾಮೀಕರಿಸಬೇಕು ಎಂಬದನ್ನು ತೋರಿಸುತ್ತದೆ ಎಂದು ಸ್ವಾಮಿ ಹೇಳಿದ್ದಾರೆ.
ಇದಕ್ಕು ಮುನ್ನ ಬಿಜೆಪಿಯು ಪಕ್ಷಾಂತರಿಸುವ ಕುದುರೆ ವ್ಯಾಪಾರಕ್ಕೆ ಮುಂದಾಗಿದ್ದು, ಪಿಡಿಪಿಯನ್ನು ಒಡೆದು ಬಂಡುಕೋರ ಶಾಸಕರನ್ನು ಸೆಳೆದು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಜತೆ ಸೇರಿ ಜಮ್ಮು ಕಾಶ್ಮೀರದಲ್ಲಿ ಮತ್ತೆ ಸರ್ಕಾರ ರಚಿಸಲು ಹೊರಟಿದೆ ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ್ದ ಮುಫ್ತಿ, 1987 ರಲ್ಲಿ ಕೇಂದ್ರವು ಕಾಶ್ಮೀರಿಗಳ ಮತಗಳ ಹೈಜಾಕ್‌ಗೆ ಪ್ರಯತ್ನಿಸಿದ ಫಲ ಏನಾಯಿತು ಎಂಬುದನ್ನು ನೆನಪಿಸಿಕೊಳ್ಳಲಿ. ಇಂಥ ಬೆಳವಣಿಗೆಗಳು ಸಲಾವುದ್ದೀನ್, ಯಾಸೀನ್ ಮಲಿಕ್ ಅವರಂಥ ಪ್ರತ್ಯೇಕವಾದಿಗಳ ಹುಟ್ಟಿಗೆ ಕಾರಣವಾಗುತ್ತದೆ. ಪಿಡಿಪಿಯನ್ನು ಒಡೆಯುವ ಪ್ರಯತ್ನ ನಡೆಸಿದರೆ ಬಿಜೆಪಿ ಗಂಭೀರ ಪರಿಣಾಮ ಎದುರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಎಚ್ಚರಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics