ನನ್ನನ್ನು ಕ್ಷಮಿಸಿ: ಕ್ಷಮಾಪಣೆ ಪತ್ರದೊಡನೆ ಕದ್ದ ಆಭರಣ ಮರಳಿಸಿದ ಕೇರಳದ ಕಳ್ಳ 
ದೇಶ

ನನ್ನನ್ನು ಕ್ಷಮಿಸಿ; ಕ್ಷಮಾಪಣೆ ಪತ್ರದೊಡನೆ ಕದ್ದ ಆಭರಣ ಮರಳಿಸಿದ ಕೇರಳದ ಕಳ್ಳ

ನಾನು ಮತ್ತೆ ಅಂತಹ ಕೃತ್ಯ ಎಸಗುವುದಿಲ್ಲ.ದಯವಿಟ್ಟು ನನ್ನ ವಿರುದ್ಧ ಪೊಲೀಸರಿಗೆ ದೂರಬೇಡಿ - ಹೀಗೆಂದು ಪತ್ರ ಬರೆದಿಟ್ಟು ಕಳ್ಳನೊಬ್ಬ ತಾನು ಕದ್ದಿದ್ದ ಆಭರಣವನ್ನು ಹಿಂತಿರುಗಿಸಿದ....

ಅಲಪ್ಪುಳ (ಕೇರಳ): ನಾನು ಮತ್ತೆ ಅಂತಹ ಕೃತ್ಯ ಎಸಗುವುದಿಲ್ಲ.ದಯವಿಟ್ಟು ನನ್ನ ವಿರುದ್ಧ ಪೊಲೀಸರಿಗೆ ದೂರಬೇಡಿ - ಹೀಗೆಂದು ಪತ್ರ ಬರೆದಿಟ್ಟು ಕಳ್ಳನೊಬ್ಬ ತಾನು ಕದ್ದಿದ್ದ ಆಭರಣವನ್ನು ಹಿಂತಿರುಗಿಸಿದ ಅಪರೂಪದ ಘಟನೆ ಕೇರಳದಲ್ಲಿ ನಡೆದಿದೆ.
ಕೇರ;ಳದ ಅಲಪ್ಪುಳದಲ್ಲಿ ನಡೆದ ಘಟನೆಯಲ್ಲಿ. ಕುರುಮಾಡಿ ನಿವಾಸಿ ಮಧುಕುಮಾರ್ ಮನೆಯಿಂದ ಕಳುವಾಗಿದ್ದ ಚಿನ್ನವನ್ನು ಕಳ್ಳ ಹಿಂತಿರುಗಿಸಿದ್ದಾನೆ.
ಮಂಗಳವಾರ ಅಣ್ಣನ ಮಗನ ಮದುವೆ ಕಾರ್ಯಕ್ಕೆಂದು ತೆರಳಿದ್ದ ಮಧುಕುಮಾರ್ ತಮ್ಮ ಮನೆ ಮುಂದಿನ ಗೇಟ್ ಗೆ ಬೀಗ ಹಾಕುವುದು ಮರೆತಿದ್ದಾರೆ. ರಾತ್ರಿ 10.30ರ ವೇಳೆಗೆ ಮನೆಗೆ ಹಿಂತಿರುಗುವಾಗ ಅವರಿಗೆ ಆಘಾತ ಕಾದಿತ್ತು. ಮನೆ ಬಾಗಿಲು ಮುರಿದ ಕಳ್ಳರು ಮನೆಯಲ್ಲಿದ್ದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು. ಅಲ್ಲದೆ ಮನೆಯ ಹಿಂಭಾಗದ ಬಾಗಿಲನ್ನೂ ಸಹ ತೆರೆದದ್ದು ಇನ್ನಷ್ಟು ಗುಮಾನಿಗೆ ಕಾರನವಾಗಿತ್ತು.
ತಕ್ಷಣವೇ ಪೋಲೀಸರಿಗೆ ಈ ಕುರಿತು ಮಾಹಿತಿ ತಿಳಿಸಿದ ಕುಮಾರ್ ಕಲವು ಮಾಡಿದ ಶಂಕಿತ ವ್ಯಕ್ತಿಯ ಹೆಸರನ್ನೂ ಸಹ ಪೋಳೀಸರಿಗೆ ಹೇಳಿದ್ದಾರೆ,.
ಆದರೆ ಗುರುವಾರ ಬೆಳಿಗ್ಗೆ ಘಟನೆಗೆ ವಿಚಿತ್ರ ತಿರುವು ದೊರಕಿತ್ತು. ಮನೆಯ ಮುಂಭಾಗದ ಗೇಟ್ಮುಂದೆ ಕಳುವಾದ ಆಭರಣದ ಕಟ್ಟುಮತ್ತು ಪತ್ರವೊಂದು ಕ್ಂಡಿತ್ತು. ಪತ್ರ ಒಡೆದು ನೊಡಲಾಗಿ "ನನ್ನನ್ನು ಕ್ಷಮಿಸಿ, ಹಣಕಾಸಿನ ಅವಶ್ಯಕತೆ ಇದ್ದ ಕಾರಣ ಒತ್ತಡಕ್ಕೊಳಗಾದ ನಾನು ನಿಮ್ಮ ಮನೆಯ ಚಿನ್ನವನ್ನು ಕಳವು ಮಾಡಿದೆ. ಆದರೆ ಇನ್ನೊಂದೂ ಹೀಗೆ ಮಾಡಲಾರೆ, ನನ್ನನ್ನು ಪೋಲೀಸರಿಗೆ ಹಿಡಿದು ಕೊಡಬೇಡಿ" ಎಂದು ಬರೆದಿದ್ದದ್ದು ಕ್ಂಡಿದೆ.
ಪತ್ರ ಹಾಗೂ ಚಿನ್ನ ಸಿಕ್ಕ ಹಿನ್ನೆಲೆಯಲ್ಲಿ ಕುಮಾರ್ ತಾವು ನೀಡಿದ ದೂರನ್ನು ಹಿಂಪಡೆದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT