ದೇಶ

ಮಹಾರಾಷ್ಟ್ರ: ಶಾಲೆಯ ಅಡುಗೆ ಕೋಣೆಯಲ್ಲಿ60 ಹಾವುಗಳು ಪತ್ತೆ

Srinivas Rao BV
ಔರಂಗಾಬಾದ್: ಮಹಾರಾಷ್ಟ್ರದ ಹಿಂಗೊಲಿ ಜಿಲ್ಲೆಯ ಜಿಲ್ಲಾ ಪಂಚಾಯತ್ ಶಾಲೆಯ ಅಡುಗೆ ಕೋಣೆಯಲ್ಲಿ 60 ವಿಷಕಾರಿ ಹಾವುಗಳು ಪತ್ತೆಯಾಗಿ ಕೆಲ ಕಾಲ ಆತಂಕ ಮೂಡಿಸಿತ್ತು. 
ಅಡುಗೆ ಕೋಣೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಸಿಬ್ಬಂದಿ ವಿಷಕಾರಿ ಹಾವುಗಳಿರುವುದನ್ನು ಕಂಡಿದ್ದಾರೆ. ಕಟ್ಟಿಗೆಗಳ ನಡುವೆ ಹಾವುಗಳು ಕಂಡುಬಂದಿದ್ದು, ಕಟ್ಟಿಗೆಗಳನ್ನು ತೆಗೆದುಕೊಳ್ಳುವುದಕ್ಕೆ ಹೋದಾಗ ಕಣ್ಣಿಗೆ ಬಿದ್ದಿವೆ.  ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಕಲ್ಲು ಮತ್ತು ದೊಣ್ಣೆಗಳನ್ನು ತಂದು ದಾಳಿ ಮಾಡಲು ಮುಂದಾದರು ಆದರೆ ಅವರನ್ನು ತಡೆದು, ಹಾವು ಹಿಡಿಯುವವರಾದ  ವಿಕಿ ದಲಾಲ್ ಎಂಬುವವರನ್ನು ಕರೆತರಲಾಯಿತು. ಸುಮಾರು ಎರಡು ಗಂಟೆಗಳ ಕಾರ್ಯಾಚರಣೆಗಳ ನಂತರ ಎಲ್ಲಾ ಹಾವುಗಳನ್ನು ಹಿಡಿದು ಅರಣ್ಯಾಧಿಕಾರಿಗಳಿಗೆ ಒಪ್ಪಿಸಲಾಗಿದೆ. 
SCROLL FOR NEXT