ಕೇರಳ ಚರ್ಚ್ ಅತ್ಯಾಚಾರ ಪ್ರಕರಣ:ಮತ್ತೊಬ್ಬ ಪಾದ್ರಿ ಬಂಧನ
ತಿರುವಳ್ಳ(ಕೇರಳ): ಲೈಂಗಿಕ ಕಿರುಕುಳ ನೀಡಿದ್ದ ಆರೋಪದಡಿಯಲ್ಲಿ ಮಲಂಕರ ಸಿರಿಯನ್ ಆರ್ಥೋಡಾಕ್ಸ್ ಚರ್ಚ್ ಗೆ ಸೇರಿದ್ದ ಇನ್ನೋರ್ವ ಪಾದ್ರಿಯನ್ನು ಕೇರಳ ಕ್ರೈಂ ಬ್ರ್ಯಾಂಚ್ ಪೋಲೀಸರು ಬಂಧಿಸಿದ್ದಾರೆ.
ಪಾದ್ರಿ ಜಾನ್ಸನ್ ವಿ. ಮ್ಯಾಥೀವ್ ಬಂಧಿತರಾಗಿದ್ದು ಕ್ರೈಸ್ತ ಮಹಿಳೆಯೊಬ್ಬರನ್ನು ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳ ನೀಡಿದ ಆರೋಪ ಇವರ ಮೇಲಿದೆ. ಪ್ರಕರಣ ಸಂಬಂಧ ಇದಾಗಲೇ ನಾಲ್ವರು ಪಾದ್ರಿಗಳನ್ನು ಬಂದಿಸಲಾಗಿದ್ದು ಜಾನ್ಸನ್‌ರನ್ನು ಮೂರನೇ ಆರೋಪಿಯನ್ನಾಗಿ ಪರಿಗಣಿಸಲಾಗಿದೆ.
ತನ್ನ ಕಾರಿನಲ್ಲಿ ಅತ್ಯಾಚಾರ ಸಂತ್ರಸ್ತೆಯನ್ನು ಇರಿಸಿಕೊಂಡಿದ್ದ ಹಾಗೂ ಆಕೆಗೆ ಅಶ್ಲೀಲ ಸಂದೇಶ ರವಾನಿಸಿದ್ದ ಎಂದು ಪಾದ್ರಿ ಜಾನ್ಸನ್ ವಿ. ಮ್ಯಾಥೀವ್ ವಿರುದ್ಧ ಆರೋಪ ಕೇಳಿಬಂದಿದೆ. ಪಾದ್ರಿಯ ವಿಚಾರಣೆಗಾಗಿ ಆತನನ್ನು ತಿರುವಳ್ಳ ದಲ್ಲಿರುವ ಡಿವೈಸ್ಪಿ ಕಛೇರಿಗೆ ತರಳಾಗಿದೆ. ಬಳಿಕ ಅವರನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಪ್ರಕರಣದ ಇತರೆ ಆರೋಪಿಗಳ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬುಧವಾರ ನ್ಯಾಯಾಲಯ ತಿರಸ್ಕರಿಸಿದೆ.
ಘಟನೆ ಸಂಬಂಧ ಇನ್ನೂ ಇಬ್ಬರು ಆರೋಪಿಗಳನ್ನು ಬಂಧಿಸಬೇಕಾಗಿದ್ದು ಫಾದರ್ ಅಬ್ರಹಾಂ ವರ್ಗೀಸ್ ಅಲಿಯಾಸ್ ಸೋನಿ ಹಾಗೂ ಫಾದರ್ ಜಾರ್ಜ್ ತಲೆಮರೆಸಿಕೊಂಡಿದ್ದಾರೆ. ಪ್ರಕರಣದ ಎರಡನೇ ಆರೋಪಿಯಾಗಿರುವ ಪಾದ್ರಿ ಜಾಬ್ ಮ್ಯಾಥೀವ್ ಕೊಲ್ಲಂ ಪೊಲೀಸರರೆದುರು ಶರಣಾಗಿದ್ದರು
ಪ್ರಕರಣದಲ್ಲಿ ಮೂವರು ಪಾದ್ರಿಗಳ ವಿರುದ್ಧ ಸೆಕ್ಷನ್ 376 ಅತ್ಯಾಚಾರ ಕೇಸ್ ಹಾಕಲಾಗಿದ್ದು, ಜಾನ್ಸನ್ ವಿರುದ್ಧ ಮಾತ್ರ ಕೇವಲ ಸೆಕ್ಷನ್ 354 ಅಡಿ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿಸಲಾಗಿದೆ/