ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಯುವತಿಯರ ನಾಪತ್ತೆ: ಪ್ರತಿ ಪ್ರಕರಣವನ್ನೂ ಸಿನಿಮಾ ಮಾದರಿಯದ್ದು ಅಂದುಕೊಳ್ಳಬೇಡಿ: ಪೊಲೀಸರಿಗೆ ಬಾಂಬೆ ಹೈಕೋರ್ಟ್

ಥಾಣೆಯಲ್ಲಿ ಕಳೆದ ವರ್ಷ ನಾಪತ್ರೆಯಾದ ಯುವತಿಯರನ್ನು ಪತ್ತೆ ಮಾಡುವುದರಲ್ಲಿನ ಪೊಲೀಸರ ವೈಫಲ್ಯಗಳ ಬಗ್ಗೆ ಬಾಂಬೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಪ್ರತಿ ಪ್ರಕರಣವನ್ನೂ ಸಿನಿಮಾ ಮಾದರಿಯದ್ದು

ಯುವತಿಯರ ನಾಪತ್ತೆ: ಪ್ರತಿ ಪ್ರಕರಣವನ್ನೂ ಸಿನಿಮಾ ಮಾದರಿಯದ್ದು ಅಂದುಕೊಳ್ಳಬೇಡಿ: ಪೊಲೀಸರಿಗೆ ಬಾಂಬೆ ಹೈಕೋರ್ಟ್
Srinivas Rao BV
Updated On : 15 Jul 2018, 6:39 am
ಮುಂಬೈ: ಥಾಣೆಯಲ್ಲಿ ಕಳೆದ ವರ್ಷ ನಾಪತ್ರೆಯಾದ ಯುವತಿಯರನ್ನು ಪತ್ತೆ ಮಾಡುವುದರಲ್ಲಿನ ಪೊಲೀಸರ ವೈಫಲ್ಯಗಳ ಬಗ್ಗೆ ಬಾಂಬೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಪ್ರತಿ ಪ್ರಕರಣವನ್ನೂ ಸಿನಿಮಾ ಮಾದರಿಯದ್ದು ಅಂದುಕೊಳ್ಳಬೇಡಿ ಎಂದು ಹೇಳಿದೆ. 
ಯುವತಿಯರ ನಾಪತ್ತೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ತನ್ನ ಮನಸ್ಥಿತಿಯನ್ನು ಬದಲಾವಣೆ ಮಾಡಿಕೊಳ್ಳಬೇಕಿದೆ. ನಾಪತ್ತೆಯಾದ ಪ್ರತಿ ಯುವತಿಯೂ ಸಿನಿಮಾದಲ್ಲಿ ತೋರಿಸಿದಂತೆ ತನ್ನ ಪ್ರಿಯಕರನೊಂದಿಗೆ ಪರಾರಿಯಾಗಿರುತ್ತಾಳೆ ಅಂದುಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. 
ಪೊಲೀಸರ ಮನಸ್ಥಿತಿಯ ಬಗ್ಗೆ ಕೋರ್ಟ್ ಗೆ ತೀವ್ರ ಅಸಮಾಧಾನವಾಗಿದೆ. . ನಾಪತ್ತೆಯಾದ ಪ್ರತಿ ಯುವತಿಯೂ ಸಿನಿಮಾದಲ್ಲಿ ತೋರಿಸಿದಂತೆ ತನ್ನ ಪ್ರಿಯಕರನೊಂದಿಗೆ ಪರಾರಿಯಾಗಿರುತ್ತಾಳೆ ಎಂಬ ದೃಷ್ಟಿಕೋನದಿಂದಲೇ ಪೊಲೀಸರು, ತನಿಖಾಧಿಕಾರಿಗಳು ಪ್ರಕರಣಗಳನ್ನು ಪರಿಗಣಿಸುವುದು ಬೇಡ ಎಂದು ನ್ಯಾ. ಎಸ್ ಸಿ ಧರ್ಮಾಧಿಕಾರಿ ಹಾಗೂ ಭಾರತಿ ದಂಗ್ರೆ ಅವರಿದ್ದ ಪೀಠ ಹೇಳಿದೆ. 

Advertisement

Advertisement

ಈ ಪ್ರಕರಣಗಳು ಸಿನಿಮಾ ಘಟನೆಗಳಲ್ಲ ನಿಜ ಜೀವನದ ಘಟನೆಗಳು, ಮಕ್ಕಳನ್ನು ಕಾಣದೇ ಪೋಷಕರು ನೋವು ಎದುರಿಸುತ್ತಿರುತ್ತಾರೆ. ನಾಪತ್ತೆಯಾದ ಮಕ್ಕಳೂ ಕಂಗಾಲಾಗಿರುತ್ತಾರೆ ಆದ್ದರಿಂದ ಪೊಲೀಸರು ತಮ್ಮ ಮನಸ್ಥಿತಿಯನ್ನು ಬದಲಾವಣೆ ಮಾಡಿಕೊಳ್ಳಬೇಕಿದೆ ಎಂದು ಕೋರ್ಟ್ ಹೇಳಿದೆ. 
ತಮ್ಮ ಮಗಳು ನಾಪತ್ತೆಯಾಗಿದ್ದಾಳೆ ಎಂದು ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದ ಪೋಷಕರೊಬ್ಬರು ಕೋರ್ಟ್ ಗೆ ಅರ್ಜಿ ಸಲ್ಲಿಸಿ ತನಿಖೆಯನ್ನು ತ್ವರಿತಗೊಳಿಸುವಂತೆ ಪೊಲೀಸರಿಗೆ ಸೂಚನೆ ನೀಡಬೇಕೆಂದು ಮನವಿ ಮಾಡಿದ್ದರು. ಈ ಅರ್ಜಿ ವಿಚಾರಣೆ ವೇಳೆ ಕೋರ್ಟ್ ಪೊಲೀಸರ ಮನಸ್ಥಿತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement