ಪಾಂಡಿಚರಿ: 2018ರ ಫೀಫಾ ವಿಶ್ವಕಪ್ ಫೈನಲ್ಸ್ ನಲ್ಲಿ ಕ್ರೊವೇಷಿಯಾ ವಿರುದ್ಧ ಫ್ರಾನ್ಸ್ ಜಯ ಗಳಿಸಿದ್ದು, ಪುದುಚರಿ ರಾಜ್ಯಪಾಲೆ ಕಿರಣ್ ಬೇಡಿ ಪುದುಚೆರಿಯ ಜನತೆಗೆ ಅಭಿನಂದನೆ ಸಲ್ಲಿಸಿದ್ದಾರೆ.
ಸಾಮಾನ್ಯವಾಗಿ ತಮ್ಮ ಹೇಳಿಕೆ, ಸಾಮಾಜಿಕ ಜಾಲತಾಣದಲ್ಲಿನ ಬರಹದ ಮೂಲಕ ಸುದ್ದಿಯಾಗುವ ಕಿರಣ್ ಬೇಡಿ, ಈ ಬಾರಿ ಫೀಫಾ ವಿಶ್ವಕಪ್ ಗೆದ್ದ ತಂಡಕ್ಕೆ ಅಭಿನಂದನೆ ಸಲ್ಲಿಸುವ ವಿಷಯದಲ್ಲಿಯೂ ಕಿರನ್ ಬೇಡಿ ಸುದ್ದಿಗೆ ಗ್ರಾಸವಾಗಿದ್ದಾರೆ. ಫ್ರಾನ್ಸ್ ತಂಡ ಗೆಲ್ಲುತ್ತಿದ್ದಂತೆಯೇ, ಟ್ವೀಟ್ ಮಾಡಿದ ಕಿರಣ್ ಬೇಡಿ, ಈ ಹಿಂದೆ ಫ್ರೆಂಚ್ ಆಡಳಿತಕ್ಕೊಳಪಟ್ಟಿದ್ದ ಪುದುಚರಿಯ ಜನತೆ ಫೀಫಾ ವಿಶ್ವಕಪ್ ನ್ನು ಗೆದ್ದಿದ್ದೇವೆ, ಅಭಿನಂದನೆಗಳು ಸ್ನೇಹಿತರೇ ಎಂದು ಟ್ವೀಟ್ ಮಾಡಿದ್ದಾರೆ.