ದೇಶ

ಭಾರತದ ಗಡಿಯಲ್ಲಿ ಚೀನಾ ಮಾನವರಹಿತ ಹವಾಮಾನ ಕೇಂದ್ರ: ಇದರ ಹಿಂದಿನ ಮರ್ಮವೇನು ಗೊತ್ತೇ?

Srinivas Rao BV
ಬೀಜಿಂಗ್: ಭಾರತದೊಂದಿಗೆ ಶೀಥಲ ಸಮರದ ನಡುವೆಯೇ ಚೀನಾ ಟಿಬೆಟ್ ನಲ್ಲಿ ಮಾನವ ರಹಿತ ಹವಾಮಾನ ಕೇಂದ್ರ ಸ್ಥಾಪಿಸುತ್ತಿದ್ದು, ಒಂದು ವೇಳೆ ಭಾರತದೊಂದಿಗೆ ಸಶಸ್ತ್ರ ಸಂಘರ್ಷ ಎದುರಾದರೆ ಮಾನವ ರಹಿತ ಕೇಂದ್ರವನ್ನು ಬಳಸಿಕೊಳ್ಳುವ ಮಾದರಿಯಲ್ಲಿ ನಿರ್ಮಾಣ ಮಾಡಿದೆ.
ಚೀನಾದ ಸರ್ಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್ ಪ್ರಕಟ ಮಾಡಿರುವ ವರದಿಯ ಪ್ರಕಾರ, ನೈಋತ್ಯ ಚೀನಾದ ಭಾರತದ ಗಡಿಯಲ್ಲಿ ಈ ಮಾನವ ರಹಿತ ಹವಾಮಾನ ಕೇಂದ್ರದ ನಿರ್ಮಾಣ ಕಾಮಗಾರಿಯನ್ನು ಚೀನಾ 2018 ರ ಆರಂಭದಲ್ಲಿಯೇ ಪ್ರಾರಾಂಭಿಸಿತ್ತು. ಅರುಣಾಚಲ ಪ್ರದೇಶದ ಬಳಿ ನಿರ್ಮಾಣವಾಗುತ್ತಿರುವ ಈ ಮಾನವ ರಹಿತ ಹವಾಮಾನ ಕೇಂದ್ರದಿಂದ ಚೀನಾದ ಸೇನೆಗೆ ಕ್ಷಿಪಣಿ ಹಾಗೂ ಯುದ್ಧವಿಮಾನಗಳ ಕಾರ್ಯಾಚರಣೆಗೆ ಪೂರಕವಾಗುವ ಹವಾಮಾನದ ಬಗ್ಗೆ ಸುಲಭವಾಗಿ ಮಾಹಿತಿ ಲಭ್ಯವಾಗಲಿದೆ. 
ಗಡಿ ಪ್ರದೇಶದಲ್ಲಿ ಹವಾಮಾನದ ಬಗ್ಗೆ ನಿಖರ ಮಾಹಿತಿ ಚೀನಾಗೆ ಲಭ್ಯವಾಗಲಿದ್ದು, ಒಂದು ವೇಳೆ ಭಾರತದೊಂದಿಗೆ ಸಶಸ್ತ್ರ ಸಂಘರ್ಷ ನಡೆದರೆ ಚೀನಾಗೆ ಈ ಮಾನವ ರಹಿತ ಹವಾಮಾನ ಕೇಂದ್ರ ನೆರವಾಗಲಿದೆ. ತಾಪಮಾನ, ವಾಯು ಒತ್ತಡ, ಗಾಳಿ ವೇಗ, ಗಾಳಿಯ ದಿಕ್ಕು, ಆರ್ದ್ರತೆ ಮತ್ತು ಮಳೆ ಬಗ್ಗೆ ಈ ಹಿಂದಿಗಿಂತಲೂ ಸಹ ನಿಖರ ಮಾಹಿತಿ ಚೀನಾಗೆ ಈಗ ಲಭ್ಯವಾಗಲಿದೆ ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ. 
ಚೀನಾ ಈಗ ನಿರ್ಮಾಣ ಮಾಡಿರುವ ಟಿಬೆಟ್ ಪ್ರಾಂತ್ಯದ ಮಾನವ ರಹಿತ ಹವಾಮಾನ ಕೇಂದ್ರದ ಪ್ರದೇಶದಲ್ಲಿ ಕೇವಲ 9 ಮನೆಗಳಿದ್ದು, 32 ಜನರು ವಾಸವಿದ್ದಾರೆ.
SCROLL FOR NEXT