ಕಾಂಗ್ರಾ(ಹಿಮಾಚಲ ಪ್ರದೇಶ): ಭಾರತೀಯ ವಾಯುಪಡೆ ಪೈಲಟ್ ಜೆಟ್ ಮಿಗ್ 21 ಯುದ್ಧ ವಿಮಾನ ಪತನಗೊಂಡಿದ್ದು ಪೈಲಟ್ ಸಾವನ್ನಪ್ಪಿರುವ ಘಟನೆ ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿ ನಡೆದಿದೆ.
ಪಂಜಾಬ್ ನ ಪಠಾಣ್ ಕೋಟ್ ವಾಯುನೆಲೆಯಿಂದ ಹೊರಟಿದ್ದ ಈ ವಿಮಾನವು ಪಟ್ಟಾ ಜಟ್ಟಿಯಾನ್ ಗ್ರಾಮದ ಕೃಷಿ ಭೂಮಿಯಲ್ಲಿ ಪತನಗೊಂಡಿದ್ದು ಬೆಂಕಿಗಾಹುತಿಯಾಗಿದೆ,.
ವಿಮಾನದ ಅವಶೇಷಗಳು ಜಮೀನಿನ ತುಂಬಾ ಚದುರಿ ಹೋಗಿವೆ. ಪೈಲಟ್ ಸಾವನ್ನಪ್ಪಿದ್ದಾರೆ ಎಂದು ಎ ಎನ್ ಐ ಸುದ್ದಿಸಂಸ್ಥೆ ವರದ್ದಿ ಮಾಡಿದೆ.
ಘಟನಾ ಸ್ಥಳಕ್ಕೆ ರಕ್ಷಣಾ ಪಡೆಗಳು ಧಾವಿಸಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.