ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಚಿಸಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ 51 ಮಂದಿ ನೇಮಕ ಮಾಡಿದ್ದು, ಅದರಲ್ಲಿ ಕೇವಲ 7 ಮಹಿಳೆಯರಿಗೆ ಮಾತ್ರ ಅವಕಾಶ ನೀಡಲಾಗಿದೆ.
ಸಂಸದರಾದ ಅಂಬಿಕಾ ಸೋನಿ, ಕುಮಾರಿ ಸೆಲ್ಜಾ ಅವರನ್ನು ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಲಾಗಿದೆ. ಮಾಜಿ ಸಿಎಂ ಶೀಲಾ ದೀಕ್ಷಿತ್, ರಜನಿ ಪಾಟೀಲ್, ಆಶಾ ಕುಮಾರಿ, ಶಾಶ್ವತ ಆಹ್ವಾನಿತರಾಗಿದ್ದಾರೆ. ಅಸ್ಸಾಂನ ಸಂಸದೆ ಹಾಗೂ ಮಹಿಳಾ ಕಾಂಗ್ರೆಸ್ ಮುಖ್ಯಸ್ಥೆ ವಿಶೇಷ ಆಹ್ವಾನಿತರಾಗಿ ನೇಮಕವಾಗಿದ್ದಾರೆ.
ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ಮಸೂದೆಗೆ ಒತ್ತಾಯಿಸುವ ಕಾಂಗ್ರೆಸ್ , ಕಾರ್ಯಾಕಾರಿ ಸಮಿತಿಯ 51 ಸದಸ್ಯರಲ್ಲಿ ಕೇವಲ 7 ಮಹಿಳೆಯರಿಗೆ ಮಾತ್ರ ಸ್ಥಾನ ನೀಡಿದೆ.
ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಡಾ. ಮನಮೋಹನ್ ಸಿಂಗ್, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಮೋತಿಲಾಲ್ ವೋರಾ, ಎ.ಕೆ.ಆ್ಯಂಟನಿ, ಅಹ್ಮದ್ ಪಟೇಲ್, ಅಂಬಿಕಾ ಸೋನಿ, ಗುಲಾಂ ನಬಿ ಆಜಾದ್, ಉಮನ್ ಚಾಂಡಿ, ತರುಣ್ ಗಗೊಯ್, ಆನಂದ ಶರ್ಮಾ, ಹರೀಶ್ ರಾವತ್, ಕುಮಾರಿ ಸೆಲ್ಜಾ, ಮುಕುಲ್ ವಾಸ್ನಿಕ್, ಅವಿನಾಶ್ ಪಾಂಡೆ, ಕೆ.ಸಿ.ವೇಣುಗೋಪಾಲ್, ದೀಪಕ್ ಬಬಾರಿಯಾ, ತಮರದ್ವಾಜ್ ಸಾಹು, ರಘುವೀರ್ ಮೀನಾ, ಗಾಯಕ್‌ಕಂಗಮ್, ಅಶೋಕ್ ಗೆಹ್ಲೊಟ್. ಸಮಿತಿ ಸದಸ್ಯರಾಗಿದ್ದಾರೆ.