ದೇಶ

ರಾಜ್ಯಸಭೆಯ ಮೂವರು ನಾಮನಿರ್ದೇಶಿತ ಸದಸ್ಯರು ಪ್ರಮಾಣ ವಚನ ಸ್ವೀಕಾರ

Nagaraja AB

ನವದೆಹಲಿ : ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ  ನಾಮನಿರ್ದೇಶಿತಗೊಂಡಿದ್ದ ಕವಿ ರಾಕೇಶ್ ಸಿನ್ಹಾ, ನೃತ್ಯಗಾರ್ತಿ ಸೊನಾಲ್ ಮಾನ್ ಸಿಂಗ್ ಹಾಗೂ ಶಿಲ್ಪಕಲೆ ಕಲಾವಿದ  ರಘುನಾಥ್ ಮೊಹಾಪಾತ್ರ ಇಂದು ರಾಜ್ಯಸಭೆಯ ಸದಸ್ಯರಾಗಿ  ಪ್ರಮಾಣ ವಚನ ಸ್ವೀಕರಿಸಿದರು.

ಉಪರಾಷ್ಟ್ರಪತಿ ಹಾಗೂ ರಾಜ್ಯಸಭೆಯ ಸಭಾಪತಿ ಎಂ. ವೆಂಕಯ್ಯನಾಯ್ಡು ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು.

ಜುಲೈ 14 ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್,  ಮಾಜಿ ನಾಯಕ ರಾಕೇಶ್ ಶಕಲ್ ಸೇರಿದಂತೆ ನಾಲ್ವರನ್ನು  ರಾಜ್ಯಸಭೆಗೆ ನಾಮನಿರ್ದೇಶನಗೊಳಿಸಿದ್ದರು. ಆದರೆ. ಇಂದು  ರಾಕೇಶ್ ಸಿನ್ಹಾ, ನೃತ್ಯಗಾರ್ತಿ ಸೊನಾಲ್ ಮಾನ್ ಸಿಂಗ್ ಹಾಗೂ ಶಿಲ್ಪಕಲೆ ಕಲಾವಿದ  ರಘುನಾಥ್ ಮೊಹಾಪಾತ್ರ  ಪ್ರಮಾಣ ವಚನ ಸ್ವೀಕರಿಸಿದರು.

 ಒಡಿಶಾದ್ದ ಪ್ರಖ್ಯಾತ ಶಿಲ್ಪಕಲಾವಿದರಾಗಿರುವ ರಘುನಾಥ್ ಮೊಹಾಪಾತ್ರ ಪದ್ಮ ವಿಭೂಷ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. 1959 ರಿಂದಲೂ 2000 ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ. ಪ್ರಸಿದ್ಧ ತೀರ್ಥಕ್ಷೇತ್ರ ಪುರಿ ಜಗನ್ನಾಥ ದೇವಾಲಯದಲ್ಲೂ ಸುಂದರ ಕೆತ್ತನೆ ಕೆಲಸ ಮಾಡಿದ್ದಾರೆ.

ರಾಕೇಶ್ ಸಿನ್ಹಾ, ಆರ್ ಎಸ್ ಎಸ್ ನಾಯಕರಾಗಿದ್ದು,  ದೆಹಲಿ ಮೂಲಕ ಭಾರತೀಯ ನೀತಿ ಪೌಂಢೇಷನ್ ನ   ಗೌರವಾನ್ವಿತ ನಿರ್ದೇಶಕರು ಹಾಗೂ ಚಿಂತಕರಾಗಿದ್ದಾರೆ.  ದೆಹಲಿ ವಿಶ್ವವಿದ್ಯಾಲಯದ ಮೊತಿಲಾಲ್ ನೆಹರೂ ಕಾಲೇಜಿನಲ್ಲಿ ಪ್ರೋಫೆಸರ್ ಆಗಿದ್ದಾರೆ. ಅಲ್ಲದೇ ಭಾರತೀಯ ಸಾಮಾಜಿಕ ವಿಜ್ಞಾನ ಸಂಶೋಧನಾ ಸಮಿತಿಯ ಸದಸ್ಯರಾಗಿದ್ದಾರೆ.

ಭಾರತೀಯ ಶಾಸ್ತ್ರೀಯ ನೃತ್ಯಗಾರ್ತಿಯರಲ್ಲಿ ಒಬ್ಬರಾಗಿದ್ದಾರೆ. ಆರು ದಶಕಗಳಿಗೂ ಹೆಚ್ಚು ಕಾಲ ಭರತನಾಟ್ಯ ಹಾಗೂ ಒಡಿಶಿ ನೃತ್ಯ ಪ್ರದರ್ಶಿಸಿದ್ದಾರೆ. ಇವರು ಉತ್ತಮ ನೃತ್ಯ ಶಿಕ್ಷಕರು ಹಾಗೂ ಸಾಮಾಜಿಕ ಹೋರಾಟಗಾರರೂ ಆಗಿದ್ದಾರೆ.   1977ರಲ್ಲಿ ದೆಹಲಿಯಲ್ಲಿ ಭಾರತೀಯ ಶಾಸ್ತ್ರೀಯ ನೃತ್ಯ ಕೇಂದ್ರವನ್ನು ಸ್ಥಾಪಿಸಿದ್ದಾರೆ..
SCROLL FOR NEXT