ದೇಶ

ವಿವಿಐಪಿ ಕ್ಯಾಪ್ಟರ್ ಹಗರಣ: ವಾಯುಪಡೆ ಮಾಜಿ ಮುಖ್ಯಸ್ಥ ತ್ಯಾಗಿ ವಿರುದ್ಧ ಚಾರ್ಜ್ ಶೀಟ್

Lingaraj Badiger
ನವದೆಹಲಿ: ವಿವಿಐಪಿ ಹೆಲಿಕಾಪ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ವಾಯುಪಡೆ ಮಾಜಿ ಮುಖ್ಯಸ್ಥ ಏರ್ ಚೀಫ್ ಮಾರ್ಷೆಲ್ ಎಸ್.ಪಿ.ತ್ಯಾಗಿ ಸೇರಿದಂತೆ ಏಳು ಆರೋಪಿಗಳ ವಿರುದ್ಧ ಜಾರಿ ನಿರ್ದೇಶನಾಲಯ ಬುಧವಾರ ಪೂರಕ ಚಾರ್ಜ್ ಶೀಟ್ ಸಲ್ಲಿಸಿದೆ.
ಎಸ್ ಪಿ ತ್ಯಾಗಿ, ಅವರ ಇಬ್ಬರು ಸಹೋದರರ ವಿರುದ್ಧ, ವಕೀಲ ಗೌತಮ್ ಖೇತನ್ ಹಾಗೂ ಇಬ್ಬರು ಇಟಾಲಿಯನ್ ಮಧ್ಯವರ್ತಿಗಳ ವಿರುದ್ಧ ವಿಶೇಷ ನ್ಯಾಯಾಧೀಶ ಅರವಿಂದ್ ಕುಮಾರ್ ಅವರಿಗೆ ಇಡಿ ಚಾರ್ಜ್ ಶೀಟ್ ಸಲ್ಲಿಸಿದೆ.
ವಿಶೇಷ ಸರ್ಕಾರಿ ಅಭಿಯೋಜಕ ಎನ್ ಕೆ ಮಟ್ಟ ಅವರ ಮೂಲಕ ಇಡಿ ಇಂದು ಚಾರ್ಜ್ ಶೀಟ್ ಸಲ್ಲಿಸಿದ್ದು, 28 ಮಿಲಿಯನ್ ಇರೋ ಹಣ ಅಕ್ರಮ ವಹಿವಾಟು ನಡೆಸಲಾಗಿದೆ ಎಂದು ಆರೋಪಿಸಿದೆ. ಅಲ್ಲದೆ ಈ ಹಣವನ್ನು ವಿವಿಧ ವಿದೇಶಿ ಕಂಪನಿಗಳ ಮೂಲಕ ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ ಎಂದು ದೂರಿದೆ.
ತ್ಯಾಗಿ ಅವರು ಅಗಸ್ಟಾ ವೆಸ್ಟ್​ಲ್ಯಾಂಡನ್ನು ಹರಾಜುದಾರರ ಪಟ್ಟಿಗೆ  ಸೇರ್ಪಡೆ ಮಾಡಲು ಅನುಕೂಲವಾಗುವಂತೆ, ಹೆಲಿಕಾಪ್ಟರ್​ನ ಹಾರಾಟದ ಮಿತಿಯನ್ನು 6,000 ಮೀ.ನಿಂದ 4500 ಮೀ.ಗಳಿಗೆ (15,000 ಅಡಿಗಳು) ಇಳಿಸಿದರು. ಇದಕ್ಕೆ ಪ್ರತಿಯಾಗಿ ತ್ಯಾಗಿ  ಭಾರಿ ಪ್ರಮಾಣದ ಕಿಕ್ ಬ್ಯಾಕ್ ಪಡೆದಿದ್ದರು ಎಂಬ ಆರೋಪವನ್ನು ಅವರ ವಿರುದ್ಧ ಮಾಡಲಾಗಿದೆ.
SCROLL FOR NEXT