ಸೆಪ್ಟಂಬರ್ 6ರಂದು ಭಾರತ-ಅಮೆರಿಕಾ 2+2 ಮಾತುಕತೆ
ಈಗಾಗಲೇ ಎರಡು ಬಾರಿ ಮುಂದೂಡಿಕೆಯಾಗಿರುವ ಭಾರತ ಮತ್ತು ಅಮೆರಿಕ ನಡುವಣ ಬಹು ನಿರೀಕ್ಷಿತ 2+2 ಮಾತುಕತೆ ಸೆಪ್ಟಂಬರ್ 6ರಂದು ನವದೆಹಲಿಯಲ್ಲಿ ನಡೆಯಲಿದೆ....
ನವದೆಹಲಿ: ಈಗಾಗಲೇ ಎರಡು ಬಾರಿ ಮುಂದೂಡಿಕೆಯಾಗಿರುವ ಭಾರತ ಮತ್ತು ಅಮೆರಿಕ ನಡುವಣ ಬಹು ನಿರೀಕ್ಷಿತ 2+2 ಮಾತುಕತೆ ಸೆಪ್ಟಂಬರ್ 6ರಂದು ನವದೆಹಲಿಯಲ್ಲಿ ನಡೆಯಲಿದೆ.
ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಅಮೆರಿಕಾ ರಾಜ್ಯ ಇಲಾಖೆ.. ಸೆಪ್ಟಂಬರ್ ಮೊದಲ ವಾರ ಅಮೆರಿಕ ಜೊತೆ 2+2 ಸಂವಾದ ನಡೆಯಲಿದೆ. ದ್ವಿಪಕ್ಷೀಯ ಸಂಬಂಧ ವೃದ್ಧಿ ಮತ್ತು ರಕ್ಷಣಾ ಸಹಕಾರ ಬಲಗೊಳಿಸುವುದು ಈ ಮಾತುಕತೆಯ ಮುಖ್ಯ ಕಾರ್ಯಸೂಚಿ ಎಂದು ತಿಳಿಸಿದೆ.
ಈ ಉನ್ನತ ಮಟ್ಟದ ಮಾತುಕತೆಯಲ್ಲಿ ಭಾರತ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಮತ್ತು ನಿರ್ಮಲಾ ಸೀತಾರಾಮನ್ ಹಾಗೂ ಅಮೆರಿಕದ ಪರವಾಗಿ ವಿದೇಶಾಂಗ ಕಾರ್ಯದರ್ಶಿ ಮೈಕೆಲ್ ಆರ್ ಪಾಂಪಿಯೋ ಭಾಗವಹಿಸಲಿದ್ದಾರೆ.
.
ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಬಾಂಧವ್ಯ ಬಲವರ್ಧನೆಯ ಹೊಸ ಮಾದರಿಯ ಮಾತುಕತೆ ಇದಾಗಿದೆ. ಭಾರತ ಮತ್ತು ಅಮೆರಿಕದ ವಿದೇಶಾಂಗ ಸಚಿವರು ಹಾಗೂ ರಕ್ಷಣಾ ಸಚಿವರು ಜಂಟಿಯಾಗಿ ಮಾತುಕತೆ ನಡೆಸುತ್ತಾರೆ. ಭದ್ರತೆ, ಸೇನಾ ಸಹಕಾರ, ಹಾಗೂ ವಾಣಿಜ್ಯ-ವ್ಯಾಪಾರ ವೃದ್ಧಿ ಚರ್ಚೆಗೆ ಮುಖ್ಯ ವಿಷಯಗಳಾಗಿರುತ್ತವೆ.