ದೇಶ

ಹಿಮಾಚಲ ಪ್ರದೇಶ : 1968 ರಲ್ಲಿ ನಡೆದಿದ್ದ ವಿಮಾನ ದುರಂತದಲ್ಲಿ ಬಲಿಯಾದವರ ದೇಹ ಪತ್ತೆ

Nagaraja AB

ಶಿಮ್ಲಾ: 50 ವರ್ಷಗಳ ನಂತರ ಹಿಮಾಚಲ ಪ್ರದೇಶದ  ಡಾಕಾ ಗ್ರೇಸಿಯರ್ ವಾಯುನೆಲೆಯಲ್ಲಿ 1968 ರಲ್ಲಿ  ನಡೆದಿದ್ದ ವಾಯುಪಡೆ ವಿಮಾನ ದುರಂತದಲ್ಲಿ ಮೃತಪಟ್ಟವರ ದೇಹಗಳು ಪತ್ತೆಯಾಗಿವೆ. ಪರ್ವತಾರೋಹಿಣಿಗಳು  ಜುಲೈ 1 ರಂದು  ಈ ದೇಹಗಳು ಹಾಗೂ ವಿಮಾನದ ಭಾಗಗಳನ್ನು  ಪತ್ತೆ ಮಾಡಿದ್ದಾರೆ.

1968 ಫೆಬ್ರವರಿ 7 ರಂದು ಭಾರತೀಯ ವಾಯುಪಡೆಯ  ಎ ಎನ್ -12  ವಿಮಾನ 102 ಸಿಬ್ಬಂದಿಯನ್ನೊತ್ತು  ಚಂಡಿಗಢದಿಂದ ಲೇಹ್ ವರೆಗೂ ಹಾರಾಟ ನಡೆಸುತಿತ್ತು. ವಾಯುಗುಣ ವೈಫರೀತ್ಯದಿಂದಾಗಿ ಲೆಹ್   ಕಡೆಗೆ ಹೋಗುವ ನಿಟ್ಟಿನಲ್ಲಿ ಪೈಲಟ್ ಹಿಂದಕ್ಕೆ ವಿಮಾನವನ್ನು ತಿರುಗಿಸಿದ್ದಾರೆ. ಆ ಸಂದರ್ಭ ಹಠಾತ್ತನೆ  ವಿಮಾನ ನಾಪತ್ತೆಯಾಗಿತ್ತು.  ಬಳಿಕ ಹಿಮಾಚಲ ಪ್ರದೇಶದ ಲಹೌಲ್ ಬಳಿ ದುರಂತಕ್ಕೀಡಾಗಿತ್ತು.

2003ರಲ್ಲಿ   ಡಾಕಾ ಗ್ರೇಷಿಯರ್ ಬಳಿ ವಿಮಾನದ ಅವಶೇಷಗಳು ಪತ್ತೆಯಾಗಿದ್ದವು.  ಜುಲೈ 1 ರಂದು ಪರ್ವತಾರೋಹಿಣಿಗಳ ತಂಡ ಸ್ವಚ್ಛತಾ ಕಾರ್ಯ ಕೈಗೊಂಡಿದ್ದಾಗ ದೇಹಗಳು ಪತ್ತೆಯಾಗಿವೆ.  ವಿಮಾನದ ಕೆಲ ಭಾಗಗಳನ್ನು ಈ ತಂಡ ಕಂಡುಹಿಡಿದಿದೆ.
SCROLL FOR NEXT