ಅವಿಶ್ವಾಸ ನಿರ್ಣಯ ಚರ್ಚೆ: ಫೀಫಾ ವಿಶ್ವಕಪ್ ಫೈನಲ್ ಪಂದ್ಯದೊಂದಿಗೆ ಹೋಲಿಕೆ ಮಾಡಿದ ಶಿವಸೇನಾ
ಅವಿಶ್ವಾಸ ನಿರ್ಣಯದ ಮೇಲೆ ನಡೆದ ಚರ್ಚೆಯನ್ನು ಫೀಫಾ ವಿಶ್ವಕಪ್ ನ ಫೈನಲ್ ಪಂದ್ಯದೊಂದಿಗೆ ಶಿವಸೇನಾ ಹೋಲಿಕೆ ಮಾಡಿದೆ.
ಮುಂಬೈ: ಅವಿಶ್ವಾಸ ನಿರ್ಣಯದ ಮೇಲೆ ನಡೆದ ಚರ್ಚೆಯನ್ನು ಫೀಫಾ ವಿಶ್ವಕಪ್ ನ ಫೈನಲ್ ಪಂದ್ಯದೊಂದಿಗೆ ಶಿವಸೇನಾ ಹೋಲಿಕೆ ಮಾಡಿದೆ.
ಪ್ರಧಾನಿ ನರೇಂದ್ರಮೋದಿ ಫ್ರಾನ್ಸ್ ನಂತೆ ಗೆದ್ದು ಬಂದರೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕ್ರೂಯೇಷಿಯಾ ರೀತಿಯಲ್ಲಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಯಿತು ಎಂದು ಶಿವಸೇನಾ ಹೇಳಿಕೆ ನೀಡಿದೆ.
ರಾಹುಲ್ ಗಾಂಧಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದನ್ನು ರಾಜ್ಯಸಭಾ ಸಂಸದ ಶ್ಲಾಘಿಸಿದ್ದಾರೆ. ರಾಫೆಲ್ ನಡಾಲ್ ಒಪ್ಪಂದದಿಂದ ಹಿಡಿದು ರೈತರ ಸಂಕಷ್ಟದವರೆಗಿನ ಹಲವು ವಿಷಯಗಳಲ್ಲಿ ಕೇಂದ್ರಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.ಮೋದಿ ಭಾಷಣ ಪ್ರಧಾನಿಯಂತೆ ಇತ್ತು. ಮೋದಿ ಅವರನ್ನು ಬೇರೆ ಯಾರೊಂದಿಗೂ ಹೋಲಿಕೆ ಮಾಡಲು ಸಾಧ್ಯವಿಲ್ಲ ಆದರೆ, ರಾಹುಲ್ ಭಾಷಣ ಕೂಡಾ ಅದೇ ಮಟ್ಟದಲ್ಲಿತ್ತು ಎಂದು ಶಿವಸೇನಾ ಮುಖಂಡರು ಹೇಳಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.