ಪ್ರಧಾನಮಂತ್ರಿ ನರೇಂದ್ರ ಮೋದಿ 
ದೇಶ

2019 ಲೋಕಸಭಾ ಚುನಾವಣೆಯ ಬಲ ಪ್ರದರ್ಶನಕ್ಕೆ ವೇದಿಕೆಯಾದ 'ಅವಿಶ್ವಾಸ ನಿರ್ಣಯ'

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್'ಡಿಎ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಪಾಳೆಯ ಮಂಡಿಸಿದ್ದ ಅವಿಶ್ವಾಸ ನಿರ್ಣಯ 2019ರ ಲೋಕಸಭಾ ಚುನಾವಣೆಯ ಬಲ ಪ್ರದರ್ಶನಕ್ಕೆ ವೇದಿಕೆ ಎಂಬಂತೆ ಕಂಡು ಬಂದಿತ್ತು...

ನವದೆಹಲಿ; ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್'ಡಿಎ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಪಾಳೆಯ ಮಂಡಿಸಿದ್ದ ಅವಿಶ್ವಾಸ ನಿರ್ಣಯ 2019ರ ಲೋಕಸಭಾ ಚುನಾವಣೆಯ ಬಲ ಪ್ರದರ್ಶನಕ್ಕೆ ವೇದಿಕೆ ಎಂಬಂತೆ ಕಂಡು ಬಂದಿತ್ತು. 
ಮೋದಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ನಿರೀಕ್ಷೆಯಂತೆಯೇ ಸೋಲಾಗಿದ್ದು, ಈ ಮೂಲಕ 2019ನೇ ಲೋಕಸಭಾ ಚುನಾವಣೆಯಲ್ಲಿ ತನ್ನ ಬಲ ಏನೆಂಬುದನ್ನು ಎನ್'ಡಿಎ ಸಾಬೀತುಪಡಿಸಿದೆ. 
ಸಂಖ್ಯಾಬಲದ ಕೊರತೆ ಇದ್ದರೂ ತೆಲುಗು ದೇಶಂ ಹಾಗೂ ಕಾಂಗ್ರೆಸ್ ಆದಿಯಾಗಿ ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ್ದವು. ಸರ್ಕಾರವನ್ನು ಬೀಳುವುದಕ್ಕಿಂತಲೂ ಮುಖ್ಯವಾಗಿ ಆಂಧ್ರಪ್ರದೇಶ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡದೇ ಕೈಕೊಟ್ಟ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವುದು ತೆಲುಗುದೇಶಂ ಪಕ್ಷದ ಉದ್ದೇಶವಾಗಿತ್ತು.
ಇನ್ನು ಲೋಕಸಭಾ ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಇದು ಸಕಾಲ ಎಂದು ಕಾಂಗ್ರೆಸ್ ಸೇರಿದಂತೆ ಇತರೆ ಕೆಲ ಪಕ್ಷಗಳು ಈ ನಿರ್ಣಯವನ್ನು ಬೆಂಬಲಿಸಿದ್ದವು. 
ಶುಕ್ರವಾರ ವಿರೋಧ ಪಕ್ಷಗಳು ಮತ್ತು ಆಡಳಿತ ಪಕ್ಷಗಳ ನಡುವೆ ಲೋಕಸಭೆಯಲ್ಲಿ ಸತತ 12 ಗಂಟೆಗಳ ಕಾಲ ಭಾರೀ ಚರ್ಚೆಗಳು ನಡೆದಿತ್ತು. ಬೆಳಿಗ್ಗೆ 11ರಿಂದಲೇ ಆರಂಭವಾದ ಅವಿಶ್ವಾಸ ಕಲಾಪ, ಲೋಕಸಭೆ ಈ ವರೆಗೂ ಕಂಡು ಕೇಳರಿಯದ ವಿಚಿತ್ರ ನಡವಳಿಕೆಗಳಿಗೆ ಸಾಕ್ಷಿಯಾಗಿತ್ತು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಅವರು ರಾಜಕೀಯ ಎದುರಾಳಿ ಮೋದಿಯವರ ಕುರ್ಚಿ ಬಳಿಯೇ ತೆರಳಿ ಅಪ್ಪಿಕೊಂಡು ಆತ್ಮೀಯತೆ ತೋರಿದರು. ಮತ್ತೊಂದೆಡೆ ಸದನದಲ್ಲಿ ಕಣ್ಣು ಹೊಡೆಯುವ ಮೂಲಕ ಗಮನ ಸೆಳೆದರು. ಘಟಾನುಘಟಿ ನಾಯಕರ ಭಾಷಣದ ಬಳಿಕ ರಾತ್ರಿ ಪ್ರಧಾನಿ ಮೋದಿ ಮಾತನಾಡಿ, ಪ್ರತಿಪಕ್ಷಗಳ ಆರೋಪಗಳಿಗೆ ತಿರುಗೇಟು ನೀಡಿದರು. 
ಚರ್ಚೆ ಬಳಿಕ ನಿರ್ಣಯವನ್ನು ಮತಕ್ಕೆ ಹಾಕಲಾಗಿದ್ದು, ಅದು ಬಿದ್ದು ಹೋಯಿತು ಎಂದು ಸ್ಪೀಕರ್ ಘೋಷಣೆ ಮಾಡಿದರು. ಆದರೆ, ನಂತರ ವಿರೋಧ ಪಕ್ಷಗಳ ಬೇಡಿಕೆಯಂತೆ ನಿರ್ಣಯವನ್ನು ಮತಕ್ಕೆ ಹಾಕಲಾಯಿತು. ಈ ವೇಳೆ ಸದನದಲ್ಲಿ 451 ಸದಸ್ಯರು ಹಾಜರಿದ್ದರು. ವಿಪಕ್ಷಗಳ ನಿರ್ಣಯದ ವಿರುದ್ಧ 325 ಮತಗಳು ಚಲಾವಣೆಯಾಗಿದೆ  ಇನ್ನು ನಿರ್ಣಯದ ಪರ ಕೇವಲ 126 ಮತ ಚಲಾವಣೆಯಾಗಿದೆ. ಈ ಮೂಲಕ ಸರ್ಕಾರದ ವಿರುದ್ಧ ಟಿಡಿಪಿ ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಸೋಲಾಗಿದೆ. ಇನ್ನು ಬೆಂಬಲಿಸಿದ್ದ ಕಾಂಗ್ರೆಸ್ ಸೇರಿದಂತೆ ವಿರೋಧಪಕ್ಷಗಳಿಗೆ ಭಾರೀ ಮುಖಭಂಗವಾಗಿದೆ. ಬಿಜೆಪಿಯ ಕಟುಟೀಕಾಕಾರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದ ಶಿವಸೇನೆ, ಟಿಆರ್'ಎಸ್, ಒಡಿಶಾದ ಬಿಜೆಡಿ ಸದಸ್ಯರು ನಿರೀಕ್ಷೆಯಂತೆಯೇ ಗೈರು ಹಾಜರಾಗಿದ್ದರು. ಎಐಡಿಎಂಕೆ ಸದಸ್ಯರು ಸರ್ಕಾರದ ಪರವಾಗಿ ಮತ ಹಾಕಿರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 
ವಿಶೇಷವೆಂದರೆ ಎನ್'ಡಿಎ ಸರ್ಕಾರಕ್ಕೆ ನಿರೀಕ್ಷೆಗಿಂತಲೂ ಹೆಚ್ಚಿನ ಮತಗಳು ಬಿದ್ದಿದೆ. ಹಾಲಿ ಸದನದಲ್ಲಿ ಎನ್'ಡಿಎ ಬಲ 315 ಇತ್ತು. ಆದರೆ, ಮತದಾನದ ವೇಳೆ ಎನ್'ಡಿಎಗೆ 325 ಮತ ಚಲಾವಣೆಯಾಗಿದೆ. ಇದು ವಾಗ್ದಾಳಿಯ ಮೂಲಕ ಸರ್ಕಾರವನ್ನು ಕಟ್ಟಿಹಾಕಲು ಯತ್ನಿಸಿದ್ದ ವಿರೋಧ ಪಕ್ಷಗಳಿಗೆ ಆದ ದೊಡ್ಡ ಸೋಲೆಂದೇ ಬಣ್ಣಿಸಲಾಗುತ್ತಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT