ಚೆನ್ನೈ : ಕಂದನ್ ಚಾವಡಿ ಪ್ರದೇಶದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತದಿಂದ ಒಬ್ಬರು ಮೃತಪಟ್ಟಿದ್ದು, 17 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಅವಶೇಷಗಳಡಿಯಲ್ಲಿ ಹಲವು ಮಂದಿ ಸಿಲುಕಿರುವ ಸಾಧ್ಯತೆ ಇದ್ದು, ತೆರವು ಕಾರ್ಯಾಚರಣೆ ಮುಂದುವರೆದಿದೆ.
ಕಟ್ಟಡ ಕುಸಿತ ಪ್ರದೇಶದಿಂದ ಒಬ್ಬರ ಮೃತದೇಹವನ್ನು ಇಂದು ಪತ್ತೆಹಚ್ಚಲಾಗಿದೆ.ನಿರ್ಮಾಣ ಹಂತದ ಆಸ್ಪತ್ರೆಯ ಕಬ್ಬಿಣದ ಗಿರ್ಡಸ್ ಹಾಗೂ ಸ್ಕಾಪೊಲ್ಡ್ ಕಳಚಿ ಬಿದ್ದು ಈ ದುರಂತ ಸಂಭವಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ದುರಂತದ ಸುದ್ದಿ ತಿಳಿಯುತ್ತಿದ್ದಂತೆ 8 ಅಂಬ್ಯೂಲೆನ್ಸ್ ಮತ್ತು ಮೂರು ವಾಹನಗಳಲ್ಲಿ ಬಂದ ಅಗ್ನಿಶಾಮಕ ಸಿಬ್ಬಂದಿ ಅವಶೇಷಗಳ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಸ್ಥಳದಲ್ಲಿದ್ದ 20 ಜನರ ಪೈತಿ 17 ಮಂದಿಯನ್ನು ಬಂಧಿಸಲಾಗಿದೆ. ಈ ಪೈಕಿ ಐವರ ತೆಲೆಗೆ ತೀವ್ರ ಪೆಟ್ಟಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಚೆನ್ನೈ ಜಿಲ್ಲಾಧಿಕಾರಿ ಪೊನ್ನೈಯನ್ ತಿಳಿಸಿದ್ದಾರೆ.