ದೇಶ

ಜಿಎಸ್ ಟಿ ದರ ಮರುಪರಿಶೀಲನೆಗೆ ಕೇಂದ್ರ ಸರ್ಕಾರ ಮುಕ್ತ: ರಾಜನಾಥ್ ಸಿಂಗ್

Srinivas Rao BV
ನವದೆಹಲಿ: ಜು.21 ರಂದು ನಡೆದ ಜಿಎಸ್ ಟಿ ಸಭೆಯಲ್ಲಿ ಫ್ರಿಡ್ಜ್, ವಾಷಿಂಗ್ ಮಷೀನ್ ಸೇರಿದಂತೆ 88 ಗ್ರಾಹಕ ಕೇಂದ್ರಿತ ಉತ್ಪನ್ನಗಳ ಜಿಎಸ್ ಟಿ ದರವನ್ನು ಕಡಿಮೆ ಮಾಡಲಾಗಿದ್ದು, ಜಿಎಸ್ ಟಿ ದರ ಮರುಪರಿಶೀಲನೆಗೆ ಕೇಂದ್ರ ಸರ್ಕಾರ ಮುಕ್ತವಾಗಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.  
ಅಖಿಲ ಭಾರತೀಯ ಟ್ರೇಡರ್ಸ್ ಒಕ್ಕೂಟದಿಂದ ಆಯೋಜಿಸಲಾಗಿದ್ದ ನ್ಯಾಷನಲ್ ಟ್ರೇಡರ್ಸ್ ಕಾನ್ಕ್ಲೇವ್ ಕಾರ್ಯಕ್ರಮದಲ್ಲಿ ಮಾತನಾಡಿರುವ ರಾಜನಾಥ್ ಸಿಂಗ್, ಕಳೆದ 4  ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೈಗೊಂಡಿರುವ ಕ್ರಮಗಳು, ಭಾರತವನ್ನು ವಿಶ್ವದ ಟಾಪ್ ಆರ್ಥಿಕ ರಾಷ್ಟ್ರಗಳ ಪಟ್ಟಿಗೆ ಸೇರಿಸಲಿವೆ ಎಂದು ಹೇಳಿದ್ದಾರೆ. 
ಇತ್ತೀಚೆಗಷ್ಟೇ ಗ್ರಾಹಕ ಕೇಂದ್ರಿತವಾಗಿರುವ ಹಲವು ಉತ್ಪನ್ನಗಳ ಜಿಎಸ್ ಟಿ ದರವನ್ನು ಪರಿಷ್ಕರಣೆ ಮಾಡಲಾಗಿದೆ. ಇನ್ನೂ ಹಲವು ಉತ್ಪನ್ನಗಳ ತೆರಿಗೆ ದರವನ್ನು ಶೇ.5 ಕ್ಕೆ ಇಳಿಸಲಾಗಿದ್ದರೆ. ಮತ್ತೆ ಕೆಲವು ಉತ್ಪನ್ನಗಳಿಗೆ ವಿನಾಯ್ತಿ ನೀಡಲಾಗಿದೆ. ಜಿಎಸ್ ಟಿ ದರಗಳನ್ನು ಮತ್ತಷ್ಟು ಪರಿಷ್ಕರಣೆ ಮಾಡುವುದಕ್ಕೆ ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ. 
ಹೊಸ ತೆರಿಗೆ ವ್ಯವಸ್ಥೆಯಡಿಯಲ್ಲಿ ಒಟ್ಟಾರೆ 6.5 ಕೋಟಿ ವ್ಯಾಪಾರಿಗಳ ಪೈಕಿ ಸುಮಾರು 1.25 ಕೋಟಿ ವ್ಯಾಪಾರಿಗಳು ಈ ವರೆಗೆ ನೋಂದಣಿ ಮಾಡಿಕೊಂಡಿದ್ದಾರೆ. 2016-17 ರ ನವೆಂಬರ್ ವರೆಗೂ 1.15 ಕೋಟಿ ರೂಪಾಯಿ ರಿಟರ್ನ್ಸ್ ನ್ನು ಫೈಲ್ ಮಾಡಲಾಗಿದೆ ಎಂದು ರಾಜನಾಥ್ ಸಿಂಗ್ ಮಾಹಿತಿ ನೀಡಿದ್ದಾರೆ. 
SCROLL FOR NEXT