ಶ್ರೀನಗರ: ಉಗ್ರನ ಅಂತ್ಯ ಸಂಸ್ಕಾರದ ವೇಳೆ ಆಕಸ್ಮಿಕವಾಗಿ ನಡೆದ ಫೈರಿಂಗ್ ನಿಂದಾಗಿ ಓರ್ವ ನಾಗರಿಕ ಗಾಯಗೊಂಡಿರುವ ಘಟನೆ ಜಮ್ಮು-ಕಾಶ್ಮೀರದ ಕುಪ್ವಾರದಲ್ಲಿ ನಡೆದಿದೆ.
ಘಟನೆಯ ಪ್ರತ್ಯಕ್ಷದರ್ಶಿ ಈ ಬಗ್ಗೆ ಮಾಹಿತಿ ನೀಡಿದ್ದು, ಉಗ್ರ ಮುದಾಸಿರ್ ಭಟ್ ನ ಅಂತ್ಯ ಸಂಸ್ಕಾರದ ವೇಳೆ ನಡೆದ ಆಕಸ್ಮಿಕ ಫೈರಿಂಗ್ ನಿಂದಾಗಿ ಫೈಯಾಜ್ ಅಹಮದ್ ಕಾಲಿಗೆ ಗುಂಡೇಟು ತಗುಲಿದೆ ಎಂದು ಹೇಳಿದ್ದಾರೆ. ಭದ್ರತಾ ಸಿಬ್ಬಂದಿಗಳು ಉಗ್ರ ಮುದಾಸಿರ್ ಭಟ್ ಸೇರಿದಂತೆ ಇನ್ನೂ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದರು.