ದೇಶ

ಲೋಕಸಭೆಯಲ್ಲಿ ಅಧಿಕಾರಿಯ 'ಕಣ್ಗಾವಲು': ಮಲ್ಲಿಕಾರ್ಜುನ್ ಖರ್ಗೆ ಆರೋಪ

Lingaraj Badiger
ನವದೆಹಲಿ: ಲೋಕಸಭೆ ಕಲಾಪ ಸೋಮವಾರ ಸುಗಮವಾಗಿಯೇ ನಡೆಯುತ್ತಿತ್ತು. ಆದರೆ ಪ್ರಶ್ನೋತ್ತರ ಅವಧಿಯ ನಂತರ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಹಾಗೂ ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್ ಅವರು ಅಧಿಕಾರಿಯೊಬ್ಬರು ಕಲಾಪದ ಟಿಪ್ಪಣಿ ಮಾಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಗದಲ್ಲ ಸೃಷ್ಟಿಸಿದರು.
ಅಧಿಕಾರಿಗಳ ಗ್ಯಾಲರಿಯಲ್ಲಿರುವ ಅಧಿಕಾರಿಯೊಬ್ಬರು ಎದ್ದು ನಿಂತು ಸಂಸದರ ತಲೆ ಎಣಿಕೆ ಮಾಡುತ್ತಿರುವುದನ್ನು ಗಮನಿಸಿದರೆ ಲೋಕಸಭೆ 'ಕಣ್ಗಾವಲಿನಲ್ಲಿದೆ' ಎಂದು ಖರ್ಗೆ ಆರೋಪಿಸಿದರು.
ಈ ವೇಳೆ ಎಡರಂಗದ ಕೆ ಕರುಣಾಕರನ್ ಮತ್ತು ಪಿಕೆ ಶ್ರೀಮತಿ ಟೀಚರ್ ಸೇರಿದಂತೆ ಹಲವರು  ಖರ್ಗೆ ಅವರ ಬೆಂಬಲಕ್ಕೆ ನಿಂತರು.
ಅಧಿಕಾರಿಗಳ ಗ್ಯಾಲರಿಯಲ್ಲಿರುವ ಅಧಿಕಾರಿ ಸಂಸದೀಯ ವ್ಯವಹಾರಗಳ ಸಚಿವಾಲಯದವರು. ಅವರು ತಮ್ಮ ಕೆಲಸ ಮಾಡುತ್ತಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಅರ್ಜುನ್ ಮೇಘವಾಲ್ ಅವರು ಹೇಳಿದರು. 
ಅಧಿಕಾರಿಯ ಕಣ್ಗಾವಲಿನ ಬಗ್ಗೆ ತಾವು ಪರಿಶೀಲಿಸುವುದಾಗಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಧರಣಿನಿರತ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಭರವಸೆ ನೀಡಿದರು.
SCROLL FOR NEXT