ರಾಜನಾಥ್ ಸಿಂಗ್ 
ದೇಶ

1984 ರಲ್ಲಿ ಅತಿದೊಡ್ಡ ಸಾಮೂಹಿಕ ಹಲ್ಲೆಗಳು ಸಂಭವಿಸಿದ್ದವು -ರಾಜನಾಥ ಸಿಂಗ್

1984ರ ಸಿಖ್ ವಿರುದ್ಧದ ಹಿಂಸಾಚಾರದ ಸಂದರ್ಭದಲ್ಲಿ ದೊಡ್ಡ ಸಾಮೂಹಿಕ ಹಲ್ಲೆಗಳು ಸಂಭವಿಸಿದ್ದವು. ಈ ಬಗ್ಗೆ ನಾವು ಆತಂಕಗೊಂಡಿದ್ದೇವೆ ಎಂದು ರಾಜನಾಥ್ ಸಿಂಗ್ ಲೋಕಸಭೆಯಲ್ಲಿಂದು ಹೇಳಿದ್ದಾರೆ

ನವದೆಹಲಿ: ರಾಜಸ್ತಾನ ಆಳ್ವಾರ್ ಜಿಲ್ಲೆಯಲ್ಲಿ ಗೋವು ಕಳ್ಳನೆಂದು ಬಾವಿಸಿ ಮುಸ್ಲಿಂ ವ್ಯಕ್ತಿಯೊಬ್ಬರ ಮೇಲೆ ನಡೆದ ಸಾಮೂಹಿಕ ಹಲ್ಲೆ ಪ್ರಕರಣ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿಂದು ಪ್ರತಿಧ್ವನಿಸಿತ್ತು.

ಸರ್ಕಾರ ಸಾಮೂಹಿಕ ಹಲ್ಲೆಗೆ ಬೆಂಬಲಿಸುತ್ತಿದೆ. ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಪ್ರತಿಪಕ್ಷಗಳು ಲೋಕಸಭೆಯಲ್ಲಿ ಆರೋಪಿಸಿದವು.ಈ ಕುರಿತು ಕೇಂದ್ರ ಗೃಹ ಸಚಿವ  ರಾಜನಾಥ್ ಸಿಂಗ್ ಪ್ರತಿಕ್ರಿಯೆ ನೀಡಬೇಕೆಂದು ಆಗ್ರಹಿಸಿದವು.

ಈ ಸಂದರ್ಭ ಮಾತನಾಡಿದ ರಾಜನಾಥ್ ಸಿಂಗ್,  ಸಾಮೂಹಿಕ ಹಲ್ಲೆ  ಪ್ರಕರಣಗಳ ತನಿಖೆಗಾಗಿ  ಉನ್ನತ ಮಟ್ಟದ ತಂಡವನ್ನು  ರಚಿಸಲಾಗಿದೆ. ಒಂದು ವೇಳೆ ಅಗತ್ಯವಾದಲ್ಲೀ ಸಾಮೂಹಿಕ ಹಲ್ಲೆ ವಿರುದ್ಧದ ಕಾನೂನು ಜಾರಿಗೆ ಗಮನ ಹರಿಸಲಾಗುವುದು ಎಂದರು.

 ಇಂತಹ ಸಾಮೂಹಿಕ ಹಲ್ಲೆಗಳು ಇತ್ತೀಚಿಗೆ ಸಂಭವಿಸುತ್ತಿಲ್ಲ. ಹಲವು ವರ್ಷಗಳಿಂದಲೂ ನಡೆಯುತ್ತಾ ಬಂದಿದೆ. 1984ರ ಸಿಖ್ ವಿರುದ್ಧದ ಹಿಂಸಾಚಾರದ ಸಂದರ್ಭದಲ್ಲಿ ದೊಡ್ಡ ಸಾಮೂಹಿಕ ಹಲ್ಲೆಗಳು ಸಂಭವಿಸಿದ್ದವು. ಈ  ಬಗ್ಗೆ ನಾವು ಆತಂಕಗೊಂಡಿದ್ದೇವೆ ಎಂದು ರಾಜನಾಥ್ ಸಿಂಗ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್