ದೇಶ

ಚೀನಾದ ರಕ್ಷಣಾ ವೆಚ್ಚ ಭಾರತಕ್ಕಿಂತ 3 ಪಟ್ಟು ಹೆಚ್ಚು: ಕೇಂದ್ರ ಸಚಿವ

Lingaraj Badiger
ನವದೆಹಲಿ: ಚೀನಾದ ರಕ್ಷಣಾ ವೆಚ್ಚ ಭಾರತಕ್ಕಿಂತ ಮೂರು ಪಟ್ಟು ಹೆಚ್ಚಳವಾಗಿದೆ. ಆದರೆ ಜಿಡಿಪಿಯಲ್ಲಿ ಚೀನಾದ ರಕ್ಷಣಾ ಪಾಲು ಭಾರತಕ್ಕಿಂತ ಕಡಿಮೆ ಎಂದು ರಕ್ಷಣಾ ಖಾತೆ ರಾಜ್ಯ ಸಚಿವ ಸುಭಾಶ್ ಭಮ್ರೆ ಅವರು ಬುಧವಾರ ಲೋಕಸಭೆಗೆ ತಿಳಿಸಿದ್ದಾರೆ.
ಆದಾಗ್ಯೂ, ಚೀನಾದ ವಾರ್ಷಿಕ ರಕ್ಷಣಾ ವೆಚ್ಚದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಸ್ಟಾಕ್ ಹೋಮ್  ಇಂಟರ್ ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ (SIPRI) ಡೇಟಾಬೇಸ್ ಪ್ರಕಾರ, 2017ರಲ್ಲಿ ಚೀನಾದ ರಕ್ಷಣಾ ವೆಚ್ಚ 2,28,230 ಮಿಲಿಯನ್ ಡಾಲರ್ ಮೀಸಲಿಟ್ಟಿದೆ. ಭಾರತ ಕಳೆದ ವರ್ಷ 63,923 ಮಿಲಿಯನ್ ಡಾಲರ್ ಮೀಸಲಿಟ್ಟಿದೆ ಎಂದು ಭಮ್ರೆ ಅವರು ಪ್ರಶ್ನೋತ್ತರ ಅವಧಿಯಲ್ಲಿ ಲೋಕಸಭೆಗೆ ತಿಳಿಸಿದ್ದಾರೆ.
2017ರಲ್ಲಿ ಭಾರತ ಜಿಡಿಪಿಯಲ್ಲಿ ರಕ್ಷಣಾ ವೆಚ್ಚದ ಪಾಲು ಶೇ.2.5ರಷ್ಟಿದೆ. ಆದರೆ ಚೀನಾ ಜಿಡಿಪಿಯಲ್ಲಿ ಶೇ.19ರಷ್ಟು ವೆಚ್ಚ ಮಾಡಿದೆ ಎಂದು ಅವರು ಹೇಳಿದ್ದಾರೆ.
SCROLL FOR NEXT