ದೇಶ

ರಾಷ್ಟ್ರ ರಾಜಧಾನಿಯಲ್ಲಿ ಮಳೆಯ ಅಬ್ಬರ: ಜಲಾವೃತಗೊಂಡ ರಸ್ತೆಗಳಿಂದ ಜನ ಜೀವನ ತತ್ತರ

Shilpa D
ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಧಾರಾಕಾರ  ಮಳೆಯಾಗುತ್ತಿದ್ದು, ವರುಣನ ಅಬ್ಬರಕ್ಕೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ದೆಹಲಿ-ಎನ್​ಸಿಆರ್​ನಲ್ಲಿ ಬೆಳಗ್ಗೆಯಿಂದಲೇ ಭಾರೀ ಮಳೆಯಾಗಿದ್ದು, ಜನರು ಮನೆಯಿಂದ ಹೊರಬರಲು ಕಷ್ಟಪಡುವಂತೆ ಆಗಿದೆ.  ಇನ್ನು ತಗ್ಗು ಪ್ರದೇಶ, ಸ್ಲಂ ಸೇರಿದಂತೆ  ಅನೇಕ ಪ್ರದೇಶಗಳಲ್ಲಿ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.
ಬೆಳಂಬೆಳಗ್ಗೆಯಿಂದ ಸುರಿಯುತ್ತಿರುವ ಮಳೆಗೆ ರಸ್ತೆ ಸಂಪೂರ್ಣ ಜಲಾವೃತ್ತಗೊಂಡಿದ್ದು, ಕಚೇರಿ ಇತರೆ ಕೆಲಸಕ್ಕೆ ರಸ್ತೆಗಿಳಿದ ಜನರು ಟ್ರಾಫಿಕ್​ ಜಾಮ್​ ಮಧ್ಯೆ ಜನರು ಸಿಕ್ಕಿಕೊಂಡಿದ್ದಾರೆ.
ದೆಹಲಿಯಲ್ಲಿ, ತೇವಾಂಶ ಮಟ್ಟವು 88 ಪ್ರತಿಶತವಿದ್ದು.  ಮಳೆ ಮೋಡ  ಇಂದು ಕೂಡ ಮುಂದುವರೆಯಲಿದ್ದು, ಸಂಜೆ ವರೆಗೂ ಬಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.ಮಳೆಯಿಂದಾಗಿ ದೆಹಲಿ ಮೆಟ್ರೋ ಸೇವೆಯಲ್ಲಿ ವ್ಯತ್ಯಯವಾಗಿದೆ. 
SCROLL FOR NEXT