ದೇಶ

ಉತ್ತರಪ್ರದೇಶದಲ್ಲಿ ಮಹಾಮಳೆಗೆ ಒಂದೇ ದಿನ 27 ಬಲಿ!

Vishwanath S
ಲಖನೌ: ಉತ್ತರಪ್ರದೇಶದಾದ್ಯಂತ ಸುರಿಯುತ್ತಿರುವ ಮಹಾಮಳೆಗೆ ಒಂದೇ ದಿನ 27 ಮಂದಿ ಮೃತಪಟ್ಟಿರುವುದಾಗಿ ಉತ್ತರಪ್ರದೇಶ ಸರ್ಕಾರದ ವಕ್ತಾರ ಹೇಳಿದ್ದಾರೆ. 
ರಾಜ್ಯದಲ್ಲಿ ಎಡಬಿಡದೆ ಸುರಿಯುತ್ತಿರುವ ಮಹಾಮಳೆಗೆ ಆಗ್ರ, ಮೈನ್ಪುರಿ, ಮುಜಾಫರ್ನಗರ, ಕಾಸ್ಗಂಜ್, ಮೀರುತ್, ಬರೇಲಿ, ಕಾನ್ಪುರ್, ಮಥುರಾ, ಗಜಿಯಾಬಾದ್, ಹರ್ಪುರ್, ಜಾನ್ಸಿ, ರಾಯ್ ಬಲೇರಿ, ಜಲೌನ್ ಮತ್ತು ಜೌನ್ಪುರದಲ್ಲಿ ಒಟ್ಟಾರೆ 27 ಮಂದಿ ಮೃತಪಟ್ಟಿದ್ದು 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ವಕ್ತಾರರು ತಿಳಿಸಿದ್ದಾರೆ. 
ತುರ್ತು ರಕ್ಷಣಾ ಕಾರ್ಯವನ್ನು ಆರಂಭಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ನಿರ್ದೇಶಿಸಿದ್ದಾರೆ. ಇನ್ನು ಬಾಧಿತ ಪ್ರದೇಶಗಳಲ್ಲಿ ಸಿಲುಕಿರುವವರ ರಕ್ಷಣೆ ಹಾಗೂ ಮನೆ ಕಳೆದುಕೊಂಡಿರುವವರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ. 
ಮಹಾಮಳೆಯಿಂದಾಗಿ ಗಾಯಗೊಂಡಿರುವವರಿಗೆ ಸೂಕ್ತ ಚಿಕಿತ್ಸೆ ನೀಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಪರಿಹಾರ ಕಾರ್ಯದಲ್ಲಿ ಯಾವುದೇ ರೀತಿಯ ಭ್ರಷ್ಟತೆಯನ್ನು ಸಹಿಸಲಾಗದು ಎಂದು ಮುಖ್ಯಮಂತ್ರಿಗಳು ಎಚ್ಚರಿಸಿರುವುದಾಗಿ ವಕ್ತಾರರು ತಿಳಿಸಿದ್ದಾರೆ.
SCROLL FOR NEXT