ದೇಶ

ಜಿಡಿಪಿ ಉತ್ತಮವಾಗಿದ್ದರೂ, 'ಹ್ಯಾಪಿನೆಸ್ ರ‍್ಯಾಂಕಿಂಗ್‌' ನಲ್ಲಿ ಭಾರತ ಹಿಂದಿದೆ: ಪ್ರಣಬ್ ಮುಖರ್ಜಿ

Srinivasamurthy VN
ನವದೆಹಲಿ: ಭಾರತದ ಜಿಡಿಪಿ ದರ ಗಮನಾರ್ಹ ಅಭಿವೃದ್ಧಿ ಸಾಧಿಸಿರುವಂತೆಯೇ ವಿಶ್ವ 'ಹ್ಯಾಪಿನೆಸ್ ರ‍್ಯಾಂಕಿಂಗ್‌' ನಲ್ಲಿ ಭಾರತ ತುಂಬಾ ಹಿಂದಿದೆ ಎಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ಕೋಲ್ಕತಾದಲ್ಲಿ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಣಬ್ ಮುಖರ್ಜಿ, ಜಾಗತಿಕ  ಸಂತುಷ್ಠ ಅಥವಾ ಸಂತೋಷ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ 133ನೇ ಸ್ಥಾನ ಲಭಿಸಿದ್ದು, ಒಟ್ಟಾರೆ ಸಂತೋಷದ ಪಟ್ಟಿಯಲ್ಲಿ ಭಾರತ ತುಂಬಾ ಹಿಂದಿದೆ. ಜಿಡಿಪಿ ಅಭಿವೃದ್ಧಿ ದರ ಸಮಾಧಾನಕರವಾಗಿದ್ದರೂ, ಒಟ್ಟಾರೆ ಜೀವಿತ ವೆಚ್ಚದ ಸರಾಸರಿ ಏರಿಕೆಯಾಗಿದೆ. ಕಳೆದ ನಾಲ್ಕು ವರ್ಷಗಳ ಹಿಂದೆ 3.4ರಷ್ಟಿದ್ದ ಒಟ್ಟಾರೆ ಸರಾಸರಿ ವೆಚ್ಚದ ಪ್ರಮಾಣ 68ಕ್ಕೆ ಏರಿಕೆಯಾಗಿದೆ. ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಕುಂಠಿತವಾಗಿದೆ ಎಂದು ಹೇಳಿದ್ದಾರೆ.
ಅಂತೆಯೇ ಈ ಕಳಪೆ ಮಟ್ಟದ ಸೂಚ್ಯಂಕವು ಅಭಿವೃದ್ಧಿ ಕುರಿತು ಸರ್ಕಾರದ  ಕಾರ್ಯವೈಖರಿ ಮತ್ತು ದೂರದೃಷ್ಟಿಗೆ ಹಿಡಿದ ಕನ್ನಡಿಯಾಗಿದೆ. ಸರ್ಕಾರ ಆರ್ಥಿಕ ಅಭಿವೃದ್ಧಿಯ ಜೊತೆ ಜೊತೆಗೇ ಸಾಮಾಜಿಕ ಅಭಿವೃದ್ಧಿ ಮತ್ತು ಜನರ ಮಾನಸಿಕ ಯೋಗಕ್ಷೇಮದ ಕುರಿತೂ ಗಮನ ಹರಿಸಬೇಕು.  ಕೈಗಾರಿಕೋಧ್ಯಮ ಅಭಿವೃದ್ಧಿ ಕೂಡ ಮುಖ್ಯ ಎಂದು ಪ್ರಣಬ್ ಮುಖರ್ಜಿ ಅಭಿಪ್ರಾಯ ಪಟ್ಟಿದ್ದಾರೆ.
SCROLL FOR NEXT