ದೇಶ

ವೈಯುಕ್ತಿಕ ಖಾಸಗಿತನ ಅತಿಮುಖ್ಯ, ಯಾವುದೇ ಕಾರಣಕ್ಕೂ ಧಕ್ಕೆಯಾಗಬಾರದು: ಸಿಜೆಐ ದೀಪಕ್ ಮಿಶ್ರಾ

Srinivasamurthy VN
ನವದೆಹಲಿ: ವೈಯುಕ್ತಿತ ಖಾಸಗಿತನ ಅತಿಮುಖ್ಯವಾದದ್ದು, ಅದಕ್ಕೆ ಯಾವುದೇ ಕಾರಣಕ್ಕೂ ಧಕ್ಕೆಯಾಗದಬಾರದು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹೇಳಿದ್ದಾರೆ.
ದೆಹಲಿಯ ಎಂಸಿ ಸೆಟಲ್ವಾಡ್ ಮೆಮೋರಿಯಲ್ ಹಾಲ್ ನಲ್ಲಿ ಬಾರ್ ಅಸೋಸಿಯೇಷನ್ ಆಫ್ ಇಂಡಿಯಾ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು, 'ಸಂವಿಧಾನಾತ್ಮಕ ಹಕ್ಕುಗಳ ಆರೋಹಣ-ಪ್ರಗತಿಶೀಲ ಪ್ರಸ್ತಾಪ' ಎಂಬ ವಿಚಾರದ ಕುರಿತು ಮಾತನಾಡಿದರು. ಈ ವೇಳೆ ವೈಯುಕ್ತಿಕ ಖಾಸಗಿತನ ಸಂವಿಧಾನ ನಮಗೆ ನೀಡಿರುವ ಹಕ್ಕು. ಯಾವುದೇ ಕಾರಣಕ್ಕೂ ಅದಕ್ಕೆ ಧಕ್ಕೆ ಬರಬಾರದು. ಜಗತ್ತಿನಲ್ಲಿ ಸಂವಿಧಾನಾತ್ಮಕ ಹಕ್ಕುಗಳಿಗೆ ಚ್ಯುತಿ ಬರುವ ಯಾವುದೇ ಕ್ಷೇತ್ರವೂ ಇಲ್ಲ. ಸಂವಿಧಾನದ ಹಕ್ಕು ಮಾನವಹಕ್ಕಾಗಿದ್ದು, ಅದರ ಅನುಷ್ಠಾನ ಕೂಡ ಸಂವಿಧಾನಾತ್ಮಕವಾದದ್ದು ಎಂದು ಹೇಳಿದರು.
ಇದೇ ವೇಳೆ ಖಾಸಗಿತನ್ನಕ್ಕೆ ಯಾರೂ ಧಕ್ಕೆ ತರಬಾರದು ಎಂದು ಹೇಳಿದ ಮಿಶ್ರಾ, 'ನಾನು ಮನೆಯಲ್ಲಿರುವಾಗ ಯಾರೂ ಕೂಡ ನನ್ನ ಖಾಸಗಿ ತನಕ್ಕೆ ಧಕ್ಕೆ ತರಬಾರದು. ನಾನು ಓರ್ವ ವಕೀಲನಾಗಿದ್ದರೂ, ನನ್ನನ್ನು ಭೇಟಿ ಮಾಡಲು ಕೆಲ ನಿರ್ಬಂಧಗಳು ಅನುಮತಿಗಳಿರುತ್ತವೆ. ನನ್ನ ಸಮಯವನ್ನು ಇತರರ ಕೆಲಸಗಳಿಗಾಗಿ ನಾನು ವ್ಯರ್ಥ ಮಾಡಲು ಬಯಸುವುದಿಲ್ಲ. ಖಾಸಗಿ ತನವೇ ನನಗೆ ಮುಖ್ಯ ಎಂದು ಹೇಳಿದರು.
ಮಹಿಳೆಯರಿಗೆ ಪ್ರಾಧಾನ್ಯತೆ ನೀಡಬೇಕು
ಇದೇ ವೇಳೆ ಮಧ್ಯ ಪ್ರದೇಶ ಪ್ರಕರಣವನ್ನು ಉಲ್ಲೇಖಿಸಿ ಮಾತನಾಡಿದ ದೀಪಕ್ ಮಿಶ್ರಾ ಅವರು, ಪಂಚಾಯತ್ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ನೀಡಬೇಕು ಎಂಬ ಪ್ರಕರಣವೊಂದು ಬಂದಿತ್ತು. ವಾದದಲ್ಲಿ ಮಹಿಳೆಯಿಂದ ಆಡಳಿತ ನಿರ್ವಹಣೆ ಸಾಧ್ಯವಿಲ್ಲ. ಆಕೆ ತನ್ನ ಪತಿ ಮೇಲೆ ಅವಲಂಬಿತಳಾಗುತ್ತಾಳೆ ಎಂಬ ವಾದ ಕೇಳಿಬಂತು. ಆದರೆ ನಿಜ ಹೇಳಬೇಕು ಎಂದು ಮಹಿಳೆಯರು ಪುರುಷರಿಗಂತೆ ಮಾನಸಿಕ ಸಧೃಡರು. ಇದು ಸಾಕಷ್ಟು ಬಾರಿ ಸಾಬೀತಾಗಿದೆ ಎಂದು ಹೇಳಿದರು.
ಸಾಂವಿಧಾನಿಕ ಹಕ್ಕುಗಳ ರಕ್ಷಣೆಗೆ ಶಾಶ್ವತ ಪರಿಹಾರ ಮುಖ್ಯ. ಸಾಂವಿಧಾನಿಕ ಹಕ್ಕುಗಳು ಮತ್ತು ಮಾನವಹಕ್ಕುಗಳ ದೇಶದ ಬೆನ್ನೆಲುಬಾಗಿದ್ದು, ಯಾವುದೇ ಕಾರಣಕ್ಕೂ ಅವುಗಳ ಉಲ್ಲಂಘನೆಯಾಗಬಾರದು ಎಂದು ದೀಪಕ್ ಮಿಶ್ರಾ ಹೇಳಿದರು.
SCROLL FOR NEXT