ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಫೆಲ್ ಫೈಟರ್ ಜೆಟ್ ಒಪ್ಪಂದಕ್ಕಾಗಿ ಸಂಬಂಧಿಸಿ 20 ಬಿಲಿಯನ್ ಅಮೆರಿಕನ್ ಡಾಲರ್ (130,000 ಕೋಟಿ) ಮೌಲ್ಯದ ರಿಲಯನ್ಸ್ ಡಿಫೆನ್ಸ್ ಲೈಫ್ ಸೈಕಲ್ ಒಡಬಡಿಕೆ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಟ್ವಿಟ್ಟರ್ ನಲ್ಲಿ ರಾಹುಲ್ ಮೋದಿಯನ್ನು ಟೀಕಿಸಿದ್ದು "ಪ್ರಿಯ ಟ್ರೋಲರ್ ಗಳೇನನ್ನ ಹಿಂದಿನ ಟ್ವೀಟ್ ಗಾಗಿ ನಾನು ನಿಮ್ಮಲ್ಲಿ ಕ್ಷಮೆ ಕೇಳುವೆನು. ಅದರಲ್ಲಿ ನಾನು 56 ಇಂಚಿನ ಎದೆಯವರು ಆಫ್ ಸೆಟ್ ಗುತ್ತಿಗೆಗಾಗಿ 4 ಶತಕೋಟಿ ಡಾಲರ್ ಗಳನ್ನು ಪಡೆದುಕೊಂಡಿದ್ದಾರೆ ಎಂದು ಹೇಳಿದ್ದೆ. ಆದರೆ ಅಲ್ಲಿ ನಾನು ರಫೇಲ್ಡೀಲ್ ಗಾಗಿ 16 ಬಿಲಿಯನ್ ಯುಎಸ್ ಡಾಲರ್ ಗಳನ್ನು ಸೇರಿಸುವುದು ಮರೆತಿದ್ದೆ. ಇದನ್ನು ಸೇರಿಸಿದಾಗ ಒಟ್ಟಾರೆ 20 ಶತಕೋಟಿ ಡಾಲರ್ ನಿಜವಾದ ಲಾಭಾಂಶವಾಗಲಿದೆ" ಎಂದಿದ್ದಾರೆ.