ದೇಶ

ಚಂದ್ರಗ್ರಹಣ: ಶತಮಾನದ ದೀರ್ಘಾವಧಿಯ ಖಗೋಳ ಕೌತುಕವನ್ನು ಕಣ್ತುಂಬಿಕೊಂಡ ಜನತೆ

Srinivas Rao BV
ಬೆಂಗಳೂರು: ಶತಮಾನದ ಧೀರ್ಘಾವಧಿಯ ಖಗ್ರಾಸ ಚಂದ್ರಗ್ರಹಣ  ಜು.28 ರಂದು ನಡೆದಿದ್ದು ಖಗೋಳಶಾಸ್ತ್ರಜ್ಞರು, ಜನತೆ ಬಾನಂಗಳದಲ್ಲಿ ನಡೆದ ಶತಮಾನದ ಅಪರೂಪ ದೃಶ್ಯವನ್ನು ಕಣ್ತುಂಬಿಕೊಂಡಿದ್ದಾರೆ. 
11:54 ರ ವೇಳೆಗೆ ಪ್ರಾರಂಭವಾಗಿ ಮಧ್ಯರಾತ್ರಿ 1:40 ರ ಸುಮಾರಿಗೆ ಚಂದ್ರ ಕೆಂಪು ಬಣ್ಣಕ್ಕೆ ತಿರುಗಿತ್ತು. ಇದೇ ವೇಳೆ ಗ್ರಹಣ ಸಂಭವಿಸುವ ವೇಳೆಯಲ್ಲೇ ಚಂದ್ರನ ಬಳಿ ಮಂಗಳ ಗ್ರಹ ಹಾದು ಹೋಗಿದ್ದನ್ನೂ ಸಹ ಜನತೆ, ಖಗೋಳಶಾಸ್ತ್ರಜ್ಞರು ಕಣ್ತುಂಬಿಕೊಂಡಿದ್ದಾರೆ. ಈ ಅಪರೂಪದ ಚಂದ್ರಗ್ರಹಣವನ್ನು ಕಣ್ತುಂಬಿಕೊಳ್ಳಲು ನೆಹರು ತಾರಾಲಯದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಹಲವೆಡೆ ಜನರು ಈ ಖಗೋಳ ಕೌತುಕವನ್ನು ಕಣ್ತುಂಬಿಕೊಂಡರೆ ಮತ್ತೆ ಕೆಲವೆಡೆ ಧಾರ್ಮಿಕ ಆಚರಣೆಗಳ ಮೂಲಕ ಚಂದ್ರಗ್ರಹಣವನ್ನು ಆಚರಿಸಲಾಯಿತು. 

ಬ್ಲಡ್ ಮೂನ್ ಸಂಪೂರ್ಣ ಕೆಂಪು ಬಣ್ಣಕ್ಕೆ ತಿರುಗಿದಾಗ ಸೂರ್ಯ, ಭೂಮಿ ಮತ್ತು ಚಂದ್ರ ಒಂದೇ ಸಾಲಿನಲ್ಲಿ ಕಾಣಿಸಿಕೊಂಡಾಗ ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದಾಗ ಸ್ಪಷ್ಟವಾಗಿ ಗೋಚರಿಸಿತು. ಇದು ಆಸ್ಟ್ರೇಲಿಯಾ, ಏಷ್ಯಾ, ಯುರೋಪ್ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ವಿವಿಧ ಸಮಯಗಳಲ್ಲಿ ಸ್ಪಷ್ಟವಾಗಿ ಗೋಚರಿಸಿತು.

ಗ್ರಹಣದ ಒಟ್ಟು ಅವಧಿ 1 ಗಂಟೆ 43 ನಿಮಿಷಗಳಾಗಿತ್ತು. ಇಡೀ ವಿದ್ಯಮಾನ ಸುಮಾರು 4 ಗಂಟೆಗಳ ಕಾಲ ಇತ್ತು. ಮೋಡದ ಮರೆಯಿಂದ ಬ್ಲಡ್ ಮೂನ್ ಹೊರಗೆ ಕಾಣಿಸಿಕೊಂಡಾಗ ರಿಯೊ ಡಿ ಜನೈರೊದ ಜನರು ಹರ್ಷದಿಂದ ಕೇಕೆ ಹಾಕಿದರು. ಖಗೋಳಶಾಸ್ತ್ರಜ್ಞರಿಗೆ ಚಂದ್ರಗ್ರಹಣ ವೀಕ್ಷಿಸಲು ವ್ಯವಸ್ಥೆ ಕಲ್ಪಿಸಲಾಗಿತ್ತು.

ಆಫ್ರಿಕಾ, ಸೊಮಾಲಿಯಾ, ದಕ್ಷಿಣ ಸೂಡಾನ್ ಗಳಲ್ಲಿ ಸಹ ಬ್ಲಡ್ ಮೂನ್ ಗೋಚರಿಸಿತು. ನಾಸಾ ವೆಬ್ ಸೈಟ್ ಚಂದ್ರಗ್ರಹಣದ ನೇರ ಪ್ರಸಾರ ವ್ಯವಸ್ಥೆಯನ್ನು ಮಾಡಿತ್ತು.
ವಾಯುಮಂಡಲದ ಚದುರುವಿಕೆಯಿಂದ ಕೆಂಪು ಬೆಳಕು ವಾತಾವರಣದ ಮೂಲಕ ಹಾದುಹೋಗುತ್ತದೆ ಹಾದುಹೋಗಲು  ಮತ್ತು ಜ್ವಾಲಾಮುಖಿ ಸ್ಫೋಟಗಳು ಅಥವಾ ಕಾಡಿನಲ್ಲಿ ಬೆಂಕಿ ಉಂಟಾದರೆ ವಾತಾವರಣದ ಸಂಯೋಜನೆ ಬದಲಾಗುವುದರಿಂದ ಚಂದ್ರಗ್ರಹಣ ಉಂಟಾಗುತ್ತದೆ ಎಂದು ಖಗೋಳಶಾಸ್ತ್ರಜ್ಞ ರಾಯಲ್ ಅಬ್ಸರ್ವೇಟರಿ ಗ್ರೀನ್ವಿಚ್ನ ಹೇಳುತ್ತಾರೆ.

ಧೂಳಿನ ಪ್ರಮಾಣ ವಾತಾವರಣದಲ್ಲಿ ಹೆಚ್ಚಾದರೆ ಚಂದ್ರ ನಿಗದಿತವಾಗಿ ಕಡುಗೆಂಪು ಬಣ್ಣಕ್ಕೆ ತಿರುಗುತ್ತದೆ ಮತ್ತು ಅದು ಸೂರ್ಯಾಸ್ತಮಾನ ಮತ್ತು ಸೂರ್ಯೋದಯದ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಅವರು, 2003ರ ನಂತರ ಈ ವಾರ ಮಂಗಳ ಗ್ರಹ ಕೂಡ ಭೂಮಿಗೆ ಹತ್ತಿರವಾಗಲಿದ್ದು, ಹೆಚ್ಚು ದೊಡ್ಡದಾಗಿ ಮತ್ತು ಪ್ರಕಾಶಮಾನವಾಗಿ ಗೋಚರಿಸಲಿದೆ. ಇಂದು ಮಧ್ಯರಾತ್ರಿಯಲ್ಲಿ ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ಚಂದ್ರಗ್ರಹಣದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಉತ್ತರ ಅಮೆರಿಕಾದಲ್ಲಿ ಮಾತ್ರ ಚಂದ್ರಗ್ರಹಣ ಗೋಚರಿಸಲಿಲ್ಲ. ಮುಂದಿನ ವರ್ಷ ಜನವರಿ 21ರಂದು ಇಲ್ಲಿ ಕಾಣಿಸಿಕೊಳ್ಳಲಿದೆ ಎಂದು ನಾಸಾ ಹೇಳಿದೆ.

ನಾಸಾ ಸಂಸ್ಥೆ ಚಂದ್ರಗ್ರಹಣದ ನೇರ ಪ್ರಸಾರ ಮಾಡಿತ್ತು. ಮತ್ತು ಪ್ರಪಂಚದ ವಿವಿಧ ಭಾಗಗಳಲ್ಲಿ ಕಾಣಿಸಿಕೊಂಡ ಬಗೆಯನ್ನು ತೋರಿಸಿದೆ.
SCROLL FOR NEXT