ದೇಶ

ಪಾಕ್ ನೂತನ ಸರ್ಕಾರ ಸುರಕ್ಷಿತ, ಭಯೋತ್ಪಾದನೆ ಮುಕ್ತ ದಕ್ಷಿಣ ಏಷ್ಯಾಗಾಗಿ ಕೆಲಸ ಮಾಡುವ ವಿಶ್ವಾಸವಿದೆ: ಭಾರತ

Lingaraj Badiger
ನವದೆಹಲಿ: ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯ ಫಲಿತಾಂಶದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಭಾರತ, ಇಸ್ಲಾಮಾಬಾದ್ ನ ಹೊಸ ಸರ್ಕಾರ, ಸುರಕ್ಷಿತ, ಸ್ಥಿರ ಮತ್ತು ಭಯೋತ್ಪಾದನೆ ಹಾಗೂ ಹಿಂಸಾಚಾರ ಮುಕ್ತ ದಕ್ಷಿಣ ಏಷ್ಯಾಗಾಗಿ ರಚನಾತ್ಮಕವಾಗಿ ಕೆಲಸ ಮಾಡುವ ವಿಶ್ವಾಸ ವ್ಯಕ್ತಪಡಿಸಿದೆ.
ಪಾಕಿಸ್ತಾನ ಅಭಿವೃದ್ಧಿಯತ್ತ ಸಾಗಲಿ ಮತ್ತು ತನ್ನ ನೆರೆಯ ದೇಶಗಳೊಂದಿಗೆ ಶಾಂತಿಯುತವಾಗಿರಲಿ ಎಂದು ಭಾರತ ಬಯಸುವುದಾಗಿ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅವರು ಹೇಳಿದ್ದಾರೆ.
ಸಾರ್ವತ್ರಿಕ ಚುನಾವಣೆಯ ಮೂಲಕ ಪಾಕಿಸ್ತಾನ ಜನತೆ ಪ್ರಜಾಪ್ರಭುತ್ವವನ್ನು ಎತ್ತಿಹಿಡಿದಿದ್ದು ಅದನ್ನು ಭಾರತ ಸ್ವಾಗತಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಕಳೆದ ಜುಲೈ 25ರಂದು ನಡೆದ ಪಾಕ್ ಸಾರ್ವತಿಕ್ರ ಚುನಾವಣೆಯಲ್ಲಿ ರಾಜಕಾರಣಿ ಇಮ್ರಾನ್ ಖಾನ್ ಅವರ ಪಾಕಿಸ್ಥಾನ್‌ ತೆಹರೀಕ್‌ ಇ ಇನ್ಸಾಫ್(ಪಿಟಿಐ) 116 ಸ್ಥಾನಗಳನ್ನು ಪಡೆಯುವ ಮೂಲಕ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಮಾಜಿ ಕ್ರಿಕೆಟಿಗನೇ ಪಾಕ್ ಮುಂದಿನ ಪ್ರಧಾನಿಯಾಗುವುದು ಬಹುತೇಕ ಖಚಿತವಾಗಿದೆ.
SCROLL FOR NEXT