ಸೈನಾ ನೆಹ್ವಾಲ್, ಕಿಡಂಬಿ ಶ್ರೀಕಾಂತ್ 
ದೇಶ

ವಿಶ್ವ ಚಾಂಪಿಯನ್ ಶಿಪ್: ಸೈನಾ ನೆಹ್ವಾಲ್, ಕಿಡಂಬಿ ಶ್ರೀಕಾಂತ್ ಗೆಲುವು

ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆಯರಾದ ಸೈನಾ ನೆಹ್ವಾಲ್ ಹಾಗೂ ಕಿಡಂಬಿ ಶ್ರೀಕಾಂತ್ ಅವರು ಚೀನಾದಲ್ಲಿ ....

ನಾನ್ ಜಿಂಗ್: ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆಯರಾದ ಸೈನಾ ನೆಹ್ವಾಲ್ ಹಾಗೂ ಕಿಡಂಬಿ ಶ್ರೀಕಾಂತ್ ಅವರು ಚೀನಾದಲ್ಲಿ ನಡೆಯುತ್ತಿರುವ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಗೆಲುವಿನ ಶುಭಾರಂಭ ಮಾಡಿದ್ದಾರೆ.
ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಈ ಮುಂಚೆ ಬೆಳ್ಳಿ ಹಾಗೂ ಕಂಚು ಗೆದ್ದಿರುವ ಸೈನಾ, ಇಂದು ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಎರಡನೆ ಸುತ್ತಿನಲ್ಲಿ ಟರ್ಕಿಯ ಅಲಿಯೆ ಡೆಮಿರ್ಬಗ್‌ ಅವರ ವಿರುದ್ಧ 21–17, 21–8 ಅಂತರದಿಂದ ಗೆಲುವು ಸಾಧಿಸಿದ್ದಾರೆ. ಮೊದಲ ಸುತ್ತಿನಲ್ಲಿ ಸೈನಾಗೆ 'ಬೈ' ಲಭಿಸಿತ್ತು.
ಸೈನಾ ನೆಹ್ವಾಲ್ ಅವರು ಪ್ರಿ ಕ್ವಾರ್ಟರ್ ಫೈನಲ್ ನಲ್ಲಿ ಥಾಯ್ಲೆಂಡ್ ನ ರಚಾನೋಕ್ ಇಂಟನಾನ್ ಅವರ ವಿರುದ್ಧ ಸೆಣಸಲಿದ್ದಾರೆ.
ಇನ್ನು ಪುರುಷರ ಸಿಂಗಲ್ಸ್ ನಲ್ಲಿ ಭಾರತದ ಕಿಡಂಬಿ ಶ್ರೀಕಾಂತ್ ಅವರು ಐರ್ಲೆಂಡ್ ನ ನಾಟ್ ಗ್ಯುಯನ್ ಅವರ ವಿರುದ್ಧ 21-15, 21-16ರ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಮುಂದಿನ ಸುತ್ತಿನಲ್ಲಿ ಶ್ರೀಕಾಂತ್, ಸ್ಪೇನ್ ನ ಪ್ಯಾಬ್ಲೊ ಅಬಿಯನ್ ಅವರ ವಿರುದ್ಧ ಸೆಣಸಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತಮಿಳುನಾಡು ಮತ್ತು ಬಂಗಾಳ ಸೇರಿದಂತೆ 5 ರಾಜ್ಯಗಳ ಚುನಾವಣಾ ದಿನಾಂಕ ಪ್ರಕಟಿಸಿದ ಚುನಾವಣಾ ಆಯೋಗ!

ಎರಡೆರಡು ಅತ್ಯಾಚಾರ ಆರೋಪ: ಗುಟ್ಟಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ RCB ವೇಗಿ ಯಶ್ ದಯಾಳ್!

ಕರ್ನಾಟಕ ಉಪ ಚುನಾವಣೆ: ಜೋರಾದ ಟಿಕೆಟ್​​ ಫೈಟ್​​, 'ಕೈ-ಕಮಲ' ಕುತೂಹಲ, ಮೇಟಿ, ಶಾಮನೂರು ಕುಟುಂಬಸ್ಥರಿಗೆ ಮಣೆ?

ಕರ್ನಾಟಕ ಉಪ ಚುನಾವಣೆ: ಬಾಗಲಕೋಟೆ, ದಾವಣಗೆರೆ ದಕ್ಷಿಣದಲ್ಲಿ ಏಪ್ರಿಲ್ 9ರಂದು ಮತದಾನ, ಮೇ 4 ಫಲಿತಾಂಶ

Cricket: 'ಕ್ರಿಕೆಟ್​ನ ಮೌಲ್ಯಗಳನ್ನೇ ನಿರ್ನಾಮ ಮಾಡಿದ್ದಾರೆ': ವಿವಾದಿತ ರನೌಟ್ ಕುರಿತು ಅಮಿರ್ ಆಕ್ರೋಶ

SCROLL FOR NEXT