ನವದೆಹಲಿ: ಅಸ್ಸಾಂ ನಾಗರಿಕ ರಾಷ್ಟ್ರೀಯ ನೊಂದಣಿ (ಎನ್ಆರ್ಸಿ) ಅಂತಿಮ ಕರಡು ಪಟ್ಟಿಯಿಂದ ಹೊರಗುಳಿದಿರುವ ಎಲ್ಲಾ 40 ಲಕ್ಷ ಜನರ ವಿರುದ್ಧ ಯಾವುದೇ ದಬ್ಬಾಳಿಕೆ ಕ್ರಮ ಅನುಸರಿಸಬಾರದು ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ತಿಳಿಸಿದೆ.
ಇದಲ್ಲದೆ ಪಟ್ಟಿಯಿಂದ ಹೊರಗುಳಿದವರ ಆಕ್ಷೇಪಣೆ, ಅಹವಾಲುಗಳ ನಿರ್ವಹಣೆಗಾಗಿ ನ್ಯಾಯೋಚಿತ ಮಾರ್ಗವನ್ನು ಕಂಡುಹಿಡಿಯಬೇಕೆಂದು ಕೋರ್ಟ್ ಸೂಚಿಸಿದೆ.. ಅಲ್ಲದೆ ಎನ್ಆರ್ಸಿ ಸಂಬಂಧ ಕೇಂದ್ರ ಅನುಸರಿಸುವ ಪ್ರಾಮಾಣಿಕ ಕಾರ್ಯಕಾರಿ ವಿಧಾನ (ಎಸ್ ಒಪಿ) ಕುರಿತಂತೆ ಒಂದು ವರದಿ ಸಲ್ಲಿಸುವಂತೆ ಸಹ ನ್ಯಾಯಾಲಯ ಕೇಂದ್ರಕ್ಕೆ ನಿರ್ದೇಶಿಸಿದೆ.
ನ್ಯಾಯಮೂರ್ತಿಗಳಾದ ರಂಜನ್ ಗೊಗೊಯ್ ಮತ್ತು ಆರ್ ಎಫ್ ನಾರಿಮನ್ ಅವರನ್ನೊಳಗೊಂಡ ಪೀಠವು ಕೇಂದ್ರವು ಆಗಸ್ಟ್ 16 ರೊಳಗೆ ಎಸ್ಒಪಿಯನ್ನು ಮಂಡಿಸಬೇಕು. ಆಕ್ಷೇಪಣೆ, ಅಹವಾಲುಗಳ ಸಲ್ಲಿಸುವವರಿಗಾಗಿ ಸ್ಥಳೀಯ ರಿಜಿಸ್ಟ್ರಾರ್ ಗಳು ನೋಟೀಸ್ ನೀಡಬೇಕು.ಅವರುಗಳಿಗೆ ನ್ಯಾಯೋಚಿತವಾಗಿರುವ ಅವಕಾಶ ಕಲ್ಪಿಸಬೇಕು ಎಂದು ಹೇಳಿದೆ.
ಹಜೀಲಾ ಮಾತನಾಡಿ ಆಗಸ್ಟ್ 30 ರಿಂದ ಸೆಪ್ಟೆಂಬರ್ 28 ರವರೆಗೆ ಎನ್ಆರ್ಸಿ ಮತ್ತು ಹೊರಗಿಡುವಿಕೆಗೆ ಸಂಬಂಧಿಸಿದಂತೆ ಹಕ್ಕು ಮತ್ತು ಆಕ್ಷೇಪಣೆಗಳು ಸಲ್ಲಿಕೆಗೆ ಅವಕಾಶವಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಆಗಸ್ಟ್ 7 ರವರೆಗೆ ಎನ್ಆರ್ಸಿ ಪಟ್ಟಿಯಲ್ಲಿತಮ್ಮ ಹೆಸರು ಇದೆಯೆ, ಇಲ್ಲವೆ ನೋಡಲು ಜನರಿಗೆ ಅವಕಾಶ ಲಭಿಸುತ್ತದೆ ಎಂದು ಅವರು ಹೇಳಿದ್ದಾರೆ.
ಸಚಿವಾಲಯವು ಎಸ್ಒಪಿಯ ವಿಧಾನಗಳನ್ನು ರೂಪಿಸಲು ಸಿದ್ಧವಾಗಿದೆ ಎಂದಾದರೆ ಎಸ್ಒಪಿಯನ್ನು ನ್ಯಾಯಾಲಯದ ಮುಂದಿಡುವಂತೆ ಅಟಾರ್ನಿ ಜನರಲ್ ಅವರಿಗೆ ನ್ಯಾಯಪೀಠ ಹೇಳಿದೆ.
ರಾಜ್ಯ ನಾಗರಿಕರ ಪಟ್ಟಿಯಾದ ಎನ್ಆರ್ಸಿ ಎರಡನೇ ಮತ್ತು ಅಂತಿಮ ಕರಡು ನಿನ್ನೆ ಪ್ರಕ್ಕಟವಾಗಿದ್ದು ಇದರಲ್ಲಿ ಅಸ್ಸಾಂನ 3.29 ಕೋಟಿ ಅರ್ಜಿದಾರರಲ್ಲಿ 2.89 ಕೋಟಿ ಜನರ ಹೆಸರು ಪ್ರಕಟವಾಗಿತ್ತು.ಸುಮಾರು 40.07 ಲಕ್ಷ ಅಭ್ಯರ್ಥಿಗಳ ಹೆಸರು ಪಟ್ಟಿಯಿಂದ ಹೊರಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos