ಮಾರ್ಕಂಡೇಯ ಕಾಟ್ಜು-ಕರುಣಾನಿಧಿ 
ದೇಶ

ಕರುಣಾನಿಧಿ ಕುಟುಂಬದ ಆಸ್ತಿ ಬಗ್ಗೆ ಟ್ವೀಟ್ ಮಾಡಿ ವಿವಾದಕ್ಕೆ ಗುರಿಯಾದ ಮಾರ್ಕಂಡೇಯ ಕಾಟ್ಜು!

ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಕುಟುಂಬದ ಆಸ್ತಿ ಬಗ್ಗೆ ಟ್ವೀಟ್ ಮಾಡಿ ಸುಪ್ರೀಂಕೋರ್ಟ್ ಮಾಜಿ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು...

ನವದೆಹಲಿ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಕುಟುಂಬದ ಆಸ್ತಿ ಬಗ್ಗೆ ಟ್ವೀಟ್ ಮಾಡಿ ಸುಪ್ರೀಂಕೋರ್ಟ್ ಮಾಜಿ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಅವರು ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ. 
ಅನಾರೋಗ್ಯದಿಂದಾಗಿ ಕರುಣಾನಿಧಿ ಆಸ್ಪತ್ರೆಗೆ ಸೇರಿರುವ ಇಂತಹ ಸಂದರ್ಭದಲ್ಲಿ ಮಾರ್ಕಂಡೇಯ ಕಾಟ್ಜು ಅವರ ಈ ಟ್ವೀಟ್ ಇದೀಗ ಬಾರಿ ಚರ್ಚೆಗೆ ಕಾರಣವಾಗಿದೆ. 
ಕರುಣಾನಿಧಿ ರಾಜಕೀಯಕ್ಕೆ ಸೇರುವ ಮುನ್ನ ಇದ್ದ ಆಸ್ತಿ ಎಷ್ಟು ಹಾಗೂ ಆ ಬಳಿಕ ಆಸ್ತಿಯ ಮೊತ್ತ ಎಷ್ಟು? ಅವರ ಪತ್ನಿ, ಸ್ಟಾಲಿನ್, ಕನ್ನಿಮೊಳಿ, ಮಾರನ್ ಹಾಗೂ ಇನ್ನಿತರ ಕುಟುಂಬ ಸದಸ್ಯರ ಆಸ್ತಿಯ ಮೊತ್ತ ಈಗ ಎಷ್ಟಾಗಿದೆ? ಎಂದು ಕಾಟ್ಜು ಪ್ರಶ್ನಿಸಿದ್ದಾರೆ. 
ಇದಕ್ಕೆ ಡಿಎಂಕೆ ಪರ ಹಾಗೂ ವಿರೋಧದ ಅನೇಕ ರಿಟ್ವೀಟ್ ಗಳು ಬಂದಿವೆ. ಇದಲ್ಲದೆ ನಾನು ಈ ಪ್ರಶ್ನೆಯನ್ನು ಕೇಳುತ್ತಲೇ ಇರುತ್ತೇನೆ. ಇದಕ್ಕೆ ನಾಚಿಕೆ ಪಡುವ ಅಗತ್ಯಇಲ್ಲ. ಕರುಣಾನಿಧಿಯ ಆಸ್ತಿ ವಿವರವನ್ನು ತಿಳಿದುಕೊಳ್ಳಬೇಕು ಎಂದು ಕಾಟ್ಜು ಮತ್ತೊಂದು ಟ್ವೀಟ್ ಮಾಡಿದ್ದಾರೆ. 
ನೀವು ಕಾನೂನಿನ ಸೇವೆಯಲ್ಲಿರುವ ವೇಳೆ ಈ ಪ್ರಶ್ನೆಗಳನ್ನು ಕೇಳಬೇಕಿತ್ತು ಎಂದು ರಿಟ್ವೀಟ್ ಮಾಡಿದ್ದಾರೆ. ಇನ್ನು ಅನೇಕರು ಕರುಣಾನಿಧಿ ಆಸ್ತಿ ಹೆಚ್ಚಾಗಿರಬಹುದು. ಆದರೆ ಅವರು ರಾಜ್ಯವನ್ನು ಮುನ್ನಡೆಸಿದರು. ಈ ಸಮಯದಲ್ಲಿ ಅವರ ಉತ್ತಮ ಆರೋಗ್ಯವನ್ನು ನಾವು ಆಶಿಸಬೇಕೆಂದು ಕಮೆಂಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?