ಸುಷ್ಮಾ ಸ್ವರಾಜ್ 
ದೇಶ

ಮೇಡಮ್, ನಂದೇ ಮದುವೆ, ನನ್ನ ಪಾಸ್ ಪೋರ್ಟ್ ಕಳೆದುಹೋಗಿದೆ ಎಂದ ವ್ಯಕ್ತಿಗೆ ಸುಷ್ಮಾ ಸ್ವರಾಜ್ ಹೇಳಿದ್ದೇನು?

ಮುಂದಿನ ತಿಂಗಳು ತನ್ನ ವಿವಾಹಕ್ಕಾಗಿ ಭಾರತಕ್ಕೆ ಆಗಮಿಸಬೇಕಿದ್ದ ವ್ಯಕ್ತಿಯೊಬ್ಬ ಅಮೆರಿಕಾದಲ್ಲಿ ತನ್ನ ಪಾಸ್ ಪೋರ್ಟ್ ಕಳೆದುಕೊಂಡಿದ್ದು...

ನವದೆಹಲಿ: ಮುಂದಿನ ತಿಂಗಳು ತನ್ನ ವಿವಾಹಕ್ಕಾಗಿ ಭಾರತಕ್ಕೆ ಆಗಮಿಸಬೇಕಿದ್ದ ವ್ಯಕ್ತಿಯೊಬ್ಬ  ಅಮೆರಿಕಾದಲ್ಲಿ ತನ್ನ ಪಾಸ್ ಪೋರ್ಟ್ ಕಳೆದುಕೊಂಡಿದ್ದು, ವಿವಾಹ ಸಮಯಕ್ಕೆ ಪಾಸ್ ಪೋರ್ಟ್ ಕೊಡಿಸುವಂತೆ ಟ್ವಿಟ್ಟರ್ ನಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಬಳಿ ಮನವಿ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸುಷ್ಮಾ ಸ್ವರಾಜ್ ಸೂಕ್ತವಲ್ಲದ ಸಮಯದಲ್ಲಿ ನೀವು ಪಾಸ್ ಪೋರ್ಟ್ ಕಳೆದುಕೊಂಡಿದ್ದಿರೀ, ಆದರೆ ನಿಮ್ಮ ವಿವಾಹ ಸಮಯಗದೊಳಗೆ ನಿಮ್ಮ ಪಾಸ್ ಪೋರ್ಟ್ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.
ಆಗಸ್ಟ್ 13 ರಿಂದ 15 ರವರೆಗೆ ತಮ್ಮ ವಿವಾಹವಿದ್ದು, ಅಮೆರಿಕಾದ ವಾಷಿಂಗ್ಟನ್ ಡಿಸಿಯಲ್ಲಿ ಪಾಸ್ ಪೋರ್ಟ್ ಕಳೆದು ಕೊಂಡಿರುವುದಾಗಿ ದೇವತಾ ರವಿ ತೇಜಾ ಎಂಬವರು ಟ್ವೀಟ್ ಮಾಡಿದ್ದರು. ತತ್ಕಾಲ್ ಪಾಸ್ ಪೋರ್ಟ್ ಮಾಡಿಸಿಕೊಡುವಂತೆ ಸುಷ್ಮಾ ಬಳಿ ಮನವಿ ಮಾಡಿಕೊಂಡಿದ್ದರು. 
ಆ ವ್ಯಕ್ತಿಯ ಟ್ವೀಟ್ ಅನ್ನು ವಾಷಿಂಗ್ಟನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಟ್ವೀಟ್ ಗೆ ಟ್ಯಾಗ್ ಮಾಡಿರುವ ಸುಷ್ಮಾ ಸ್ವರಾಜ್ ಮಾನವೀಯತೆ ಆಧಾರದ ಮೇಲೆ ಅವರಿಗೆ ಪಾಸ್ ಪೋರ್ಟ್ ಕೊಡುವಂತೆ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಂಡ್ಯದ ಆದಿಚುಂಚನಗಿರಿ ಮಠದಲ್ಲಿ 9 ಸಂಕಲ್ಪಗಳನ್ನು ಕೈಗೊಳ್ಳುವಂತೆ ಪ್ರಧಾನಿ ಮೋದಿ ಜನತೆಗೆ ಕರೆ-Video

19ನೇ ವಯಸ್ಸಿಗೆ 180 ಅಪ್ರಾಪ್ತ ಬಾಲಕಿಯರ ಜೊತೆ ಸೆಕ್ಸ್; 350ಕ್ಕೂ ಹೆಚ್ಚು ಅಶ್ಲೀಲ ವೀಡಿಯೊ Viral, ತನ್ವೀರ್ ಅಹ್ಮದ್ ಯಾರು?

ತ್ರಿವರ್ಣ ಧ್ವಜ ಬಣ್ಣದ ರಿಬ್ಬನ್ ಕತ್ತರಿಸಲು ನಿರಾಕರಿಸಿದ Omar Abdullah, ಗೌರವಯುತವಾಗಿ ಬದಲು! Video

Sri Guru Bhairavaikya Mandir: ಆದಿಚುಂಚನಗಿರಿಯಲ್ಲಿ ಶ್ರೀ ಭೈರವೈಕ್ಯ ಮಂದಿರ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ, ಏನಿದರ ವಿಶೇಷತೆ?-Video

Cricket: ನನ್ನ ದೇಹದಲ್ಲಿ ಇನ್ನೂ ಚೂರುಗಳಿವೆ, ಸೈನಿಕರ ಮೇಲಿನ ದೃಷ್ಟಿಕೋನವೇ ಬದಲಾಯ್ತು : ಲಂಕಾ ಕ್ರಿಕೆಟಿಗರ ಮೇಲಿನ ಉಗ್ರದಾಳಿ ನೆನೆದ Kumar Sangakkara

SCROLL FOR NEXT