ದೇಶ

ಬೋಧ್ ಗಯಾ ಸ್ಫೋಟದ 5 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Srinivas Rao BV
ಪಾಟ್ನಾ: 2013ರ ಬೋಧ್ ಗಯಾ ಸರಣಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳಾಗಿದ್ದ ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯ 5 ಜನ  ಉಗ್ರರಿಗೆ ಎನ್ಐಎ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿದೆ. 
ಮೇ.25 ರಂದು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ಪ್ರಕಟಿಸಿದ್ದ ನ್ಯಾಯಾಲಯ  ಬಂಧಿತ ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಉಗ್ರರಾದ ಇಮ್ತಿಯಾಜ್ ಅನ್ಸಾರಿ, ಹೈದರ್ ಅಲಿ, ಮುಜಿಬ್ ಉಲ್ಲಾಹ್, ಒಮೇರ್ ಸಿದ್ದಿಕಿ ಮತ್ತು ಅಝರುದ್ದೀನ್ ಖುರೇಶಿ ಅವರು ವಿವಿಧ ಭಾರತೀಯ ದಂಡ ಸಂಹಿತೆ, ಕಾನೂನುಬಾಹಿರ ಚಟುವಟಿಕೆ (ತಡೆಗಟ್ಟುವಿಕೆ) ಕಾಯಿದೆ ಮತ್ತು ಸ್ಫೋಟಕ ಕಾಯಿದೆ ಅಡಿಯಲ್ಲಿ ದೋಷಿಗಳು ಎಂದು ತೀರ್ಪು ನೀಡಿತ್ತು. ಜೂ.1 ಕ್ಕೆ ಶಿಕ್ಷೆಯ ಪ್ರಮಾಣ ಘೋಷಣೆಯನ್ನು ನಿಗದಿಪಡಿಸಿತ್ತು. 
2013ರ ಜುಲೈ 7ರಂದು ಪವಿತ್ರ ಬೋದ್ ಗಯಾ ಯಾತ್ರಾ ಸ್ಥಳದಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿತ್ತು. ಈ ವೇಳೆ ಮೂವರು ಬೌದ್ಧಗುರುಗಳು ಸೇರಿದಂತೆ ಹಲವು ಯಾತ್ರಾರ್ಥಿಗಳು ಗಾಯಗೊಂಡಿದ್ದರು.
SCROLL FOR NEXT