ದೇಶ

ಆಧಾರ್ ಗುರಿ ತಲುಪದ ಸಿಬ್ಬಂದಿಗಳ ವೇತನಕ್ಕೆ ಕತ್ತರಿ?

Manjula VN
ನವದೆಹಲಿ; ಪ್ರತಿನಿತ್ಯ ಕನಿಷ್ಠ 16 ಜನರ ಆಧಾರ್ ಕಾರ್ಡ್ ಗಳನ್ನು ಬ್ಯಾಂಕ್ ಖಾತೆಗಳ ಜೊತೆಗೆ ಸಂಪರ್ಕಿಸದ ಸಿಬ್ಬಂದಿಗಳ ವೇತನ ಕಡಿತಗೊಳಿಸುವುದಾಗಿ ಸಿಬ್ಬಂದಿಗಳಿಗೆ ಖಾಸಗಿ ವಲಯದ ಬ್ಯಾಂಕ್ ಗಳು ಸೂಚನೆ ನೀಡಿವೆ ಎಂದು ತಿಳಿದುಬಂದಿದೆ. 
ಆಧಾರ್ ಸಂಪರ್ಕ ಕುರಿತ ಗುರಿ ಸಾಧಿಸಲು ವಿಫಲವಾದ ಸಿಬ್ಬಂದಿಗಳ ವೇತನವನ್ನು ಕಡಿತಗೊಳಿಸುವುದಾಗಿ ಬ್ಯಾಂಕ್ ಗಳು ಸಿಬ್ಬಂದಿಗೆ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ. 
ಯುಕೊ ಬ್ಯಾಂಕ್'ನ ಜೋಧ್ಪುರ ವಲಯ ಎಲ್ಲಾ ಶಾಖೆಗಳಿಗೆ ಪತ್ರೆ ಬರೆದಿದ್ದು, ದಿನಕ್ಕೆ 16 ಆಧಾರ್ ನೋಂದಣಿಯ ಗುರಿಯನ್ನು ಸಾಧಿಸುವಂತೆ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗುತ್ತಿದೆ. ಸಿಬ್ಬಂದಿಗಳು ಈ ಸೂಚನೆಯನ್ನು ತಪ್ಪಿದ್ದೇ ಆದರೆ, ಭಾರತದ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ವಿಧಿಸುವ ದಂಡವನ್ನು ವೇತನದಿಂದ ಕಡಿತ ಮಾಡಲಾಗುತ್ತದೆ ಎಂದು ಎಚ್ಚರಿಸಿದೆ. 
ಮೇ. 25 ರಂದು ಯುಕೊ ಬ್ಯಾಂಕ್ ಈ ಪತ್ರವನ್ನು ಬರೆದಿದ್ದು, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಸೂಚನೆ ಮೇಲೆ ಈ ಪತ್ರವನ್ನು ಬರೆಯಾಗಿದೆ ಎನ್ನಲಾಗುತ್ತಿದೆ. ಎಲ್ಲಾ ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ವಲಯದ ಬ್ಯಾಂಕ್ ಗಳಿಗೆ ಸಚಿವಾಲಯ ಏ.15 ಪತ್ರ ಬರೆದು, ಆಧಾರ್ ಗುರಿ ಸಾಧನೆಗೆ ಮೇ.31ರ ಗಡುವು ನೀಡಿದೆ ಎಂದು ಹೇಳಲಾಗುತ್ತಿದೆ. 
ಯುಕೋ ಬ್ಯಾಂಕ್'ನ ಜೋಧ್ಪುರ ವಲಯದ ಉಪಮುಖ್ಯಸ್ಥ ಎಸ್.ಕೆ.ಪಾಟ್ನಿ ಅವರು ಪತ್ರ ಕುರಿತ ಮಾಹಿತಿಯನ್ನು ದೃಢಪಡಿಸಿದ್ದಾರೆ. ಅಲ್ಲದೆ, ಸೂಚನೆಯನ್ನು ಸಮರ್ಥಿಸಿಕೊಂಡಿರುವ ಅವರು, ಇದು ಬೆದರಿಕೆಯಲ್ಲ ಎಂದು ಹೇಳಿದ್ದಾರೆ. 
ಇದಲ್ಲದೆ ಯೂಕೊ ಬ್ಯಾಂಕ್ ನಲ್ಲಿರುವ ಇತರೆ ಆಧಾರ್ ಕೇಂದ್ರಗಳೂ ಕೂಡ ಸೂಚನೆ ಕುರಿತು ದೃಢಪಡಿಸಿವೆ. ಕೇಂದ್ರ ಕಚೇರಿಯ ಸೂಚನೆಯನ್ನಷ್ಟೇ ಪಾಲನೆ ಮಾಡುತ್ತಿರುವುದಾಗಿ ಸಿಬ್ಬಂದಿಗಳೂ ಕೂಡ ಹೇಳಿಕೆ ನೀಡಿದ್ದಾರೆ. 
SCROLL FOR NEXT