ದೇಶ

ಸೀತೆಯನ್ನು ರಾಮನು ಅಪರಹಿಸಿದ್ದ! ಗುಜರಾತ್ ಪಠ್ಯಪುಸ್ತಕದಲ್ಲಿ ಮುದ್ರಣದೋಷದ ಎಡವಟ್ಟು

Raghavendra Adiga
ಅಹಮದಾಬಾದ್(ಗುಜರಾತ್): ಸೀತೆಯನ್ನು ರಾಮನು ’ಅಪಹರಿಸಿ’ ಕರೆದೊಯ್ದಿದ್ದ! ಹೀಗೊಂದು ವಿಚಾರ ಗುಜರಾತ್ ಪಠ್ಯಪುಸ್ತಕದಲ್ಲಿದೆ. 
ಗುಜರಾತಿನ 12ನೇ ತರಗತಿ ಪಠ್ಯಪುಸ್ತಕದಲ್ಲಿ "ರಾಮನೇ ಸೀತೆಯನ್ನು ಅಪಹರಣ ಮಾಡಿದ’ ಎಂದು ತಪ್ಪಾಗಿ ಮುದ್ರಿತವಾಗಿರುವ ಅಂಶ ಇದೀಗ ಬೆಳಕಿಗೆ ಬಂದಿದೆ.
ಸಂಸ್ಕೃತ ಭಾಷಾ ಪಠ್ಯಕ್ರಮದ ಇಂಗ್ಲಿಷ್ ಅನುವಾದದದಲ್ಲಿ ಈ ಪ್ರಮಾದ ಪತ್ತೆಯಾಗಿದ್ದು ಇದೊಂದು ಭಾಷಾಂತರ ದೋಷ.ಎಂದಿರುವ ಗುಜರಾತ್ ರಾಜ್ಯ ಶಾಲ್ಲಾ ಪಠ್ಯಪುಸ್ತಕ ರಚನಾ ಮಂಡಳಿ (ಜಿಎಸ್ಎಸ್ಟಿಬಿ) ಈ ಕುರಿತಂತೆ ತನಿಖೆ ಕೈಗೊಳ್ಳಲಾಗುತ್ತದೆ ಎಂದಿದೆ.
ಕಾಳಿದಾಸನ  ಮಹಾಕಾವ್ಯ 'ರಘುವಂಶಂ' ಬಗ್ಗೆ ಮೂಲಭೂತ ತಿಳುವಳಿಕೆಯನ್ನು ನೀಡುವ ಪಾಠದಲ್ಲಿ "ಸೀತೆಯನ್ನು ರಾಮ ಅಪಹರಿಸಿದಾಗ ಲಕ್ಷ್ಮಣ ರಾಮನಿಗೆ ತಿಳಿಸಿದ ಸಂದೇಶದ ವಿವರಣೆ ಹೃದಯಸ್ಪರ್ಶಿಯಾಗಿದೆ" ಎಂದು ಪಠ್ಯದಲ್ಲಿ ಬರೆಯಲಾಗಿದೆ.
ಈ ದೋಷಪೂರಿತ ಪಠ್ಯವು 12ನೇ ತರಗತಿ ಆಂಗ್ಲ ಮಾದ್ಯಮ ವಿದ್ಯಾರ್ಥಿಗಳ ಅಭ್ಯಾಸಕ್ಕೆ ನೀಡಿದ ಪಠ್ಯಪುಸ್ತಕದಲ್ಲಿದೆ.
''ತ್ಯಾಗ’ ಎನ್ನುವ ಪದಕ್ಕೆ”ಕಳೆದುಕೊಂಡ’ ಎಂದು ಅನುವಾದಿಸುವ ಬದಲು ’ಅಪಹರಿಸಿದ’ ಎಂದು ತಪ್ಪಾಗಿ ಅನುವಾದಿಸಲಾಗಿದೆ ಎಂದು ಜಿಎಸ್ಎಸ್ಟಿಬಿ ಕಾರ್ಯಕಾರಿ ಅಧ್ಯಕ್ಷ ನಿತಿನ್ ಪಠಾನಿ ಹೇಳಿದ್ದಾರೆ. ’ಸೀತೆಯನ್ನು ರಾಮನು ಕಳೆದುಕೊಂಡ’ ಎಂದು ವಾಕ್ಯರಚನೆ ಆಗಬೇಕಾಗಿತ್ತು ಆದರೆ ’ರಾಮನಿಂದ ಸೀತೆ ಅಪಹರಿಸಲ್ಪಟ್ಟಳು’ ಎಂದು ಮುದ್ರಿತವಾಗಿದೆ ಎಂದು ಅವರು ವಿವರಿಸಿದರು.
ಈ ಕುರಿತಂತೆ ವಿವರವಾದ ತನಿಖೆ ನಡೆಸಲಾಗುತ್ತದೆ, ತಪ್ಪಿತಸ್ಥರೆಂದು ಕಂಡುಬಂದರೆ ಭಾಷಾಂತರ ಕಾರ್ಯ ಮಾಡಿದ್ದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಜತೆಗೆ ಈ ಅಧ್ಯಾಯವನ್ನು ತರಗತಿಯಲ್ಲಿ ಬೋಧಿಸುವ ಶಿಕ್ಷಕರಿಗೆ ಈ ತಪ್ಪನ್ನು ತಿದ್ದಿಕೊಂಡು ಬೋಧಿಸಲು ಹೇಳಲಾಗುತ್ತದೆ ಎಂದು ಅವರು ಹೇಳಿದ್ದಾರೆ.
SCROLL FOR NEXT