ವಿಜಯ್ ರೂಪಾನಿ 
ದೇಶ

2019ರಲ್ಲಿ ಗುಜರಾತ್ ನ ಎಲ್ಲಾ 26 ಲೋಕಸಭಾ ಸ್ಥಾನಗಳು ಬಿಜೆಪಿ ಪಾಲಾಗಲಿದೆ: ವಿಜಯ್ ರೂಪಾನಿ

ಇತ್ತೀಚಿನ ಉಪಚುನಾವಣೆಗಳು ಮುಂದಿನ ಲೋಕಸಭೆ ಚುಇನಾವಣೆ ಮೇಲೆ ಯಾವ ಪರಿಣಾಮ ಬೀರುವುದಿಲ್ಲ. 2019 ರಲ್ಲಿ ಜನರು ಮತ್ತೆ ನರೇಂದ್ರ ಮೋದಿಯವರನ್ನೇ ಅಧಿಕಾರಕ್ಕೆ ತರಲಿದ್ದಾರೆ....

ಅಹಮದಾಬಾದ್(ಗುಜರಾತ್): ಇತ್ತೀಚಿನ ಉಪಚುನಾವಣೆಗಳು ಮುಂದಿನ ಲೋಕಸಭೆ ಚುಇನಾವಣೆ ಮೇಲೆ ಯಾವ ಪರಿಣಾಮ ಬೀರುವುದಿಲ್ಲ. 2019 ರಲ್ಲಿ ಜನರು ಮತ್ತೆ ನರೇಂದ್ರ ಮೋದಿಯವರನ್ನೇ ಅಧಿಕಾರಕ್ಕೆ ತರಲಿದ್ದಾರೆ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಹೇಳಿದ್ದಾರೆ.
ಸೈದ್ದಾಂತಿಕ ಭಿನ್ನತೆ ಇರುವ ಪಕ್ಷಗಳೆಲ್ಲ ಒಟ್ಟಾಗಿ ಸೇರಿದ್ದು ಇದು ಹೆಚ್ಚು ಕಾಲ ಉಳಿಯುವುದಿಲ್ಲ. ಅವರಲ್ಲಿ ಅನೇಕ ನಾಯಕರು ಪ್ರಧಾನಮಂತ್ರಿ ಹಿದ್ದೆಯ ಆಕಾಂಕ್ಷಿಗಳಿದ್ದಾರೆ.ನರೇಂದ್ರ ಮೋದಿ ಪ್ರಾಬಲ್ಯಕ್ಕೆ ಹೆದರಿ ಅವರೆಲ್ಲಾ ಒಟ್ಟು ಸೇರಿದ್ದಾರೆ ಎಂಡ್ಯು ಅವರು ಹೇಳಿದರು. ಇತ್ತೀಚಿನ ಉಪಚುನಾವಣೆ ಫಲಿತಾಂಶಗಳು ಅಷ್ಟೇನೂ ಪರಿಣಾಮ ಉಂಟು ಮಾಡುವುದಿಲ್ಲ, ಮುಂದಿನ ವರ್ಷ ಮತ್ತೊಮ್ಮೆ ಮೋದಿ, ಉತ್ತಮ ಆಡಳಿತ ಮತ್ತು ಜನ ಸ್ನೇಹಿ ನೀತಿಗಳಿಗೆ ಜನಬೆಂಬಲ ಸಿಗಲಿದೆ. ಗುಜರಾತ್ ನಲ್ಲಿ 22 ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ ರಾಜ್ಯದಲ್ಲಿ ಸ್ವಚ್ಚ ಆಡಳಿತ ನೀಡುತ್ತಾ ಸಾಗಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 26 ಲೋಕಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎಕ್ಸ್ ಪ್ರೆಸ್ ನ ರಿಚಾ ಶರ್ಮಾ ಅವರೊಂದಿಗೆ ನಡೆದ ಸಂಭಾಷಣೆಯಲ್ಲಿ ರೂಪಾನಿ ಈ ಅಭಿಪ್ರಾಯ ದಾಖಲಿಸಿದ್ದಾರೆ.
2019 ರಲ್ಲಿ ಬಿಜೆಪಿಯನ್ನು ಹಣಿಯಲು ವಿಪಕ್ಷಗಳು ಒಗ್ಗಟ್ಟಾಗಿದೆ, ಇದಕ್ಕೆ ನೀವೇನೆನ್ನುತ್ತೀರಿ?
ನರೇಂದ್ರ ಮೋದಿ ತುಂಬಾ ಶಕ್ತಿಯುತವಾದುದರಿಂದ ಪ್ರತಿಪಕ್ಷದವರು ಅವರಿಗೆ ಹೆದರಿದ್ದಾರೆ.ಅವರು ತಮ್ಮ ಸಿದ್ದಾಂತದಲ್ಲಿನ ಭಿನ್ನತೆಯ ಹೊರತಾಗಿ ಒಗ್ಗಟ್ಟಾಗಿದ್ದಾರೆ. ಬಡತನ ಮತ್ತು ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವುದು ಅತ್ಯಂತ ಮುಖ್ಯವಾದ ಸಂಗತಿ ಎಂದು ನಾವು ಹೇಳುತ್ತೇವೆ, ಆದರೆ ಅವರಿಗೆ ಮೋದಿಯನ್ನು ಕೆಳಗಿಳಿಸುವುದೇ ದೊಡ್ಡ ಗುರಿಯಾಗಿದೆ.ಭಾರತದ ಜನರೇನು ನಿರ್ಧರಿಸುತ್ತಾರೆ ನೋಡೋಣ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರು ಪ್ರಧಾನಿಯಾಗಲು ಸಿದ್ಧರಿದ್ದಾರೆ ಎಂದು ಹೇಳಿದ್ದಾರೆ?
2019 ರ ಚುನಾವಣೆ ಮೋದಿ ವರ್ಸಸ್ ರಾಹುಲ್ ಆಗಿರಲಿದೆ.ಎಂದು ಪ್ರತಿಯೊಬ್ಬರೂ ಭಾವಿಸಿದ್ದಾರೆ.ರಾಹುಲ್ ತಾನು ಪ್ರಧಾನಿಯಾಗುತ್ತೇನೆಂದು ಹೇಳುತ್ತಾರೆ. ಆದರೆ ಅವರ ಮಾತಿಗೆ ಅವರದೇ ಪಕ್ಷದಲ್ಲಿಯೂ, ಅವರ ಮಿತ್ರ ಪಕ್ಷದಲ್ಲಿಯೂ ವಿರೋಧವಿದೆ.
ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಬಂದ ನಂತರ ದೇವೇಗೌಡರು ಮತ್ತೆ ಪ್ರಧಾನಿಗಲಾಗುವ ಕನಸು ಕಾಣುತ್ತಿದ್ದಾರೆ.ಪ್ರತಿಪಕ್ಷದ ಅನೇಕ ನಾಯಕರು ಪ್ರಧಾನಿ ಹುದ್ದೆಯ ಆಕಾಂಕ್ಷಿಗಳಾಗಿದ್ದಾರೆ. ಆದರೆ ಮೋದಿ ಅವರ ಪ್ರಖ್ಯಾತಿ ದಿನ ದಿನಕ್ಕೆ ಹೆಚ್ಚುತ್ತಿದ್ದು ಜನ ಅವರಿಗೇ ಮತ ನೀಡಲಿದ್ದಾರೆ.
ಗುಜರಾತಿನಲ್ಲಿ ಕಾಂಗ್ರೆಸ್, ಬಿಜೆಪಿಗೆ ಕಠಿಣ ಸ್ಪರ್ಧೆ ಒಡ್ಡಿದೆ. ಇದು  2019 ರ ಮಹಾ ಚುನಾವಣೆ ಮೇಲೆ ಪರಿಣಾಮವಾಗಲಿದೆಯೆ?
ಪ್ರಧಾನಿ ಮೋದಿ ಅವರ ನೇತೃತ್ವದ ಕೊನೆಯ ನಾಲ್ಕು ವರ್ಷಗಳಲ್ಲಿ ಈ ಪ್ರವೃತ್ತಿ ಇತ್ತು. ಗುಜರಾತ್ ಹೊರತು ಎಲ್ಲ ಚುನಾವಣೆಗಳಲ್ಲಿ, ಈಗಿರುವ ಸರ್ಕಾರವನ್ನು ಬದಲಿಸಲು ಜನರು ನಿರ್ಧರಿಸಿದ್ದರಿಂದ ಜನಾದೇಶ ಸರ್ಕಾರದ ವಿರುದ್ಧವಾಗಿರುತ್ತಿತ್ತು. ಇದು ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಉತ್ತರಾಖಂಡ್, ಅಸ್ಸಾಂ, ಮಹಾರಾಷ್ಟ್ರ ಮತ್ತು ತ್ರಿಪುರದಲ್ಲಿ  ಸಹ ಘಟಿಸಿದೆ. ಆದರೆ ಗುಜರಾತಿನಲ್ಲಿ ಮಾತ್ರ ಮತ್ತೆ ಬಿಜೆಪಿ ಅಧಿಕಾರಕ್ಕೆ ಏರಿದೆ.
ಇನ್ನು ಕರ್ನಾಟಕದಲ್ಲಿ ಸಹ ಜನಾದೇಶ ಜೆಡಿಎಸ್-ಕಾಂಗ್ರೆಸ್ ನ ವಿರುದ್ಧವಾಗಿದೆ. ಆದರೆ ಅವರು ಸಮ್ಮಿಶ್ರ ಸರ್ಕಾರ ಮಾಡಿದ್ದಾರೆ.ರಾಜ್ಯದಲ್ಲಿ ಕಾಂಗ್ರೆಸ್ ಸ್ಥಾನಗಳು 122 ರಿಂದ 78ಕ್ಕೆ ಇಳಿದಿವೆ, ಇದರರ್ಥ ಜನರು ಅವರ ವಿರುದ್ಧ ಇದ್ದಾರೆ.
2019 ರಲ್ಲಿ ಗುಜರಾತ್ ನಲ್ಲಿ ಬಿಜೆಪಿ ಎಷ್ಟು ಸ್ಥಾನ ಗೆಲ್ಲಲಿದೆ?
2019 ರಲ್ಲಿ ನಾವು ಗುಜರಾತ್ ನ ಎಲ್ಲಾ  26 ಲೋಕಸಭಾ ಸ್ಥಾನಗಳನ್ನು ಗೆಲ್ಲುತ್ತೇವೆ. ಗುಜರಾತಿನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ಜನ  77 ಸ್ಥಾನಗಳನ್ನು ನೀಡುವ ಮೂಲಕ ಕಾಂಗ್ರೆಸ್ ಅನ್ನು ತಿರಸ್ಕರಿಸಿದ್ದಾರೆ. ಆದರೆ ಬಿಜೆಪಿ 101 ಸ್ಥಾನ ಗೆಲ್ಲುವ ಮೂಲಕ ಸರ್ಕಾರ ರಚನೆ ಮಾಡಿದೆ.ರಾಜ್ಯದಲ್ಲಿ 22 ವರ್ಷ ಬಿಜೆಪಿ ಆಳ್ವಿಕೆ ಇದ್ದು ಈ ಆದೇಶವು 27 ವರ್ಷಗಳವರೆಗೆ ವಿಸ್ತರಿಸಲಿದೆ.ಪಕ್ಷದ ಮತ ಹಂಚಿಕೆಯು ಶೇಕಡ 49.4 ಆಗಿದೆ, ಪ್ರತಿ ಎರಡು ವ್ಯಕ್ತಿಗಳಲ್ಲಿ ಒಬ್ಬರು ಬಿಜೆಪಿಗೆ ಮತ ಚಲಾಯಿಸಿದ್ದಾರೆ.
ಗುಜರಾತಿನ ಯುವ ನಾಯಕರಾದ ಹಾರ್ದಿಕ್ ಪಟೇಲ್,  ಜಿಗ್ನೇಶ್ ಮೆವಾನಿ ಅವರಂತಹವರು ರಾಜ್ಯದ ಯುವಜನತೆ ಬೆಂಬಲ ಗಳಿಸುತ್ತಿದ್ದಾರೆ?
ಅವರು ಕಾಂಗ್ರೆಸ್ ನೊಡನೆ ಬಹಿರಂಗವಾಗಿ ಸ್ಪರ್ಧಿಸಿದ್ದಾರೆ. ಇದು ಕಾಂಗ್ರೆಸ್ ನ ಪಿತೂರಿ. ಅವರೆಲ್ಲರೂ ಕಾಂಗ್ರೆಸ್ ಗೆ ಬಹಿರಂಗವಾಗಿ ಬೆಂಬಲ ನೀಡಿದರು. ಆದರೆ ಇದೆಲ್ಲದರ ಹೊರತಾಗಿಯೂ ಬಿಜೆಪಿ ಸರ್ಕಾರ ರಚಿಸಲು ಸಾಧ್ಯವಾಗಿದೆ.ಹಾಗೆಯೇ ಅವರೆಲ್ಲಾ ವೈಫಲ್ಯ ಅನುಭವಿಸಿದರು. ಇನ್ನು ಮುಂದೆ ಸಹ ಇದೊಂದು ದೊಡ್ಡ ಸಮಸ್ಯೆ ಆಗದು.
ಇತ್ತೀಚೆಗೆ ನಡೆದ ಬೆಳವಣಿಗೆಗಳಿಂದ ರಾಜ್ಯದ ದಲಿತ ಸಮುದಾಯ ಆಕ್ರೋಶಗೊಂಡಿದೆ.ಅವರು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ನಿಲ್ಲಬಹುದು?
ಜನರ ಅನುಕೂಲಕ್ಕಾಗಿ ಸರ್ಕಾರದ ತೀರ್ಮಾನ ಕೈಗೊಳ್ಳುವುದಕ್ಕೆ ನಾವೆಂದಿಗೂ ಸಿದ್ದರಿದ್ದೇವೆ.ಆದರೆ ಚುನಾವಣೆಯನ್ನು ಮನಸ್ಸಿನಲ್ಲಿಟ್ಟುಕೊಳ್ಳಲು ನಾವು ಕೆಲಸ ಮಾಡುವುದಿಲ್ಲ. ಚುನಾವಣೆಗಳು ನಡೆಯುತ್ತಿವೆ, ಆದರೆ ನಾವು ಕೇವಲ ಚುನಾವಣಾ ದೃಷ್ಟಿಯಿಂದ ಕೆಲಸ ಮಾಡಿದ್ದಾದರೆ ಸಾಕಷ್ಟು ಸಾಧನೆ ಮಾಡಲು ಅವಕಾಶವಾಗದು. ನಮ್ಮ ಜವಾಬ್ದಾರಿಯು ಗುಜರಾತಿನ  6.5 ಕೋಟಿ ಜನರಿಗೆ, ದಲಿತರಾಗಲಿ ಅಥವಾ ಯಾವುದೇ ಸಮುದಾಯದವರಾಗಿರಲಿ. ನಾವು ಯಾವಾಗಲೂ 'ಸಬ್ಕಾ ಸಾತ್ ಸಬ್ಕಾ ವಿಕಾಸ್'’ ಎನ್ನುವ ಘೋಷವಾಕ್ಯವನ್ನೇ ನಂಬಿದ್ದೇವೆ. ಆತ್ಮವಿಶ್ವಾಸದಿಂದ ಕೆಲಸ ಮಾಡಿದ್ದೇವೆ ಮತ್ತು ಕೆಲಸ ಮಾಡುತ್ತಿದ್ದೇವೆ.ಕೆಲವು ಅಹಿತಕರ ಘಟನೆಗಳು ನಡೆದಿರುವುದು ನಿಜ. ಆದರೆ ಆ ಸಂಬಂಧ ಅಪರಾಧಿಗಳ ವಿರುದ್ಧ ನಾವು ತ್ವರಿತ ಕ್ರಮ ಕೈಗೊಂಡಿದ್ದೇವೆ.
ಗುಜರಾತ್ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ, ನಿಮ್ಮ ಹಾಗೂ ನಿತಿನ್ ಪಟೇಲ್ ನಡುವಿನ ಸಂಬಂಧ ಹಳಸಿದೆ,ಇದಕ್ಕೆ ನಿಮ್ಮ ಅಭಿಪ್ರಾಯವೇನು?
ಅಂತಹ ಎಲ್ಲಾ ಸುದ್ದಿಗಳನ್ನು, ಊಹಾಪೋಹಗಳನ್ನು ಸೃಷ್ಟಿಮಾಡಲಾಗುತ್ತದೆ. ಅದರಲ್ಲಿ ಯಾವುದೇ ಸತ್ಯವಿಲ್ಲ. ನಿತಿನ್ ಭಾಯಿನಮ್ಮ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದಾರೆ, ನಾವು ಯಾವಾಗಲೂ ಒಟ್ಟಿಗೆ ಇದ್ದೇವೆ. ನಿತಿನ್ ಪಟೇಲ್ ಅವರಿಗೆ ಸಾರ್ವಜನಿಕ ಜೀವನ ಮತ್ತು ಆಡಳಿತದ ವ್ಯಾಪಕ ಅನುಭವ ಇದೆ. ಸಾರ್ವಜನಿಕ ನೀತಿ ನಿರೂಪಣೆ, ಕಠಿಣ ಸಮಸ್ಯೆ ನಿವಾರಣೆಗಾಗಿ ಅವರ ಅವಲೋಕನಗಳು ಮತ್ತು ಸಲಹೆಗಳಿಂದ ನಾವು ಹೆಚ್ಚು ಪ್ರಯೋಜನ ಪಡೆಯುತ್ತೇವೆ. ಅಭಿಪ್ರಾಯ ವ್ಯಕ್ತಪಡಿಸುವುದರಲ್ಲಿ ವ್ಯತ್ಯಾಸಗಳಿರುತ್ತದೆ, ಆದರೆ ಅದೇ ನಿರ್ಣಾಯಕವಾಗಿದೆ ಎಂದು ವ್ಯಾಖ್ಯಾನಿಸುವುದು ತಪ್ಪು. 
ರಾಜ್ಯವು ಉದ್ಯಮದ ಕೇಂದ್ರವಾಗಿದೆ ಆದರೆ 2011 ರ ಜನಗಣತಿಯ ಪ್ರಕಾರ, ಗುಜರಾತ್ನಲ್ಲಿ ಬಡತನ ದರವು ರಾಜಸ್ಥಾನ, ಉತ್ತರಾಖಂಡ್ ಮತ್ತು ಜಮ್ಮು ಮತ್ತು ಕಾಶ್ಮೀರಕ್ಕಿಂತ ಹೆಚ್ಚಾಗಿದೆ. ನೀವು ಇದನ್ನು ಹೇಗೆ ನಿಭಾಯಿಸುತ್ತೀರಿ?
ಬಡತನ ರೇಖೆಗಿಂತ ಕೆಳಗಿನವರನ್ನು ಗುರುತಿಸುವುದು ಹಳೆಯ ಕ್ರಮ.  ರಾಜ್ಯದಲ್ಲಿ 2011ರಲ್ಲಿ  ಸಾಮಾಜಿಕ ಆರ್ಥಿಕ ಜಾತಿ ಜನಗಣತಿಯನ್ನು ನಡೆಸಲಾಗಿದೆ.2011 ರ ಗುಜರಾತ್ ಮತ್ತು 2018 ರ ಗುಜರಾತ್ ನಡುವೆ ದೊಡ್ಡ ವ್ಯತ್ಯಾಸವಿದೆ.ನಾನು ಅರ್ಥ ಮಾಡಿಕೊಂಡಂತೆ, ನರೇಂದ್ರ ಮೋದಿ ಗುಜರಾತ್ ನಲ್ಲಿ 2011 ರವರೆಗೆ ಹಲವಾರು ಪ್ರಯೋಜನಕಾರಿ  ಸಾಮಾಜಿಕ-ಆರ್ಥಿಕ ಬದಲಾವಣೆಗಳನ್ನು ತಂದರು. ಇಂದು. ಬಡವರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ಸೇರಿ ಉತ್ತಮ ಯೋಜನೆ ಜಾರಿಗೊಳಿಸಿದೆ. ಬಡ ಕುಟುಂಬಗಳನ್ನು ನಿಭಾಯಿಸಲು ಗುಜರಾತ್ ಹೆಚ್ಚು ಕೇಂದ್ರೀಕೃತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!