ಡಿಎಂಕೆ ನಾಯಕ ಕರುಣಾನಿಧಿ 95ನೇ ಜನ್ಮ ದಿನ 
ದೇಶ

ಡಿಎಂಕೆ ನಾಯಕ ಕರುಣಾನಿಧಿ 95ನೇ ಜನ್ಮ ದಿನ: ಪ್ರಧಾನಿ ಮೋದಿ, ಗಣ್ಯರು, ಅಭಿಮಾನಿಗಳಿಂದ ಶುಭಾಶಯ

ದ್ರಾವಿಡ ಮುನ್ನೇತ್ರ ಕಳಗಂ ನಾಯಕ ಎಂ. ಕರುಣಾನಿಧಿ ಅವರಿಗೆ ಇಂದು 95ನೇ ಜನುಮ ದಿನ. ಈ ಶುಭ ಸಂದರ್ಭದಲ್ಲಿ ಪ್ರಧಾನಿ ಮೋದಿ ಸೇರಿದಂತೆ ರಾಷ್ಟ್ರದ ನಾನಾ ಗಣ್ಯರು, ಅಭಿಮಾನಿಗಳು....

ನವದೆಹಲಿ: ದ್ರಾವಿಡ ಮುನ್ನೇತ್ರ ಕಳಗಂ ನಾಯಕ ಎಂ. ಕರುಣಾನಿಧಿ ಅವರಿಗೆ ಇಂದು 95ನೇ ಜನುಮ ದಿನ. ಈ ಶುಭ ಸಂದರ್ಭದಲ್ಲಿ ಪ್ರಧಾನಿ ಮೋದಿ ಸೇರಿದಂತೆ ರಾಷ್ಟ್ರದ ನಾನಾ ಗಣ್ಯರು, ಅಭಿಮಾನಿಗಳು ಅವರಿಗೆ ಶುಭ ಹಾರೈಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಡಿಎಂಕೆ ಅಧಿನಾಯಕ ಕರುಣಾನಿಧಿಯವರಿಗೆ  ದೀರ್ಘ, ಆರೋಗ್ಯಕರ ಜೀವನ ದೊರೆಯಲೆಂದು ಹಾರೈಸಿದ್ದಾರೆ. ಅವರು ತಮ್ಮ ಟ್ವಿಟ್ಟರ್ ನಲ್ಲಿ ಕರುಣಾನಿಧಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.
"ಕಲೈನಾರ್ ಎಂ.ಕರುಣಾನಿಧಿ ಅವರಿಗೆ ಜನ್ಮದಿನದ ಶುಭಾಶಯಗಳು. ಬರಹಗಾರ, ಕವಿ, ಚಿಂತಕ ಮತ್ತು ಭಾಷಣಕಾರ, ಕರುಣಾನಿಧಿ  ಭಾರತದ ಹಿರಿಯ ರಾಜಕೀಯ ಮುಖಂಡರಲ್ಲಿ ಒಬ್ಬರಾಗಿದ್ದಾರೆ.ಅವರು ಸುದೀರ್ಘ ಮತ್ತು ಆರೋಗ್ಯಕರ ಜೀವನ ನಡೆಸಲಿ ಎಂದು ಆಶಿಸುತ್ತೇನೆ." ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಈ ಮಧ್ಯೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡಾ ಡಿಎಂಕೆ ಮುಖ್ಯಸ್ಥರಿಗೆ ಹುಟ್ಟು ಹಬ್ಬದಂದು ಶುಭ ಕೋರಿದ್ದು "ಕರುಣಾನಿಧಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು, ನಾನು ನಿಮ್ಮ ಒಳ್ಳೆಯ ಆರೋಗ್ಯ ಮತ್ತು ಸಂತೋಷಕ್ಕಾಗಿ ಪ್ರಾರ್ಥಿಸುತ್ತೇನೆ."ಎಂದು ಅವರು ಟ್ವೀಟ್ ಮಾಡಿದ್ದಾರೆ.
ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರುಸಹ ತಮ್ಮ ಬ್ಲಾಗ್ ಮೂಲಕ ತಮಿಳುನಾಡಿನ ಹಿರಿಯ ಮುಖಂಡರಿಗೆ ಶುಭ ಕೋರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಕೊನೆಗೂ ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್'ಗೆ ಮುಹೂರ್ತ ಫಿಕ್ಸ್; ನಾಳೆಯೇ ಮೀಸಲಾತಿ ಪಟ್ಟಿ ಪ್ರಕಟ

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ

ಹಣದುಬ್ಬರ ಶೇ.5.2; ಜನರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್? ಆಹಾರ, ಇಂಧನ ಬೆಲೆ ಏರಿಕೆ!

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ