ಮುಂಬೈ: ಮುಂಬೈ ನಲ್ಲಿ ಮುಂಗಾರು ಪೂರ್ವ ಮಳೆಯ ಹೊಡೆತ ಜೋರಾಗಿದ್ದು, ಇಬ್ಬರು ಮಕ್ಕಳು ಸೇರಿದಂತೆ ಒಟ್ಟು ಮೂವರು ವಿದ್ಯುತ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಪುರಸಭೆಯ ವಿಪತ್ತು ನಿರ್ವಹಣಾ ತಂಡದ ಪ್ರಕಾರ ಮೃತರನ್ನು ಅನಿಲ್ ಯಾದವ್(32) ಸಾರಾ ಖಾನ್(9) ಓಂಕಾರ್ ಫಾಡ್ಟೇರ್ (10) ಎಂದು ಗುರುತಿಸಲಾಗಿದೆ.
ಯಾದವ್ ಹಾಗೂ ಖಾನ್ ಇಬ್ಬರೂ ತುಂಡಾಗಿ ಬಿದ್ದಿದ್ದ ವಿದ್ಯುತ್ ವೈರ್ ಸಂಪರ್ಕಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ. ಓಂಕಾರ್ ಫಾಡ್ಟೇರ್ ಹಾಗೂ ಆತನ ಸ್ನೇಹಿತನಿಗೆ ಶಿವ್ ಕೃಪ ನಗರದಲ್ಲಿರುವ ರೈಲ್ವೆ ನಿಲ್ದಾಣದಲ್ಲಿ ವಿದ್ಯುತ್ ಶಾಕ್ ತಗುಲಿದೆ, ಓಂಕಾರ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರೆ, ಆತನ ಸ್ನೇಹಿತನಿಗೆ ತೀವ್ರವಾದ ಗಾಯಗಳುಂಟಾಗಿವೆ.