ಪುದುಚೇರಿ: ಪುದುಚೇರಿಯ ಮೂವರು ಬಿಜೆಪಿ ಶಾಸಕರನ್ನು ಇಂದು ಬಂಧಿಸಲಾಗಿದೆ. ಸ್ವಾಮಿನಾಥನ್, ಕೆ. ಜಿ. ಶಂಕರ್ ಮತ್ತು ವಿ. ಸೆಲ್ವಗಣಪತಿ ಬಂಧಿತ ಶಾಸಕರು.
ಈ ಮೂವರು ಶಾಸಕರನ್ನು ಕಳೆದ ವರ್ಷ ಲೆಪ್ಟಿನೆಂಟ್ ಗೌರ್ನರ್ ಕಿರಣ್ ಬೇಡಿ ವಿಧಾನಸಭೆಗೆ ನಾಮನಿರ್ದೇಶನಗೊಳಿಸಿದ್ದರು.
ಪುದುಚೇರಿಯ ಮುಖ್ಯಮಂತ್ರಿ ಅವರೊಂದಿಗೆ ಸಮಾಲೋಚನೆ ನಡೆಸದೆ ಈ ಶಾಸಕರನ್ನು ವಿಧಾನಸಭೆಗೆ ನಾಮನಿರ್ದೇಶನಗೊಳಿಸಿರುವುದನ್ನು ಪ್ರಶ್ನಿಸಿ ಶಾಸಕರಿ ಧನಲಕ್ಷ್ಮಿ ನಾರಾಯಣ್ ಹೈಕೋರ್ಟ್ ನಲ್ಲಿ ದೂರು ದಾಖಲಿಸಿದ್ದರು.