ಯೆಮೆನ್ ನಲ್ಲಿ ಸಿಲುಕಿದ್ದ 38 ಭಾರತೀಯರನ್ನು ರಕ್ಷಿಸಿದ ನೌಕಾಪಡೆ
ಯೆಮೆನ್ ನ ಸೊಕೊಟ್ರಾ ದ್ವೀಪದಲ್ಲಿ ಸೈಕ್ಲೋನ್ ಮೆಕೆನುವಿಗೆ ಸಿಲುಕಿಕೊಂಡಿದ್ದ 38 ಭಾರತೀಯರನ್ನು ಭಾರತೀಯ ನೌಕಾಪಡೆ ರಕ್ಷಿಸಿದೆ.
ನವದೆಹಲಿ: ಯೆಮೆನ್ ನ ಸೊಕೊಟ್ರಾ ದ್ವೀಪದಲ್ಲಿ ಸೈಕ್ಲೋನ್ ಮೆಕೆನುವಿಗೆ ಸಿಲುಕಿಕೊಂಡಿದ್ದ 38 ಭಾರತೀಯರನ್ನು ಭಾರತೀಯ ನೌಕಾಪಡೆ ರಕ್ಷಿಸಿದೆ.
NISTAR ಕಾರ್ಯಾಚರಣೆಯ ಭಾಗವಾಗಿ ಯೆಮೆನ್ ನಲ್ಲಿದ್ದ ಭಾರತೀಯರನ್ನು ನೌಕಾಪಡೆ ರಕ್ಷಿಸಿದ್ದು ಭಾರತಕ್ಕೆ ವಾಪಸ್ ಕರೆತಂದಿದೆ ಎಂದು ನೌಕಾಪಡೆ ವಕ್ತಾರರು ತಿಳಿಸಿದ್ದಾರೆ.
ಸಂತ್ರಸ್ತ ಭಾರತೀಯರಿಗೆ ತಕ್ಷಣವೇ ವೈದ್ಯಕೀಯ, ಆಹಾರ, ದೂರವಾಣಿ ಸೌಲಭ್ಯಗಳನ್ನು ಒದಗಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ನಂತರ ನೌಕಾಪಡೆ ತಂಡ ಪೋರ್ ಬಂದರ್ ನತ್ತ ಪ್ರಯಾಣ ಬೆಳೆಸಿದೆ. ಮೇ.24 ರಂದು ಸೊಕೊಟ್ರಾ ದ್ವೀಪದಲ್ಲಿ ಸೈಕ್ಲೋನ್ ಮೆಕೆನುವಿಗೆ ಭಾರತೀಯರು ಸಿಲುಕಿಕೊಂಡಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.